December 4, 2024

Bhavana Tv

Its Your Channel

ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆಯವರು ನಡೆಸಿದ ಅಣಕು ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿ

ಭಟ್ಕಳ : ದಿನಾಂಕ ೧೬ ಮತ್ತು ೧೭ರಂದು ಕೋಸ್ಟ್ ಗಾರ್ಡ್ ಹಾಗೂ ಕೋಸ್ಟಲ್ ಪೋಲಿಸ್ ವತಿಯಿಂದ ನಡೆಸಿದ ಸಾಗರ ಕವಚ ಅಣುಕು ಕಾರ್ಯಾಚರಣೆಯಲ್ಲಿ ದಿನಾಂಕ ೧೭ರಂದು ಬೆಳಿಗ್ಗೆ ೧:೩೦ ಸುಮಾರಿಗೆ ಸಮುದ್ರ ಮಾಗ್ರವಾಗಿ ನುಸುಳುತ್ತಿರುವ ಆರು ಜನ ಭಯೋತ್ಪಾದಕರನ್ನು ಬಂದಿಸುವಲ್ಲಿ ಭಟ್ಕಳ ಕರಾವಳಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕರಾವಳಿ ಪೊಲೀಸ್ ಅಧೀಕ್ಷಕರಾದ ಮಿಥುನ್ ಹೆಚ್.ಎನ್ ಐಪಿಎಸ್, ಭಟ್ಕಳ ಸಿಎಸ್‌ಪಿಯ ಪೊಲೀಸ್ ನಿರೀಕ್ಷಕರಾದ ಕುಸುಮಾಧರ ಕೆ. ಹಾಗೂ ಸಿಬ್ಬಂದಿ, ಕೆಎನ್ ಡಿ ಮತ್ತು ತಾಂತ್ರಿಕ ಸಿಬ್ಬಂದಿಯವರೊAದಿಗೆ ಖುದ್ದು ಹಾಜರಿದ್ದು ಬೋಟುಗಳನ್ನು ಪರಿಶೀಲನೆ ಮಾಡುತ್ತಿರುವಾಗ ಬೋಟ್ನಲ್ಲಿ ಬಂದ ೬ ಜನ ನಕಲಿ ಭಯೋತ್ಪಾದಕರನ್ನು ಬಂದಿಸಿರುತ್ತಾರೆ..

error: