September 16, 2024

Bhavana Tv

Its Your Channel

ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ

ಮ0ಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ, ನಾದ ಸಂಕೀರ್ತನಾ ಮಂಗಳೂರು ತಂಡದಿAದ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ, ಕುಮಟಾದ ವಿಜಯ ಮಹಲೆ ಕೀಬೋರ್ಡ್ ನುಡಿಸಿದ್ದು ವಿಶೇಷವಾಗಿತ್ತು.

ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ, ಶ್ರೀ ಸ್ವಾಮಿಯ ಜನ್ಮ ನಕ್ಷತ್ರ ದಿನದ ಪ್ರಯುಕ್ತ ಅಯ್ಯಪ್ಪ ಸ್ವಾಮಿಗೆ ಎಳನೀರು ಅಭಿಷೇಕ, ಭಜನಾ ಸಂಕೀರ್ತನೆ ಹಾಗೂ ವಿಶೇಷ ಪೂಜೆ ನೆರವೇರಿತು.

ಮಂಗಳೂರಿನ “ನಾದ ಸಂಕೀರ್ತನಾ” ತಂಡದಿAದ ನಡೆದ ಭಕ್ತಿ ಭಜನಾ ಕಾರ್ಯಕ್ರಮವು ಅಪಾರ ಭಕ್ತವೃಂದದ ಮೆಚ್ಚುಗೆಗೆ ಸಾಕ್ಷಿಯಾಯಿತು. ಸುಜಿತ್ ಶೆಟ್ಟಿ, ಶ್ರೀ ವಿದ್ಯಾ, ರವೀಂದ್ರ ಆಚಾರ್ ಸುಮಧುರವಾಗಿ ಹಾಡಿದರು. ಇವರಿಗೆ ಪೂರಕವಾಗಿ ಕುಮಟಾದ ‘ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ’ ವಿಜಯ ಮಹಲೆ ಕೀಬೋರ್ಡ್ ಸಾಥ್ ನೀಡಿದರು. ತಬಲಾದಲ್ಲಿ ಶ್ರೀಕಾಂತ್ ನಾಯಕ್ ಉತ್ತಮವಾಗಿ ಸಹಕರಿಸಿದರು. ಈ ಭಜನಾ ತಂಡದಲ್ಲಿ ಡಾಕ್ಟರ್ ರಾಜಕುಮಾರ್ ಧ್ವನಿಯನ್ನು ಹೋಲುವ ಗಾಯಕ ರವೀಂದ್ರ ಆಚಾರ್; ವಿಶೇಷ ಆಕರ್ಷಣೆಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ವರದಿ: ನರಸಿಂಹ ನಾಯ್ಕ್ ಹರಡಸೆ

error: