April 23, 2024

Bhavana Tv

Its Your Channel

ಪಾರ್ಕ್ ಮಾಡಲಾದ ಕಾರಿನ ಮೇಲೆ ಉರುಳಿ ಬಿದ್ದ ಮರ – ನಿನ್ನೆಯಷ್ಟೇ ಖರೀದಿಸಿದ ಕಾರು ಸಂಪೂರ್ಣ ಜಖಂ.

ಪಂಜ: ಗ್ಯಾರೇಜ್ ಒಂದರ ಮುಂಬಾಗ ನಿಲ್ಲಿಸಿದ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ಕಾರು ಸಂಪೂರ್ಣ ಹಾನಿಗೊಂಡ ಘಟನೆ ಕಡಬ ತಾಲೂಕಿನ ಪಂಜ ಎಂಬಲ್ಲಿ ನಡೆದಿದೆ . ಅ .15 ರ ತಡ ರಾತ್ರಿ ಘಟನೆ ನಡೆದಿದ್ದು , ಕಾರು ಸಂಪೂರ್ಣ ಜಖಂ ಗೊಂಡಿದೆ.
1996 ಮಾಡೆಲ್ ನ ಎಸ್ಟೀಮ್ ಕಾರು ಇದಾಗಿದ್ದು,ಇದನ್ನು ಗ್ರಾಹಕರೊಬ್ಬರು ನಿನ್ನೆಯಷ್ಟೇ ಬೇರೊಬ್ಬರಿಂದ ಖರೀದಿಸಿದ್ದರು.ಅದನ್ನು ಪಂಜ ಸಿ.ಎ ಬ್ಯಾಂಕಿನ ಸಮೀಪದ ಗ್ಯಾರೇಜ್ ಬಳಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿತ್ತು . ನಿನ್ನೆ ಪಂಜ ಪರಿಸರದಲ್ಲಿ ಜೋರಾಗಿ ಗಾಳಿ ಬೀಸಿದ ಕುರುಹುಗಳು ಇಲ್ಲದೇ ಹೋದರು, ಮರ ಕಾರಿನ ಮೇಲೆ ಉರುಳಿ ಬಿದ್ದದ್ದು ಸ್ಥಳೀಯರಲ್ಲಿ ಆಶ್ಚರ್ಯವನ್ನು ಉಂಟು ಮಾಡಿದೆ.


ಕಾರು ಖರೀದಿಸಿದ 24 ಗಂಟೆ ಪೂರ್ತಿಯಾಗುವ ಮೊದಲೇ ಕಾರು ಸಂಪೂರ್ಣವಾಗಿ ಹಾನಿಯಾಗಿರುವುದು ಅದರ ನೂತನ ಮಾಲಕರಿಗೆ ತೀವ್ರ ನಿರಾಶೆ ಉಂಟು ಮಾಡಿದೆ. ಹಾಗಾಗಿಯೂ ಜನ ಸಂಚಾರವಿಲ್ಲದ ರಾತ್ರಿ ವೇಳೆ ದುರ್ಘಟನೆ ಸಂಭವಿಸಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ

error: