April 22, 2021

Bhavana Tv

Its Your Channel

ದಿನೇಶ ಕಾಮತರಿಗೆ ‘ಹ್ಯಾಟ್ರಿಕ್’ ಗೌರವ

ಹೊನ್ನಾವರ : ಸರಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಒಂದಾದ ನ್ಯಾಶನಲ್ ಇನ್ಸೂರೆನ್ಸ್ ಕಂಪನಿಯಲ್ಲಿ ಸಿನಿಯರ್ ಸ್ಟಾರ್‌ಎಡ್ವೆಸರರಾದ ಶ್ರೀ ದಿನೇಶ ಕಾಮತರನ್ನು ಅವರ ಸರ್ವಾಂಗೀಣ ಸಾಧನೆಯನ್ನು ಕಂಡು ಅವರನ್ನು ವಿದ್ಯುಕ್ತವಾಗಿ ಸನ್ಮಾನಿಸಲಾಯಿತು. ಸತತ ೩ನೇ ಬಾರಿಗೆ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾದ ಹೊರ ರಾಜ್ಯದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಕರೋನಾ ನಿಮಿತ್ತ ರದ್ದುಪಡಿಸಿ ಮೇಲಾಧಿಕಾರಿಗಳು ಸ್ಥಳೀಯ ಹೊನ್ನಾವರ ಶಾಖೆಗೆ ಬಂದು ಗೌರವವನ್ನು ಸಲ್ಲಿಸಿದ್ದರು.
“Best Performer Trophy’ಯನ್ನು ರಿಜಿನಿಲ್ ಮ್ಯಾನೆಜರ್ ಶ್ರೀ ಅನಿಲರಾವ್ ಕುಂಬ್ರೆಯವರು ನೀಡಿದರೆ ಸಿನಿಯರ್ ಡಿವಿಜಿನಲ್ ಮೇನೆಜರರಾದ ಶ್ರೀಯುತ ಎಸ್.ಕೆ.ಕುಲಕರ್ಣಿಯವರು ಶಾಲು ಹೊದಿಸಿ ಫಲಕವನ್ನು ನೀಡಿದರು.

ಈ ಹಿಂದೆ ಅವರನ್ನು ಚಂಡಿಗಡದಲ್ಲಿ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಸಿ.ಎಮ್.ಡಿಯವರಾದ ಶ್ರೀ ಕೆ.ಸನತಕುಮಾರ ರವರು ಗೌರವಿಸಿದ್ದರು. ತದನಂತರ ಹೈದರಬಾದನಲ್ಲಿ ನಡೆದ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಶ್ರೀಮತಿ ತಜಿಂದರ ಮೂಖರ್ಜಿಯವರು ಸನ್ಮಾನಿಸಿದ್ದರು.
ಒಂದು ಸಣ್ಣ ಹೊನ್ನಾವರ ಶಾಖೆಯಲ್ಲಿ ಇಂತಹ ಸಾಧನೆ ಆಗಿರುವುದು ಹೆಮ್ಮೆಯ ವಿಷಯದಂದು, ಈ ಸಲವು ಸಹ ಹುಬ್ಬಳ್ಳಿಯ ಪ್ರಾಂತೀಯ ಮಟ್ಟದಲ್ಲಿ, ಶಿವಮೊಗ್ಗ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ಕುರಿತು ಸಂತಸ ವ್ಯಕ್ತಪಡಿಸಿದ ಶಾಖಾ ವ್ಯವಸ್ಥಾಪಕರಾದ ಶ್ರೀಯುತ ಮುಕ್ತಾಭರಣ ಆರ್ ರವರು ಶುಭವನ್ನು ಕೋರಿದರು.

ತಮ್ಮ ಸಾಧನೆಗೆ ಕುಟುಂಬ ವರ್ಗದವರ ಎಲ್ಲಾ ಗ್ರಾಹಕರ ಹಾಗೂ ಶಾಖಾ ವ್ಯವಸ್ಥಾಪಕರಾದ ಶ್ರೀಯುತ ಮುಕ್ತಾಭರಣ ಹಾಗೂ ಸಿಬ್ಬಂದಿ ವರ್ಗದವರ ಹಾಗೂ ಹಿರಿಯರ ಮಾರ್ಗದರ್ಶನವೇ ಕಾರಣ ಎನ್ನುವ ಇವರ ಸಾಧನೆಯನ್ನು ಹಲವಾರು ಸೇವಾ ಸಂಸ್ಥೆಗಳು ಅಭಿನಂದಿಸಿದೆ.

error: