April 26, 2024

Bhavana Tv

Its Your Channel

ದೈವಜ್ಞ ಬ್ರಾಹ್ಮಣರ ಬೆಳ್ಳಿ ರಥೋತ್ಸವ ಸಂಪನ್ನ

ಭಟ್ಕಳ : ಪಟ್ಟಣದ ದೈವಜ್ಞ ಬ್ರಾಹ್ಮಣರ ಶ್ರೀಗಣಪತಿ ಲಕ್ಷ್ಮೀ ವೆಂಕಟ್ರಮಣ ದೇವರ ಬೆಳ್ಳಿ ರಥೋತ್ಸವ ಕಾರ್ಯಕ್ರಮ ಬುಧವಾರ ವಿಜೃಂಭಣೆಯಿoದ ನೆರವೇರಿತು.
 ಫೆ.೨೩ರಂದು ಅಖಂಡ ಭಜನಾ ಕಾರ್ಯಕ್ರಮದಿಂದ ಪ್ರಾರಂಭಗೊoಡ ಉತ್ಸವ ಇಂದು ನಡೆಯುವ ಓಕುಳಿಯೊಂದಿಗೆ ಸಮಾಪ್ತಿಯಾಗಲಿದೆ. ರಥೋತ್ಸವದ ಅಂಗವಾಗಿ ಮಾ.೧ಮತ್ತು ೨ರಂದು ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ದೇವರ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬುಧವಾರ ಬೆಳ್ಳಿ ರಥೋತ್ಸವದ ಅಂಗವಾಗಿ ದೇವಾಲಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಭಕ್ತರು ರಥಕಾಣಿಕೆ ಅರ್ಪಿಸಿದರು. ರಥೋತ್ಸವ ಅಂಗವಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ನಡೆದ ರಥದ ಮೆರವಣಿಗೆಯಲ್ಲಿ ನೂರಾರು  ಭಕ್ತರು ಪಾಲ್ಗೊಂಡಿದ್ದರು.ಮೆರವಣಿಗೆಯಲ್ಲಿ ತಟ್ಟಿರಾಯ ಕುಣಿತ, ,
ಕಿಲ ಕುದುರೆ,ವಾದ್ಯಗೊಷ್ಟಿ ಹಾಗೂ ವಿವಿಧ ಬಗ್ಗೆಯ ವೇಷ ಭೂಷಣ ಜನಮನ ಸೆಳೆದವು.
ದೈವಜ್ಞ ಸಮಾಜದ ಅಧ್ಯಕ್ಷ ನಾಗರಜ ರಾಯ್ಕರ, ಶಾಸಕ ಸುನೀಲ ನಾಯ್ಕ, ಪುರಸಭಾ ಸದಸ್ಯ ರಾಘವೇಂದ್ರ ಶೇಟ್, ಪ್ರಮುಖರಾದ ಕೇದಾರ ಕೊಲ್ಲೆ, ಸಂದೀಪ ಶೇಟ್, ದಿನೇಶ ಶೇಟ್, ಮಾರುತಿ ಶೇಟ್, ನಾಗರಾಜ ಶೇಟ್,ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಇತರರು ಮೆರವಣಿಗೆಯಲ್ಲಿ ಇದ್ದರು.

error: