March 29, 2024

Bhavana Tv

Its Your Channel

ಹೆಬಳೆಯ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ ಐದನೆಯ ವರ್ಷದ ವರ್ಧಂತಿ ಉತ್ಸವ

ಭಟ್ಕಳ: ಹೆಬಳೆಯ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ ಐದನೆಯ ವರ್ಷದ ವರ್ಧಂತಿ ಉತ್ಸವ ನಡೆಯಿತು.ಪರಮಪೂಜ್ಯ ಶ್ರೀ ಶ್ರೀ ಶ್ರೀ ಸದ್ಯೋಜಾತ ಶಂಕರಾಶ್ರಮ ಮಹಾಸ್ವಾಮಿಗಳು, ಚಿತ್ರಾಪುರ ಮಹಾಸಂಸ್ಥಾನ ಇವರ ಕೃಪಾಶೀರ್ವಾದಗಳೊಂದಿಗೆ ಶ್ರೀ ಕಟ್ಟೆ ತಿಮ್ಮಣ್ಣ ಭಟ್ಟರ ವೈದಿಕತ್ವದಲ್ಲಿ ಶ್ರೀ ಶೇಡಬರಿಯ ನಿತ್ಯ ಪೂಜಾರಿಯವರ ಉಪಸ್ಥಿತಿಯಲ್ಲಿ ಮುಂಜಾನೆಯಿಂದ ರಾತ್ರಿಯವರೆಗೂ ಶ್ರೀ ಜಟಕಾ ಮಹಾಸತಿ ದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಮುಂಜಾನೆಯಿಂದಲೇ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ಕಂಕಣಧಾರಣೆ, ಪರಿಕಲಶಾಧಿ ಸ್ಥಾಪನೆ, ಆದಿವಾಸಾದಿ ಹೋಮಗಳು, ವಿಶೇಷವಾಗಿ ಶ್ರೀ ರುದ್ರಹೋಮ, ನವಚಂಡಿಕಾ ಹೋಮ, ನಾಗಬ್ರಹ್ಮ ಕಲಾವೃದ್ಧಿ ಕಲಶಾಭಿಷೇಕ ಹಾಗೂ ಬಲಿ ಉತ್ಸವಗಳು, ರಾಜೋಪಚಾರ ಸೇವೆ, ಮಹಾ ಪೂರ್ಣಾಹುತಿ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳು ಮಧ್ಯಾಹ್ನದವರೆಗೆ ನಡೆದವು. ನಂತರ ಬಂದಂತಹ ಎಲ್ಲಾ ಭಕ್ತಾದಿಗಳಿಗೂ ಕೂಡ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆದು ಎರಡು ಸಾವಿರಕ್ಕೂ ಅಧಿಕ ಭಕ್ತಾದಿಗಳು ಶ್ರೀ ದೇವರ ಪ್ರಸಾದಭೋಜನ ಸ್ವೀಕರಿಸಿ ಸಂತೃಪ್ತಭಾವಕ್ಕೆ ಒಳಗಾದರು.

ಅನೇಕ ಭಕ್ತಾದಿಗಳು ಅನ್ನದಾನಕ್ಕೆ ಅಕ್ಕಿ, ಕಾಯಿ, ಬೆಲ್ಲ ಹಾಗೂ ಹೊರೆಕಾಣಿಕೆಗಳನ್ನು ನೀಡುವುದರ ಮೂಲಕ ಸಾನಿಧ್ಯ ದೇವರುಗಳಿಗೆ ತಮ್ಮ ಸೇವೆಯನ್ನು ಅರ್ಪಿಸಿದರು.
ವಿಶೇಷವಾಗಿ ಶ್ರೀ ರುದ್ರಹೋಮ, ನವಚಂಡಿಕಾ ಹೋಮ, ನಾಗಬ್ರಹ್ಮ ಕಲಾವೃದ್ಧಿ ಕಲಶಾಭಿಷೇಕ ಸೇವೆಯನ್ನು ಮಾಡಿಸಿದಂತಹ ಭಕ್ತಾದಿಗಳಿಗೆ ಪ್ರತ್ಯೇಕ ಕೌಂಟರನ್ನು ತೆರೆದು ಅತ್ಯಂತ ಶಿಸ್ತುಬದ್ಧವಾಗಿ ಪ್ರಸಾದವನ್ನು ವಿತರಿಸಲಾಯಿತು.
ಸಾಯಂಕಾಲ ರಂಗಪೂಜೆ, ಭೂತಬಲಿ ಹಾಗೂ ಮಹಾ ಪ್ರಾರ್ಥನೆ ಕಾರ್ಯಕ್ರಮಗಳು ರಾತ್ರಿಯವರೆಗೂ ನಡೆದವು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ, ಸರ್ವ ಸದಸ್ಯರು, ದೀಪೋತ್ಸವ ಸಮಿತಿಯವರು, ಊರಿನ ಹಾಗೂ ಪರ ಊರಿನ ಅನೇಕ ಭಕ್ತಾದಿಗಳು ಹಾಜರಿದ್ದರು.

error: