April 19, 2024

Bhavana Tv

Its Your Channel

ಉತ್ತರ ಕನ್ನಡ ಪ್ರಸಿದ್ದ ತಾಣ ನೇತ್ರಾಣಿ ಗುಡ್ಡದಲ್ಲಿ ಜರುಗುವ ಜಟಕಾ ದೇವರ ಜಾತ್ರೆಗೆ ಹರಿದು ಬಂದ ಭಕ್ತ ‌ಜನಸಾಗರ

ಭಟ್ಕಳ: ಕರಾವಳಿ ಸಮುದ್ರದ ನಡುವೆ ಇರುವ ಪ್ರಸಿದ್ದ ತಾಣ ನೇತ್ರಾಣಿ ಗುಡ್ಡದಲ್ಲಿ ಜರುಗುವ ಜಟಕಾ ದೇವರ ಜಾತ್ರೆಗೆ ಭಕ್ತ ಸಾಗರವೆ ಹರಿದು ಬಂದಿದ್ದು ಸುಮಾರು ೨೦೦೦ಜನರು ಬುಧವಾರ ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ತಾಲೂಕಿನ ಮೀನುಗಾರರ ಧಾರ್ಮಿಕ ತಾಣವಾಗಿರುವ ನೇತ್ರಾಣಿ ಗಡ್ಡದಲ್ಲಿ ಜಟಕಾ ದೇವರ ಜಾತ್ರೆ ಬುಧವಾರ ವಿಜೃಂಭಣೆಯಿದ ಸಂಪನ್ನಗೊಡಿತು. ಭಟ್ಕಳದ ಬಂದರಿನ ಮೀನುಗಾರರ ಆರಾಧ್ಯ ದೇವರಾದ ಜಟಕಾ ದೇವರಿಗೆ ವರ್ಷಂಪ್ರತಿ ತೆರಳಿ ಪೂಜೆ ಸಲ್ಲಿಸುವದು ವಾಡಿಕೆ. ಆ ಪ್ರಕಾರ ಇಲ್ಲಿನಿಂದ ಸಾವಿರಾರು ಜನರು ಸುಮಾರು ೧೫ ಬೋಟ್‌ಗಳಲ್ಲಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ದೇವರ ದರ್ಶನಕ್ಕೆ ತೆರಳಿದ ಭಕ್ತರಿಗೆ ಬೋಟ್‌ನ ಮಾಲಕರು ಬೋಟನಲ್ಲಿಯೆ ಊಟ ತಯಾರಿಸಿ ನೀಡಿದರು. ತಿರುಮಲ, ಮಸ್ತö್ಯರಾಜ, ಮತ್ಸö್ಯಶ್ರೀ೨, ಸುಧೀಕ್ಷಾ ಸೇರಿ ಇತರೆ ೧೫ ಬೋಟ್‌ಗಳು ತೆರಳಿವೆ. ಅಲ್ಲಿ ಹಿಂದು ದರ್ಮದ ದೇವರು ಮಾತ್ರವಲ್ಲದೆ ಮುಸ್ಲಿಂ ಸಮುದಾಯದ ಗೋರಿ, ಕ್ರಿಶ್ಚಿಯನ್ ಸಮುದಾಯದ ಶಿಲುಬೆಯೂ ಇದೆ. ಜಾತ್ರೆಗೆ ತೆರಳಿದ ಭಕ್ತರು ಪ್ರತಿವರ್ಷಇತರ ಧರ್ಮಗಳ ದೇವರಿಗೂ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯ ಮೆರೆಯುತ್ತಿದ್ದಾರೆ.


ಹರಕೆಗಾಗಿ ಕುರಿ,ಕೋಳಿಗಳನ್ನು ಗುಡ್ಡದಲ್ಲಿ ಬಿಟ್ಟು ಬರಲಾಗುತ್ತದೆ.ಆದರೆ ಯಾವುದೇ ಕಾರಣಕ್ಕೂ ಇಲ್ಲಿನ ಕೋಳಿ,ಕುರಿಗಳನ್ನು ಹಿಡಿದು ತರುವಂತಿಲ್ಲ.ಒಂದೊಮ್ಮೆ ತಂದರೆ ಅಪಾಯ ತಪ್ಪಿದಲ್ಲ ಎನ್ನುವುದು ಮೀನುಗಾರರ ನಂಬಿಕೆಯಾಗಿದೆ.ಜಟ್ಟಿಗ ದೇವಸ್ಥಾನದ ಪಕ್ಕದಲ್ಲಿ ಶಿಲುಬೆಯಿದೆ.ಇದಕ್ಕೂ ಸಹ ಪೂಜೆ ನಡೆಯುತ್ತದೆ.ಮೀನುಗಾರರಿಗೆ ಅನೇಕ ಅವಘಡಗಳು ಎದುರಾದಾಗ ನೇತ್ರಾಣಿ ಜಟ್ಟಿಗನನ್ನು ಪ್ರಾರ್ಥಿಸಿ ಅಪಾಯದಿಂದ ಪಾರಾದ ಘಟನೆಗಳಿವೆ.ಉತ್ತರ ಕನ್ನಡ ಪ್ರಸಿದ್ದ ದೈವಸ್ಥಾನವಾದ ಸೋಡಿಗದ್ದೆ ಹಾಗೂ ನೇತ್ರಾಣಿ ಗುಡ್ಡಗಳ ನಡುವೆ ಸಂಬಂಧವಿದೆ ಎನ್ನುವುದು ಈ ಭಾಗದ ಹಿರಿಯರ ಅಭಿಪ್ರಾಯವಾಗಿದೆ.

error: