
ಮಂಗಳೂರು:ನಗರದ ಮೋರ್ಗನ್ಸ್ ಗೇಟ್ ಬಳಿಯ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಮಾರ್ಗನ್ಸ್ ಗೇಟ್ ಬಳಿಯ ಮಾರ್ಗನ್ಸ್ ಸ್ಟ್ರೀಟ್ ನ ಮನೆಯೊಂದರಲ್ಲಿ ಇಬ್ಬರು ಮಕ್ಕಳ ಸಹಿತ ದಂಪತಿಯ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ನಾಗೇಶ್ ಶೇರಿಗುಪ್ಪಿ(೩೦), ಅವರ ಪತ್ನಿ ವಿಜಯಲಕ್ಷ್ಮೀ(೨೬), ಮಕ್ಕಳಾದ ಸಪ್ನಾ(೮) ಹಾಗೂ ಸಮಂತ್(೪) ಎಂದು ಗುರುತಿಸಲಾಗಿದೆ. ಇವರು ಮೂಲತಃ ಸುನಗ್ ಗ್ರಾಮದ ಬೀಳಗಿ ನಿವಾಸಿಗಳು.
ವಿಜಯಲಕ್ಷ್ಮೀ ಮತ್ತು ಇಬ್ಬರು ಮಕ್ಕಳು ವಿಷ ಸೇವನೆಯಿಂದ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬoದಿದ್ದರೆ, ನಾಗೇಶ್ ಮೃತದೇಹ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದೆ.
ನಾಗೇಶ್ ಚಾಲಕರಾಗಿ ದುಡಿಯುತ್ತಿದ್ದರೆ, ವಿಜಯಲಕ್ಷ್ಮೀ ಸೆಕ್ಯುರಿಟಿ ಸಿಬ್ಬಂದಿಯಾಗಿ ದುಡಿಯುತ್ತಿದ್ದರೆನ್ನಲಾಗಿದೆ. ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದರು.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಹಿತ ಸಿಬ್ಬಂದಿ ತೆರಳಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ

More Stories
ಬಂಟರ ಸಂಘದ ವತಿಯಿಂದ “ಪ್ರತಿಭಾ ಪುರಸ್ಕಾರ ಹಾಗು ವಿದ್ಯಾರ್ಥಿವೇತನ
ಪ್ರವೀಣ್ ನೆಟ್ಟಾರ್ ಕೊಲೆಯ ಬಗ್ಗೆ ಬ್ರಹ್ಮಾನಂದ ಶ್ರೀಗಳಿಂದ ಖಂಡನೆ
ಶ್ರೀ ಶ್ರೀ ಶ್ರೀ ಬ್ರಹಾನಂದ ಸರಸ್ವತಿ ಸ್ವಾಮೀಜಿಯವರ ಪಾದುಕಾ ಪೂಜೆ ನೇರವೇರಿಸಿದ ಮಾಜಿ ಶಾಸಕ ಮಧು ಬಂಗಾರಪ್ಪ