March 29, 2024

Bhavana Tv

Its Your Channel

ಭಟ್ಕಳ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮೋಹನ ನಾಯ್ಕ ಆಯ್ಕೆ

ಭಟ್ಕಳ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಮೋಹನ ನಾಯ್ಕ ಆಯ್ಕೆಯಾದರು.
ನೌಕಕರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಮೋಹನ ನಾಯ್ಕ ತಮ್ಮ ಪ್ರತಿಸ್ಪರ್ಥಿ ವೆಂಕಟೇಶ ನಾಯ್ಕ ಹಾಗೂ ಎಂ.ಎನ್. ನಾಯಕ ವಿರುದ್ದ ಅತ್ಯಧಿಕ ಮತ ಪಡೆದು ಗೆಲುವು ಪಡೆದರು. ಹಿಂದಿನ ಅಧ್ಯಕ್ಷ ಅನಂತ ಭಟ್ಕಳ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಚುನಾವಣಾ ಧಿಕಾರಿಯಾಗಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸಂಜೀವ ಕುಮಾರ ಹಾಗೂ ಕಾರ್ಯದರ್ಶಿ ರಮೇಶ ನಾಯ್ಕ ಪಾಲ್ಗೊಂಡಿದ್ದರು

error: