April 19, 2024

Bhavana Tv

Its Your Channel

ಸಿ ಸಿ ಪಾಟೀಲ್‌ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಸುಮಾರು ೨೦ ಜನ ಬಿಜೆಪಿ ಪಕ್ಷಕ್ಕೆ ಸೇರ್ಪಡೆ.

ಗದಗ: ಸಿ ಸಿ ಪಾಟೀಲ ಸಾಹೇಬರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ದಲಿತ ಮುಖಂಡರು ಸರ್ವ ಜನಾಂಗದವರನ್ನು ತನ್ನವರೆಂದು ಎಲ್ಲರನ್ನು ಪ್ರೀತಿ, ವಿಶ್ವಾಸ, ಸಮಾನತೆಯಿಂದ ಕಾಣುವ ರಾಜ್ಯದ ಜನಪ್ರಿಯ ಸಚಿವರು ಸಿ ಸಿ ಪಾಟೀಲ ಸಾಹೇಬರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನರಗುಂದ ಮತಕ್ಷೇತ್ರದ ಅಸೂಟಿ ಗ್ರಾಮದ ದಲಿತ ಮುಖಂಡರು ಹಾಗೂ ಯುವಕರು ಬಿಜೆಪಿ ಪಕ್ಷದ ಸಿದ್ದಾಂತಕ್ಕೆ ಬದ್ದರಾಗಿ ಮಾನ್ಯ ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಚಲವಾದಿ ನಾರಾಯಣಸ್ವಾಮಿಯವರ ಜನಪ್ರಿಯತೆ ಮತ್ತು ಪಕ್ಷ ಸಂಘಟನೆ ಸಹ ಇವರು ಪಕ್ಷಕ್ಕೆ ಸೇರಲು ಪ್ರೇರಣೆಯಾಗಿದೆ. ಸೇರ್ಪಡೆಯಾದ ದಲಿತ ಮುಖಂಡರು ಅಂದಪ್ಪ ಚಲವಾದಿ, ಕುಮಾರ ಕಾಳೆ, ಅರುಣ ಚಲವಾದಿ, ಶಿವಪ್ಪ ಮಾದರ, ಬಸವರಾಜ ಚಲವಾದಿ, ಪ್ರವೀಣ ಕಾಳೆ, ಗುರಪ್ಪ ಚಲವಾದಿ, ಹೇಮಂತ ಚಲವಾದಿ, ರಾಜು ಚಲವಾದಿ, ಚಂದ್ರು ಚಲವಾದಿ, ಬಸಪ್ಪ ಚಲವಾದಿ, ಮಲ್ಲಪ್ಪ ಚಲವಾದಿ, ಯಮನಪ್ಪ ಕಾಳೆ, ಮಂಜು ಚಲವಾದಿ, ಪುಂಡಪ್ಪ ಚಲವಾದಿ, ಶರಣಪ್ಪ ಚಲವಾದಿ ಇನ್ನೂ ಮುಂತಾದವರು ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದಲ್ಲಿ. ಜಲಜೀವನ ಮಿಷನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಗೂ ವಾರ್ತಾ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಸಿ ಸಿ ಪಾಟೀಲ್‌ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ವನ್ನು ತೊರೆದು ಸುಮಾರು ೨೦ ಜನ ಬಿಜೆಪಿ ಧ್ವಜ ನೀಡುವ ಮೂಲಕ ದಲಿತ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಮುತ್ತಣ್ಣ ಜಂಗಣ್ಣವರ ಉಪಸ್ಥಿತರಿದ್ದರು

ವರದಿ ವೀರಣ್ಣ ರೋಣ

error: