April 22, 2021

Bhavana Tv

Its Your Channel

ಸಾರಿಗೆ ಸಂಸ್ಥೆಯ ನೌಕರರು ಮುಷ್ಕರಕ್ಕೆ ಕುಮಟಾ ಚಾಲಕ-ನಿರ್ವಾಹಕರ ಬೆಂಬಲ

ಕುಮಟಾ: ಆರನೆಯ ವೇತನ ಆಯೋಗ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಸಾರಿಗೆ ಸಂಸ್ಥೆಯ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ. ಅದಕ್ಕೆ ಬೆಂಬಲಿಸಿ, ಕುಮಟಾದಲ್ಲಿಯೂ ಚಾಲಕ-ನಿರ್ವಾಹಕರು ಪ್ರತಿಭಟನೆಗೆ ಬೆಂಬಲಿಸಿದ ಕಾರಣ ಪಟ್ಟಣದ ಹೊಸ ಬಸ್ ನಿಲ್ದಾಣ ಮೊದಲ ದಿನ ಸಂಪೂರ್ಣ ಸ್ಥಬ್ತವಾಗಿದೆ.

ಒಂದೇ ಒಂದು ಬಸ್ಸು ನಿಲ್ದಾಣಗಳಲ್ಲಿ ಇಲ್ಲದೇ ಖಾಲಿಯಾಗಿ ಕಾಣುತ್ತಿದ್ದು, ಮೊದಲೇ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಸಾಮಾನ್ಯ ದಿನದಂತೆ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸಿಲ್ಲ. ಇನ್ನು ಕೆಲ ದೂರದ ಪ್ರಯಾಣಿಕರು ಆಗಮಿಸಿದ್ದು, ಬಸ್ ಇಲ್ಲದೇ ಪರದಾಡುವಂತಾಯಿತು. ಬಸ್ ನಿಲ್ದಾಣದ ಹೊರ ಭಾಗದ ರಾಷ್ಟಿçÃಯ ಹೆದ್ದಾರಿಯಲ್ಲಿ ಖಾಸಗಿ ಟೆಂಪೋಗಳು ಸಾಲಾಗಿ ನಿಂತಿದ್ದವು.
ದೂರದ ಊರಿಗೆ ತೆರಳುವ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಹೊರಗಡೆ ನಿಂತು, ಲಾರಿ ಸೇರಿದಂತೆ ಖಾಸಗಿ ವಾಹನಗಳಿಗೆ ಕೈ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
error: