August 19, 2022

Bhavana Tv

Its Your Channel

ಬ್ರಹ್ಮಾನಂದ ಶ್ರೀ ಗಳ ನೇತೃತ್ವದಲ್ಲಿ ರಾಜಸ್ಥಾನದಲ್ಲಿ ಮಹಾ ಯಜ್ಞ

ಧರ್ಮಸ್ಥಳ :ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ, ನಿತ್ಯಾನಂದ ನಗರ, ಧರ್ಮಸ್ಥಳ ಕ್ಷೇತ್ರದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ರಾಜಸ್ಥಾನದ ರಾಜಸ್ ಮಂಡ್ ಜಿಲ್ಲೆಯಲ್ಲಿರುವ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಟ್ರಸ್ಟಿ ಭಗವತಿ ಪ್ರಸಾದ್ ಬಿಯಾನಿಯವರ ಮನೆಯಲ್ಲಿ ರಾಮ ಕ್ಷೇತ್ರ ಮಹಾಸಂಸ್ಥಾನದ ವೇದಮೂರ್ತಿ ಗಳಾದ ಲಕ್ಷ್ಮಿಪತಿ ಗೋಪಾಲಚಾರ್ಯರ ನೇತೃತ್ವದಲ್ಲಿ ಲೋಕಕಲ್ಯಾಣಕ್ಕಾಗಿ ಫೆ. 19 ರಿಂದ 20ರ ವರೆಗೆ ಮಹಾಮೃತ್ಯುಂಜಯ ಯಜ್ಞ, ಧನ್ವಂತರಿ ಯಜ್ಞ ,ಹಾಗೂ ಮಹಾಸುದರ್ಶನ ಯಜ್ಞಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಸ್ವಾಮೀಜಿಯವರ ಶಿಷ್ಯರಾದ ಉತ್ತರಖಂಡದ ಋಷಿಕೇಶದ ಗೌರಿಶಂಕರ್ ಮೋಹತ್, ರಾಜಸ್ಥಾನದ ಮಾರ್ಬಲ್ ಅಸೋಸಿಯೇಷನ್ ಅಧ್ಯಕ್ಷ ಮದನ್ ಲಾಲ್ ಚೌದ್ರಿ , ಮಹೇಶ್ವರಿ ಸಮಾಜದ ಅಧ್ಯಕ್ಷ ಓಂಪ್ರಕಾಶ್ ಮಂತ್ರಿ ಮತ್ತು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಅಶೋಕ್ ಪಾಲಿವಾಲರವರು, ಕ್ಷೇತ್ರದ ಟ್ರಸ್ಟಿಗಳಾದ ತುಕಾರಾಂ ಸಾಲಿಯಾನ್, ಕೃಷ್ಣಪ್ಪ ಗುಡಿಗಾರ್ ಮತ್ತು ರವೀಂದ್ರ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.

About Post Author

error: