April 19, 2024

Bhavana Tv

Its Your Channel

ಕಾರ್ಮಿಕ ನಿರೀಕ್ಷಕರ ಕಛೇರಿಯನ್ನು ಈ ಕೂಡಲೇ ಭಟ್ಕಳ ಮಿನಿ ವಿಧಾನ ಸೌಧದ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಕರ್ನಾಟಕ ರಣಧೀರರ ವೇದಿಕೆಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಈರಾ ನಾಯ್ಕ ಚೌಥನಿ, ಆಗ್ರಹ

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಾರ್ಮಿಕ ನಿರೀಕ್ಷರ ಕಛೇರಿಯು ಕಳೆದ ಆರು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ಮೂರನೇ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಾರ್ಮಿಕರ ಕಛೇರಿಯು ಮೂರನೇ ಮಹಡಿಯ ಒಂದು ಕೋಣೆಯಲ್ಲಿ ಇರುವುದರಿಂದ ವಯ್ಯಸ್ಸಾದ ಪಿಂಚಣಿ ಪಡೆಯುವ ಕಾರ್ಮಿಕರಿಗೆ, ಅಂಗವಿಕಲರಿಗೆ, ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಮಿಕರಿಗೆ, ಮೂರನೇ ಮಹಡಿಗೆ ಮೆಟ್ಟಿಲುಗಳಿಂದ ಹತ್ತುಕೊಂಡು ಹೋಗಲು ತುಂಬಾ ತೊಂದರೆಯಾಗುತ್ತಿದೆ. ಮತ್ತು ಈ ಕಛೇರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಛೇರಿಗೆ ಬರುವ ಫಲಾನುಭವಿಗಳ ಸಂಖ್ಯೆಯು ಕೂಡ ಕಡಿಮೆಯಾಗುತ್ತಿದೆ.
ಈ ಹಿಂದೆ ಮೇ ೨೫-೦೫-೨೦೧೯ರಂದು ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘದ ಜಿಲ್ಲಾಧ್ಯಕ್ಷರು ಲೋಕಾಯುಕ್ತ ಕಾರವಾರ ಇವರಿಗೆ ಮನವಿ ನೀಡಿ, ಮೂರನೇ ಮಹಡಿಯಲ್ಲಿರುವ ಕಾರ್ಮಿಕರ ಕಛೇರಿಯನ್ನು ಬೇರೆಕಡೆ ಸ್ಥಳಾಂತರಿಸುವAತೆ ಕೇಳಿಕೊಂಡರು. ಮನವಿಗೆ ಸ್ಫಂದಿಸಿದ ಲೋಕಾಯುಕ್ತ ಡಿ.ಎಸ್.ಪಿ. ಕಾರವಾರ ಇವರು ೧೭-೦೬-೨೦೧೯ ರಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಪತ್ರ ಬರೆದು ಮೂರನೇ ಮಹಡಿಯಲ್ಲಿರುವ ಕಛೇರಿಯನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಈ ವಿಷಯವನ್ನು ಅಸಿಸ್ಟೆಂಟ್ ಲೇಬರ್ ಕಮಿಷನರ್ ಮೀನಾ ಪಾಟಿಲ್ ಹುಬ್ಬಳ್ಳಿ ಇವರ ಗಮನಕ್ಕೂ ಕೂಡ ತರಲಾಗಿದೆ. ಆದರೂ ಕೂಡ ಇಷ್ಟೆಲ್ಲಾ ವಿಷಯ ತಿಳಿದು ಕಾರ್ಮಿಕ ಅಧಿಕಾರಿಗಳು ಇದುವರೆಗು ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ನೋಡಿದರೆ ಕಾರ್ಮಿಕ ಅಧಿಕಾರಿಗಳು ಭೃಷ್ಟಾಚಾರವನ್ನು ನಡೆಸಲು ತಮಗೆ ಅನುಕೂಲ ಆಗುತ್ತದೆ ಎನ್ನುವ ಕಾರಣದಿಂದ ಮೂರನೇ ಮಹಡಿಯಲ್ಲಿ ಕಛೇರಿಯನ್ನು ತೆರೆದಿಟ್ಟುಕೊಂಡು ಸುಮ್ಮನೆ ಕುಳಿತಿದ್ದಾರೆ ಎನ್ನುವ ಅನುಮಾನಗಳು ಮೂಡುತ್ತಿದೆ. ಮೂರನೇ ಮಹಡಿಯಲ್ಲಿರುವ ಕಛೇರಿಯಲ್ಲಿ ಸದಾ ಕಾರ್ಮಿಕ ಏಜೆಂಟರು, ದಲ್ಲಾಳಿಗಳು, ತುಂಬಿರುತ್ತಾರೆ. ಇದನ್ನು ನೋಡಿದರೆ ಇಲ್ಲಿ ತಿಂಗಳಿಗೆ ಲಕ್ಷಾಂತರ ರೂಪಾಯಿಗಳ ಬ್ರಷ್ಟಚಾರ ನಡೆಯುತ್ತದೆ ಹಾಗೂ ಕಾರ್ಮಿಕ ಅಧಿಕಾರಿಗಳಿಗೆ ತಿಂಗಳಿನ ಮಾಮೂಲಿ ಹಣ ಸಂದಾಯವಾಗುತ್ತದೆ. ಎಂಬ ಅನುಮಾನಗಳು ಮೂಡುತ್ತಿದೆ. ಆದ್ದರಿಂದ ಒಂದು ತಿಂಗಳೊಳಗಾಗಿ ಭಟ್ಕಳದ ಮೂರನೇ ಮಹಡಿಯಲ್ಲಿರುವ ಕಾರ್ಮಿಕರ ಕಛೇರಿಯನ್ನು ಮಿನಿ ವಿಧಾನಸೌದದ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಇಲ್ಲವಾದಲ್ಲಿ ಸಮಾನ ಮನಷ್ಕ ಸಂಘಟನೆಗಳೊAದಿಗೆ ಸೇರಿ ಭಟ್ಕಳ ಖಾಸಗಿ ಕಟ್ಟಡದಲ್ಲಿ ಮೂರನೇ ಮಹಡಿಯಲ್ಲಿರುವ ಕಾರ್ಮಿಕ ನಿರೀಕ್ಷಕರ ಕಛೇರಿಗೆ ಬೀಗ ಜಡಿಯಲಾಗುವುದು ಎಂದು ಕರ್ನಾಟಕ ರಣಧೀರರ ವೇದಿಕೆಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಈರಾ ನಾಯ್ಕ ಚೌಥನಿ, ಆಗ್ರಹಿಸಿದ್ದಾರೆ.

error: