April 19, 2024

Bhavana Tv

Its Your Channel

21 ಸಾವಿರ ಘೋಷಣೆಗೆ ಮುಖ್ಯಂತ್ರಿಗಳಿಗೆ ಶಿಫಾರಸ್ಸು ಮಾಡಲು ಭಟ್ಕಳ ಗ್ರಾಮ ಸಹಾಯಕರ ಸಂಘ ದಿಂದ ಶಾಸಕ ಸುನೀಲ್ ನಾಯ್ಕ ಅವರಿಗೆ ಮನವಿ

ಭಟ್ಕಳ: ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 10450 ಜನ ಗ್ರಾಮ ಸಹಾಯಕರಿಗೆ 2021ರ ಆಯವ್ಯಯದಲ್ಲಿ ಕನಿಷ್ಠ ವೇತನ ರು. 21000 ಘೋಷಣೆ ಮಾಡುವಂತೆ ಮುಖ್ಯಂತ್ರಿಗಳಿಗೆ ಶಿಫಾರಸ್ಸು ಮಾಡಲು ಭಟ್ಕಳ ತಾಲೂಕು ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳು ಶಾಸಕ ಸುನೀಲ್ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
1978ನೇ ಸಾಲಿನಿಂದ ಕಂದಾಯ ಇಲಾಖೆಯಲ್ಲಿ 10450 ಗ್ರಾಮ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಹಾಲಿ ಮಾಸಿಕ ವೇತನ ರು. 12000 ಗಳನ್ನು ಮಾತ್ರ ಸರ್ಕಾರ ನೀಡುತ್ತಿದ್ದು, ಯಾವುದೇ ರೀತಿಯ ಸೇವಾ ಭದ್ರತೆ ನಮಗೆ ಇಲ್ಲ, ಈ ಹಣದಲ್ಲಿ ಜೀವನ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ
ಕಷ್ಟಕರವಾಗಿದೆ. 06-03-2020ರಂದು ಕನಿಷ್ಟ ವೇತನ ಜಾರಿ ಮಾಡುವಂತೆ ಮನವಿ ಮಾಡಿಕೊಂಡು 1 ವರ್ಷ ಕಳೆದರೂ ನಮ್ಮ ಬೇಡಿಕೆ ಈಡೇರಿಸಿಲ್ಲ, ಕಂದಾಯ ಇಲಾಖೆಯಿಂದ ನಮ್ಮ ಕಡತ ಶಿಫಾರಸ್ಸುಗೊಂಡು ಹಣಕಾಸು ಇಲಾಖೆಗೆ ರವಾನೆಯಾಗಿದ್ದು, ಇಲ್ಲಿಯೇ ಕಡತ ಬಾಕಿ ಇದೆ.ಗ್ರಾಮ ಸಹಾಯಕರ ಪರಿಸ್ಥಿತಿಯನ್ನು ವ ಕಂಡು 2021ರ ಆಯವ್ಯಯದಲ್ಲಿ ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ತಾಲೂಕಾಧ್ಯಕ್ಷ ಬಾಬು ನಾಯ್ಕ,ಉಪಾಧ್ಯಕ್ಷ ಮಂಜು ನಾಯ್ಕ, ಕಾರ್ಯದರ್ಶಿ ಮಂಜುನಾಥ ಎನ್ ನಾಯ್ಕ,ಉದಯ ನಾಯ್ಕ,ನಾಗರಾಜ್ ದೇವಡಿಗ್ ಇದ್ದರು.

error: