March 29, 2024

Bhavana Tv

Its Your Channel

ಡಾ. ಸವಿತಾ ಕಾಮತ ಅವರ ಮನೋಸ್ಥೈರ್ಯ ಕುಸಿಯುವ ಕಾರ್ಯ ಮಾಡಬೇಡಿ, ಆರೋಗ್ಯ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕರ ವಿರುದ್ದ ಆಕ್ರೋಶ

ಭಟ್ಕಳ: ಜನಪ್ರತಿನಿಧಿಗಳ, ದಾನಿಗಳ ಸಹಕಾರದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ ಡಾ. ಸವಿತಾ ಕಾಮತ ಅವರ ಮನೋಸ್ಥೈರ್ಯ ಕುಸಿಯುವ ಕಾರ್ಯ ಮಾಡಬೇಡಿ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣಾ ನಾಯ್ಕ ಬೆಳಗಾವಿಯ ಆರೋಗ್ಯ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಅವರು ಭಟ್ಕಳದ ಈಶ್ವರ ನಾಯ್ಕ ಎನ್ನುವವರು ನೀಡಿದ ದೂರಿನ ವಿಚಾರಣೆಗೆಂದು ಭಟ್ಕಳಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ. ಕಳೆದ ೨ ವರ್ಷಗಳ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊಡೆ ಹಿಡಿದು ಬರುವ ಸ್ಥಿತಿ ಇತ್ತು. ವರಾಂಡದಲ್ಲಿ ನಾಯಿಗಳ ಹಾವಳಿ ಇತ್ತು. ರೋಗಿಗಳ ಬರುವದು ಬಿಟ್ಟು ಸ್ವತಃ ವೈದ್ಯರು ಇಲ್ಲಿ ಬರಲು ಹಿಂಜರಿಯುತ್ತಿದ್ದರು. ಅಂತ ಸಮಯದಲ್ಲಿ ವೈದ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಸವಿತಾ ಕಾಮತ ತನ್ನ ಸ್ವಂತ ಮನೆಯಂತೆ ಆಸ್ಪತ್ರೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಒಂದು ವಿನಂತಿಗೆ ಅನಾಮಧೇಯ ವ್ಯಕ್ತಿಯೊರ್ವ ೫೦ಲಕ್ಷದ ಡಯಾಲಿಸಸ್ ಸೆಂಟರನ್ನು ದಾನವಾಗಿ ನೀಡಿ ಅವರು ಹೆಸರನ್ನು ಕೂಡ ಬಹಿರಂಗ ಪಡಿಸಲು ಬಿಟ್ಟಿಲ್ಲ ಎಂದರೆ ಅವರ ವರ್ಚಸ್ಸು ತಿಳಿಯುತ್ತದೆ ಇಂತಹ ನಿಷ್ಟಾವಂತ ಅಧಿಕಾರಿಗಳ ವಿರುದ್ದ ಯಾವೊದು ಒಂದು ವ್ಯಕ್ತಿ ಅವರ ವೈಯಕ್ತಿಕ ಹಿತಾಶಕ್ತಿ ಈಡೇರಿಲ್ಲ ಎಂದು ದೂರು ನೀಡಿದರೆ ಆರೋಗ್ಯಾಧಿಕಾರಿ ವಿರುದ್ದ ತನಿಖೆ ನಡೆಸುವದು ಎಷ್ಟು ಸೂಕ್ತ ಎಂದು ಕಿಡಿಕಾರಿದರು.
ಒಂದು ವೇಳೆ ಸವಿತಾ ಕಾಮತ ಅವರಿಗೆ ತೊಂದರೆ ಕೊಟ್ಟರೆ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವದು ಎಂದು ಖಾರ್ವಿ ಸಮಾಜದ ಮುಖಂಡ ರಮೇಶ ಖಾರ್ವಿ ಎಚ್ಚರಿಸಿದರು.
ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮಾತನಾಡಿ ಕೆಲವರಿಗೆ ಆಸ್ಪತ್ರೆಯ ಏಳಿಗೆ ನೋಡಿ ಸಹಿಸಿಕೊಳ್ಳಲಾಗುತ್ತಿಲ್ಲ. ದುರದ್ದೇಶ ಪಿಡಿತರಾಗಿ ಕಳೆದ ಎರಡು ವರ್ಷಗಳ ಹಿಂದೆ ಆಸ್ಪತ್ರೆಯ ಪ್ರಯೋಜನ ಪಡೆಯುತ್ತಿದ್ದ ವ್ಯಕ್ತಿಯ ಉದ್ದೇಶ ಈಡೇರದ ಪರಿಣಾಮ ಆಸ್ಪತ್ರೆಯ ದಕ್ಷ ಅಧಿಕಾರಿಯನ್ನು ಹೊರದಬ್ಬಲು ಸಂಚು ರೂಪಿಸಿದ್ದಾರೆ. ಇದನ್ನು ನೇರವೇರಿಸಲು ನಾವು ಬಿಡುವದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.

ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ.ಡಿ. ನಾಯ್ಕ, ಜಿಎಸ್‌ಬಿ ಸಮಾಜ, ನಾಮಧಾರಿ ಸಮಾಜ, ಸೇವಾ ವಾಹಿನಿ, ನಾಗಯಕ್ಷೇ ದೇವಸ್ಥಾನ, ಮೀನುಗಾರರ ಸಂಘಟನೆ, ದೇವಾಡಿಗ ಸಮಾಜ, ಬಿಜೆಪಿ ಮುಖಂಡ ರಾಜೇಶ ನಾಯ್ಕ, ಬಿಜೆಪಿ ಅಧ್ಯಕ್ಷ ಸುಬ್ರಾಯ ದೇವಾಡಿಗ, ಜೈ ಕರ್ನಾಟಕ ಸಂಘಟನೆ ಸೇರಿ ಇತರ ಹಲವಾರು ಸಂಘಟನೆಯ ಪ್ರಮುಖರು ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರಿಗೆ ಬೆಂಬಲ ಸೂಚಿಸಿ ಪತ್ರ ನೀಡಿದ್ದಾರೆ. ಕಾರಣವಿಲ್ಲದೆ ನೀಡದ ಅರ್ಜಿಗಳನ್ನು ಪರಿಗಣನಗೆಗೆ ತೆಗೆದುಕೊಳ್ಳದೆ ವೈದ್ಯಾಧಿಕಾರಿಗಳಿಗೆ ತೊಂದರೆ ನೀಡಿದರೆ ಉಗ್ರ ಸ್ವರೂಪದ ಹೋರಾಟ ನಡೆಸುವದು ಅನಿವಾರ್ಯ ಎಂದು ಈ ಸಂದರ್ಬದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ಆಕ್ರೋಶ ಕಂಡು ಕ್ಷಣಕಾಲ ಬೆಚ್ಚಿ ಬಿದ್ದ ಜಂಟಿ ನಿರ್ದೇಶಕ ಡಾ. ಬಿರಾದರ ಮಾತನಾಡಿ ಡಾ. ಸವಿತಾ ಕಾಮತ ಅವರ ಶ್ರಮ ನಿಜಕ್ಕೂ ಅಭಿನಂದನೀಯ. ದೂರುಗಳು ಬಂದಾಗ ಇಲಾಖೆಯ ಸೂಚನೆಯಂತೆ ತನಿಖೆ ನಡೆಸುವದು ನಮ್ಮ ಕರ್ತವ್ಯ ಎಂದರು. ಆಗ ಅಲ್ಲಿ ಜಮಾಯಿಸಿದ್ದ ಸಾರ್ವಜನಿಕರು ದೂರು ಸುಳ್ಳೆಂದು ಸಾಬೀತಾದರೆ ದೂರು ಕೊಟ್ಟವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಕೊನೆಯಲ್ಲಿ ತನಿಖೆ ನಡೆಸಲು ಬಂದ ಜಂಟಿ ನಿರ್ದೆಶಕರೆ ಡಾ. ಸವಿತಾ ಕಾಮತ ಅವರಿಗೆ ನಾಗಯಕ್ಷೇ ಧರ್ಮದೇವಿ ಸಂಸ್ಥಾನದವರು ತಂದ ಅಭಿನಂದನೆ ಪತ್ರ ನೀಡಿ ಜಮಾಯಿಸಿದ ಜನರನ್ನು ಸಮಾಧಾನ ಪಡಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಶರತ್ ನಾಯಕ, ತಾಲೂಕಾ ವ್ಯಧ್ಯಾಧಿಕಾರಿ ಮೂರ್ತಿರಾಜ ಭಟ್, ಜಿಎಸ್‌ಬಿ ಸಮಾಜದ ಮುಖಂಡ ನರೇಂದ್ರ ನಾಯಕ ಸೇರಿ ಇತರರು ಇದ್ದರು.
ನಿಷ್ಪಕ್ಷಪಾತವಾಗಿ, ಪ್ರಾಮಾಣಿಕತೆಯಿಂದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸವಿತಾ ಕಾಮತ ಅವರಿಗೆ ಮಾನಸಿಕ ಕಿರುಕುಳ ನೀಡುವದು ಸರಿ ಇಲ್ಲ. ಸ್ವಹಿತಾಶಕ್ತಿ ಹೊಂದಿದವರ ವೈಯಕ್ತಿಕ ವಿಚಾರವನ್ನು ಮುಂದಿಟ್ಟುಕೊಡ ಸರ್ಕಾರಿ ಆಸ್ಪತ್ರೆಯ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಅಮಾನವೀಯ. ಪ್ರಾಮಾಣಿಕ ವೈದ್ಯಾಧಿಕಾರಿಗಳ, ಸಿಬ್ಬಂದಿಗಳ ಮನೋಸ್ಥೆರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಕುರಿತು ಸಚಿವರಿಗೂ, ಸಂಬದ ಪಟ್ಟ ಇಲಾಖೆಗೆ ಕೋರಿಕೆ ಸಲ್ಲಿಸಲಾಗಿದೆ. ಈ ದಿಶೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯಲಿ. ಶಾಸಕರು ಸುನೀಲ ನಾಯ್ಕ ಬೆಂಬಲ ಸೂಚಿಸಿ ಪತ್ರ ನೀಡಿದ್ದಾರೆ.

error: