April 25, 2024

Bhavana Tv

Its Your Channel

ಎರಡು ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಗ್ರಾಮೀಣ ಪ್ರತಿಭೆ ಮೇಘನಾ ನಾಯ್ಕ

ದಾವಣಗೆರೆ ಜಿಲ್ಲೆಯ ಸಿದ್ದಗಂಗಾ ಸಂಸ್ಥಾನದ ಆವರಣದಲ್ಲಿ ಸರಸ್ವತಿ ಪ್ರತಿಷ್ಠಾನ ಹಾಗೂ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ವರ್ಣರಂಜಿತ ಸಮಾರಂಭದಲ್ಲಿ 2021-22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600 ಕ್ಕೂ ಹೆಚ್ಚು ಅಂಕ ಪಡೆದ ಕುಮಾರಿ ಮೇಘನಾ ಪ್ರಕಾಶ್ ನಾಯ್ಕ ಇವರನ್ನು ಮೆರವಣಿಗೆಯಲ್ಲಿ ಕರೆತಂದು ಸಿಂಹಾಸನದಲ್ಲಿ ಕೂರಿಸಿ ಚಿನ್ನದ ಲೇಪನದ ಕಿರೀಟವಿಟ್ಟು ಪುಷ್ಪವೃಷ್ಠಿಯೊಂದಿಗೆ ‘ಸರಸ್ವತಿ ಪುರಸ್ಕಾರ” ಹಾಗೂ ಕನ್ನಡದಲ್ಲಿ 125/125 ಅಂಕ ಪಡೆದಿದ್ದಕ್ಕಾಗಿ “ಕನ್ನಡ ಕೌಸ್ತುಭ” ಎರಡು ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈಕೆ ಕುಮಟಾ ತಾಲೂಕಿನ ಪ್ರಗತಿ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು ಕತಗಾಲ ಎಡತಾರೆ ನಿವಾಸಿ ಶಾರದಾ ಮತ್ತು ರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ಪ್ರಕಾಶ್ ನಾಯ್ಕ ಇವರ ಸುಪುತ್ರಿಯಾಗಿರುತ್ತಾಳೆ. ಇವಳಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಶಾಲಾ ಶಿಕ್ಷಕವೃಂದ ಹಾಗೂ ಕುಲಗುರುಗಳಾದ ಧರ್ಮಸ್ಥಳದ ಶ್ರೀ ರಾಮಕ್ಷೇತ್ರದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾ ಸ್ವಾಮೀಜೀಯವರು ಅಭಿನಂದಿಸಿರುತ್ತಾರೆ.

error: