April 20, 2024

Bhavana Tv

Its Your Channel

ನಿಸರ್ಗ ಚಂಡಮಾರುತದ ಎಫೆಕ್ಟ ಜಿಲ್ಲೆಯಲ್ಲಿ ಎರಡು ದಿನದಿಂದ ಅಬ್ಬರಿಸುತ್ತಿದೆ ಮುಂಗಾರು.

ಕಾರವಾರ: ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆ ಗುಡುಗು, ಸಿಡಿಲುಗಳಿಂದ ಆರ್ಭಟಿಸುತ್ತಿದ್ದು ಇದಕ್ಕೆ ನಿಸರ್ಗ ಚಂಡಮಾರುತದ ಪರಿಣಾಮ ಎಲ್ಲ ತಾಲೂಕಿನಲ್ಲಿ ಮಳೆ ಬರುತ್ತಿದೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು ಎರಡು ದಿನದ ಮಳೆಗೆ ಭೂಮಿ ತಂಪಾಯಿತು. ಕಾರವಾರ, ಅಂಕೋಲಾ, ಕುಮುಟಾ ಹೊನ್ನಾವರ, ಭಟ್ಕಳ, ಹಳಿಯಾಳ,ಮುಂಡಗೋಡ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಜೊಯಿಡಾ ತಾಲೂಕಿನ ಹಲವು ಭಾಗಗಳಲ್ಲಿ ಮಳೆ ಸುರಿದಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಬಿದ್ದಿರುವ ಮಳೆಯು ರೈತರಲ್ಲಿ ಹರ್ಷ ತರಿಸಿದೆ. ಮುಂಗಾರು ಪೂರ್ವದ ಮಳೆಯ ಆರ್ಭಟ ತುಸು ಜೋರಾಗಿಯೇ ಇದ್ದು ಗುಡುಗು, ಮಿಂಚುಗಳ ಜತೆಗೆ ಆರ್ಭಟಿಸಿದ ಸಿಡಿಲುಗಳ ಆರ್ಭಟದಿಂದ ಕರೆಂಟ್ ಇಲ್ಲದೇ ಗ್ರಾಮೀಣ ಭಾಗದವರು ಕತ್ತಲೆಯಲ್ಲಿಯೇ ರಾತ್ರಿ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಬಿದ್ದಿರುವ ಮಳೆಯು ಬತ್ತಿರುವ ಸಣ್ಣ ಹಳ್ಳಗಳಲ್ಲಿ ಒಂದಿಷ್ಟು ನೀರು ಸೇರುವಂತೆ ಮಾಡಿದೆ. ಕೆಲವೆಡೆ ಬತ್ತುತ್ತಿರುವ ಕೆರೆಗಳಿಗೆ ಜೀವ ಒದಗಿಸಿದೆ. ದನಕರುಗಳಿಗೆ ಮೇವಿನ ಸಮಸ್ಯೆ ನೀಗಿಸಿದೆ. ಮತ್ತೆ ಇದೇ ರೀತಿ ಒಂದೆರಡು ದಿನಗಳವರೆಗೆ ಮಳೆ ಮುಂದುವರಿದರೆ ಬರದ ಬೇಗೆ ನಿಜಕ್ಕೂ ಪರಿಹಾರವಾಗಲಿದೆ ಎಂದು ರೈತರು ಸಂತಸ ಪಡುತ್ತಿದ್ದಾರೆ.

error: