April 19, 2024

Bhavana Tv

Its Your Channel

ಜಿಪಂ ಮಾಜಿ ಅಧ್ಯಕ್ಷ ದಿ. ಎಲ್ ವಿ ಶಾನಭಾಗ ಸ್ಮರಣಾರ್ಥ ಕುಮಟಾ ತಾಲೂಕಿನ ಹೆಗಡೆಯ ಮಚಗೋಣದಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ತಂಗುದಾಣ ಲೋಕಾರ್ಪಣೆ

ಕುಮಟಾ: ಜಿಪಂ ಮಾಜಿ ಅಧ್ಯಕ್ಷ ದಿ. ಎಲ್ ವಿ ಶಾನಭಾಗ ಸ್ಮರಣಾರ್ಥ ಕುಮಟಾ ತಾಲೂಕಿನ ಹೆಗಡೆಯ ಮಚಗೋಣದಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ತಂಗುದಾಣವನ್ನು ಎಲ್ಲ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಪಾಲ್ಗೊಂಡು ಲೋಕಾರ್ಪಣೆಗೊಳಿಸಿದರು.

ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ದಿವಂಗತ ಎಲ್.ವಿ.ಶಾನಭಾಗ ಸ್ಮರಣಾರ್ಥ ಕುಮಟಾ ತಾಲೂಕಿನ ಹೆಗಡೆಯ ಮಚಗೋಣದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ರತ್ನಾಕರ ನಾಯ್ಕ ನಿರ್ಮಿಸಿರುವ ಮಹಾಗಣಪತಿಪುರ ಬಸ್ ತಂಗುದಾಣವನ್ನು ವಿದ್ವಾನ್ ಗೋಪಾಲಕೃಷ್ಣ ಹೆಗಡೆ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ದಿ.ಎಲ್.ವಿ.ಶಾನಭಾಗ ಅವರು ಪ್ರಭಾವಿ ವ್ಯಕ್ತಿಗಳಾಗಿದ್ದರು. ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಕೈಗೊಳ್ಳುವ ಮೂಲಕ ಎಲ್ಲರ ವಿಶ್ವಾಸ ಗಳಿಸಿದ್ದರು. ಅಂತವರ ಹೆಸರಿನಲ್ಲಿ ಈ ಬಸ್ ತಂಗುದಾಣವನ್ನು ನಿರ್ಮಿಸಿಕೊಟ್ಟ ಜಿಪಂ ಸದಸ್ಯ ರತ್ನಾಕರ ನಾಯ್ಕ ಅವರಿಗೆ ಧನ್ಯವಾದಗಳು. ಸ್ವಚ್ಛತೆ ಇದ್ದಲ್ಲಿ ಭಗವಂತ ಇರುತ್ತಾನೆ. ಹಾಗಾಗಿ ಬಸ್ ತಂಗುದಾಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರತ್ನಾಕರ ನಾಯ್ಕ ಅವರು ಇನ್ನು ಹೆಚ್ಚಿನ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಶಕ್ತಿ ಭಗವಂತ ನೀಡಲಿ. ಮುಂದಿನ ಚುನಾವಣೆಯಲ್ಲೂ ಮತ್ತೊಮ್ಮೆ ಆಯ್ಕೆಯಾಗುವ ಮೂಲಕ ಜನ ಸೇವೆ ಮುಂದುವರೆಸಲಿ ಎಂದು ಶುಭ ಹಾರೈಸಿದರು.
ಜಿಪಂ ಸದಸ್ಯ ರತ್ನಾಕರ ನಾಯ್ಕ ಮಾತಮಾಡಿ, ಸಂಸ್ಕೃತ ಪಾಠ ಶಾಲೆಯ ವಿದ್ವಾನ್ ಗೋಪಾಲಕೃಷ್ಣ ಹೆಗಡೆ ಅವರ ಅಮೃತ ಹಸ್ತದಿಂದ ಬಸ್ ತಂಗುದಾಣ ಉದ್ಘಾಟನೆಗೊಂಡಿರುವುದು ಖುಷಿಯ ವಿಚಾರ. ಈ ಬಸ್ ತಂಗುದಾಣಕ್ಕೆ ಹೆಗಡೆಯ ಪ್ರಭಾವಿ ಮುಖಂಡ ದಿ. ಎಲ್ ವಿ ಶಾನಭಾಗ ಅವರ ಹೆಸರಿಟ್ಟಿದ್ದೇವೆ. ಯಾಕೆಂದರೆ ಅವರು ಹೆಗಡೆಯ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಕನಸು ಕಂಡವರು. ಅವರ ಕೊನೆಯ ಘಳಿಗೆಯಲ್ಲಿ ನನ್ನನ್ನು ಕರೆಯಿಸಿ ಸಾಕಷ್ಟು ವಿಚಾರಗಳನ್ನು ಹಂಚಿಕೊAಡಿದ್ದರು. ಅವರು ಹೆಗಡೆ ಭಾಗದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಹೆಗಡೆಯಲ್ಲಿ ಬಹು ಗ್ರಾಮ ಕುಡಿಯುವ ಯೋಜನೆಗೂ ನಾನು ಕೂಡ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಆದರೆ ಕೆಲ ತೊಡಕುಗಳಾಗಿದೆ. ಹಾಗಾಗಿ ನಾವೆಲ್ಲ ರಾಜಕಾರಣಿಗಳು ದಕ್ಷಿಣಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಂತೆ ಕಾರ್ಯ ನಿರ್ವಹಿಸಬೇಕು. ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಅಭಿವೃದ್ಧಿಗೆ ನಾವೆಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.
ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ.ರವೀಂದ್ರ ಭಟ್ಟ ಸೂರಿ ಮಾತನಾಡಿ. ದಿ.ಎಲ್ ವಿ ಶಾನಭಾಗ ಅವರು ಹೆಗಡೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಟ್ಟ ಪ್ರಭಾವಿ ವ್ಯಕ್ತಿಯಾಗಿದ್ದರು. ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಮನೋಭಾವ ಹೊಂದಿದ್ದರು. ಅವರು ಈಗ ಇಲ್ಲದಿದ್ದರೂ ಅಂಥ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಜಿಪಂ ಸದಸ್ಯ ರತ್ನಾಕರ ನಾಯ್ಕ ಅವರು ಬಸ್ ತಂಗುದಾಣ ನಿರ್ಮಿಸಿಕೊಡುವ ಮೂಲಕ ಎಲ್ ವಿ ಶಾನಭಾಗ ಅವರ ಹೆಸರನ್ನು ಸದಾ ಸ್ಮರಿಸುವಂತಾಗಿದೆ. ಈ ಸತ್ಕಾರ್ಯಕ್ಕಾಗಿ ರತ್ನಾಕರ ಅವರಿಗೆ  ನಾವೆಲ್ಲ ಎಂದಿಗೂ ಚಿರಋಣಿಯಾಗಿದ್ದೇವೆ ಎಂದರು.
ಬಸ್ ತಂಗುದಾಣವನ್ನು ತಮ್ಮ ಸ್ವಂತ ಖರ್ಚಿನಿಂದ ನಿರ್ಮಿಸಿಕೊಟ್ಟ ಜಿಪಂ ಸದಸ್ಯ ರತ್ನಾಕರ ನಾಯ್ಕ ಅವರನ್ನು ಊರಿನ ಪರವಾಗಿ ರಾಯಣ್ಣ ನಾಯ್ಕ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹೆಗಡೆ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಪಟಗಾರ, ಉಪಾಧ್ಯಕ್ಷ ಶಾಂತಾರಾಮ ನಾಯ್ಕ, ಸದಸ್ಯರಾದ ಅಂಬಿಕಾ ಹೆಗಡೆ, ಯಶೋಧ ನಾಯ್ಕ, ಲಕ್ಷ್ಮಿ ಮುಕ್ರಿ, ಸುರೇಶ ಪಟಗಾರ, ಬಿ ಜಿ ಶಾನಭಾಗ, ಶಿವಾನಂದ ಪಟಗಾರ, ಮಂಜುನಾಥ ನಾಯ್ಕ, ಆಶಾ ನಾಯ್ಕ, ತಾಪಂ ಉಪಾಧ್ಯಕ್ಷೆ ಗೀತಾ ಮುಕ್ರಿ, ಮಾಜಿ ಅಧ್ಯಕ್ಷ ಫ್ರಾನ್ಸಿಸ್ ಫರ್ನಾಂಡೀಸ್, ಕಾಂಗ್ರೆಸ್ ಮುಖಂಡ ರಾಮತನಾಥ ಶಾನಭಾಗ, ಬಾಡ ಗ್ರಾಪಂ ಅಧ್ಯಕ್ಷ ದಾವುದ್ ಸಾಬ್, ಹೊಲನಗದ್ದೆ ಗ್ರಾಪಂ ಸದಸ್ಯರಾದ ರಾಘವೇಂದ್ರ ಪಟಗಾರ, ಸದಸ್ಯ ಅನೀಲ ಮಡಿವಾಳ, ಎಲ್.ವಿ.ಶಾನಭಾಗ ಅಭಿಮಾನಿ ಬಳಗ, ಊರ ನಾಗರಿಕರು ಉಪಸ್ಥಿತರಿದ್ದರು.

error: