March 29, 2024

Bhavana Tv

Its Your Channel

ಭಟ್ಕಳ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಕಛೇರಿ ತಾತ್ಕಾಲಿಕ ಸೀಲ್ ಡೌನ್..!

ಭಟ್ಕಳ: ತಾಲೂಕಿನಲ್ಲಿ ಇಂದು ೧೪ ಮಂದಿಯಲ್ಲಿನ ಸೋಂಕು ಪತ್ತೆಯಾಗಿದೆ. ಅದರಲ್ಲಿಯೂ ತಾಲೂಕಿನ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಹಶಿಲ್ದಾರರ
ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಸೋಮವಾರದಂದು ಒಟ್ಟು ೧೪ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ತಾಲೂಕಿನ ಅಜಾದ ನಗರ ೪೧ ವರ್ಷದ ಪುರುಷ, ಸುಲ್ತಾನ್ ಸ್ಟ್ರೀಟನ ೫೨ ವರ್ಷದ ಪುರುಷ, ಮುಟ್ಟಳ್ಳಿಯ ೪೨ ವರ್ಷದ ಮಹಿಳೆ, ೬೬ ವರ್ಷದ ವೃದ್ಧೆ ಹಾಗೂ ೩೨ ವರ್ಷದ ಪುರುಷ, ಹೆಗ್ಲೆಯ ೪೪ ವರ್ಷದ ಪುರುಷ, ಗುಡ್ ಲಕ್ ರೋಡಿನ ೧೪ ವರ್ಷದ ಬಾಲಕ, ಶಿರಾಲಿಯ ೬೬ ವರ್ಷದ ವೃದ್ಧ ಹಾಗೂ ೬೦ ವೃದ್ಧೆ, ಕಾಸಿಯಾ ಸ್ಟ್ರೀಟನ ೫೧ ವರ್ಷದ ಪುರುಷ. ಹೊನ್ನೆಗದ್ದೆಯ ೩೯ ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ತಾಲೂಕಿನ ತಹಶೀಲ್ದಾರ್ ಕಚೇರಿಯ ೩೫ ವರ್ಷದ ಸಿಬ್ಬಂದಿ ಹಾಗೂ ಗ್ರಾಮೀಣ ಠಾಣೆಯ ಸೋಂಕಿತ ಪೇದೆಯ ಸಂಪರ್ಕ ದಲ್ಲಿ ಇದ ೩ ವರ್ಷದ ಗಂಡು ಮಗು ಹಾಗೂ ೧೭ ವರ್ಷದ ಯುವತಿವಲ್ಲಿ ಸೋಂಕು ಎಂದು ತಿಳಿದು ಬಂದಿದೆ.
ಈಗಾಗಲೇ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದೆ. ಕಛೇರಿ ಎಲ್ಲಾ ಸಿಬ್ಬಂದಿಗಳ ಗಂಟಲು ದ್ರವ ಪರೀಕ್ಷೆಗೆ ಕಳಿಸಿದು ಮಂಗಳವಾರ ಮದ್ಯಾಹ್ನ ತನಕ ಕಚೇರಿ ಸೀಲ್ ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ ಎನ್ ರವಿಚಂದ್ರನ್ ತಿಳಿಸಿದ್ದಾರೆ.

error: