April 22, 2021

Bhavana Tv

Its Your Channel

ಸಿಪಿಐ ಪರಮೇಶ್ವರ ಗುನಗಾ ನಿವೃತ್ತಿ

ಕುಮಟಾ: ಕುಮಟಾದ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಸಿ ಸೇವಾ ನಿವೃತ್ತಿಹೊಂದಿದ ಪರಮೇಶ್ವರ ಗುನಗಾ ಅವರ ಬೀಳ್ಕೊಡುಗೆ ಸಮಾರಂಭ ಕುಮಟಾ ತಾಲೂಕಿನ ನಾಮಧಾರಿ ಸಭಾಭವನದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಉದ್ದೇಶಿ ಸಿ.ಪಿ.ಐ ಪರಮೇಶ್ವರ ಗುನಗಾ ಅವರು ಮಾತನಾಡಿ ಜನರು, ತುಂಬಾ ಪ್ರೀತಿಯಿಂದ ನನಗೆ ಬಂದು ಆರ್ಶಿವಾದ ಮಾಡಿ ಗೌರವಿಸುತ್ತಿದ್ದಾರೆ. ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ, ನನ್ನ ಅಧಿಕಾರದ ಅವಧಿಯಲ್ಲಿ ಜನತೆ ಹಾಗೂ ನಮ್ಮ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ತುಂಬಾ ಸಹಕಾರ ನೀಡಿದ್ದಿರಿ, ನಾನು ಕುಮಟಾದಲ್ಲಿ ಪೋಲಿಸ್ ಆಗಿ ಕಾರ್ಯನಿರ್ವಹಿಸಿದೆ, ನಂತರ ಪಿ.ಎಸ್.ಐ ಆಗಿ ಪದನ್ನೋತಿ ಹೊಂದಿದೆ, ನಂತರ ಕೆಲದಿನಗಳ ವರೆಗೆ ಕುಮಟಾದಲ್ಲಿ ಪಿ.ಎಸ್.ಐ ಆಗಿ ಕಾರ್ಯನಿರ್ವಹಿಸಿದೆ ವಿವಿಧ ಭಾಗಗಳಲ್ಲಿ ಕೆಲಸ ನಿರ್ವಹಿಸಿದೆ. ನಾನು ಸಿ.ಪಿ.ಐ ಆಗಿ ಬೇರೆ ಬೇರೆ ಕಡೆ ಕೆಲಸ ಮಾಡಿ ಈಗ ಕುಮಟಾದಲ್ಲಿ ನಿವೃತ್ತಿ ಹೊಂದುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ತಹಶೀಲ್ದಾರ ಮೇಘರಾಜ ನಾಯ್ಕ ಮಾತನಾಡಿ ಕೊರೋನಾ ಸಂಕಷ್ಟದ ಕಾಲದಲ್ಲಿಯೂ ಅತ್ಯುತ್ತಮ ರೀತಿಯಲ್ಲಿ ಸೇವೆ ಸಲ್ಲಸಿ ಜನತೆಯ ಮೆಚ್ಚುಗೆಗಳಿಸಿದ ಪರಮೇಶ್ವರ ಗುನಗಾ ಅವರು ತನ್ನ ಹುಟ್ಟೂರಲ್ಲಿ ಸೇವೆ ಸಲ್ಲಸಿ ನಿವೃತ್ತಿ ಹೊಂದುತ್ತಿರುವುದು ಸಂತಸದ ಸಂಗತಿ, ಅವರ ನಿವೃತ್ತಿ ಜೀವನ ಶುಭವಾಗಿರಲಿ ಎಂದು ಹೇಳಿದರು. ವೇಧಿಕೆಯಲ್ಲಿ ಹಾಜರಿದ್ದ ಡಾ.ಜಿ.ಜಿ.ಹೆಗಡೆ ಮಾತನಾಡಿ ಪರಮೇಶ್ವರ ಗುನಗಾ ನಾನು ಕಂಡ ದಕ್ಷ ಅಧಿಕಾರಿಯಾಗಿದ್ದರು, ತಾನು ಅಧಿಕಾರಿಯಾಗಿದ್ದರು ಸಹ ಜನಸಾಮಾನ್ಯರೊಂದಿಗೆ ಪ್ರೀತಿ ವಿಶ್ವಾಸವನ್ನು ಹೊಂದಿರುವವರು, ಕೆಲಸದಲ್ಲೂ ಅಷ್ಟೆ ಶೃದ್ದೆ ಇರುವಂತಹ ವ್ಯಕ್ತಿತ್ವ ಅವರದ್ದು ಎಂದು ಅವರ ಜೋತೆಗಿನ ಒಡನಾಟವನ್ನು ಸೃರಿಸಿಕೊಂಡರು.
ವಕೀಲರಾದ ಆರ್.ಜಿ.ನಾಯ್ಕ ಮಾತನಾಡಿ ಪರಮೇಶ್ವರ ಗುನಗಾ ಅವರು ಕೇವಲ ಅಧಿಕಾರಿಯಾಗಿ ಮಾತೃವೇ ನಮ್ಮ ಕಣ್ಣಿಗೆ ಕಾಣಿಸಿಲ್ಲ ಅವರೊಂದು ಸ್ನೇಹಜೀವಿಯಾಗಿ ನಮ್ಮೇಲ್ಲರಿಗೆ ಕಂಡವರು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿಗಳಾದ ಸುರೇಶ ಎಂ.ಕೆ, , ಪತ್ರಕರ್ತರಾದ ಜಯದೇವ ಬಳಗಂಡಿ,ಡಿ,ವೈ,ಎಸ್,ಪಿ ಬೆಳ್ಳಿಯಪ್ಪ, ಕುಮಟಾ ಪಿ.ಎಸ್.ಐ ಆನಂದಮೂರ್ತಿ, ಹೊನ್ನಾವರ ಪಿ.ಎಸ್.ಐ ಶಶಿಕುಮಾರ, ಗೋಕರ್ಣ ಪಿ.ಎಸ್.ಐ ನವೀನ ನಾಯ್ಕ ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಸೇರಿದಂತೆ ಮುಂತಾದ ಗಣ್ಯರು ನೆನಪಿನ ಕಾಣಿಕೆ ನೀಡಿ ಬಿಳ್ಕೋಟ್ಟರು.

error: