April 19, 2024

Bhavana Tv

Its Your Channel

ಕೋವಿಡ್ ನಿಯಮ ಪಾಲಿಸಿ ಹಬ್ಬ ಆಚರಿಸಿ-ಪಿ.ಎಸ್.ಐ ವಿನೋದ ಪೂಜಾರಿ

ರೋಣ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ, ಶಾಂತಿಯುತವಾಗಿ ಹಾಗೂ ಸರಳ ರೀತಿಯಿಂದ ಗಣೇಶೋತ್ಸವ ಹಬ್ಬ ಆಚರಿಸಬೇಕು ಎಂದು ಸ್ಥಳೀಯ ಪೊಲೀಸ್ ಠಾಣೆಯ ಪಿ.ಎಸ್.ಐ ವಿನೋದ ಪೂಜಾರಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು,
ದೇಶದಲ್ಲಿ ಇನ್ನೂ ಎರಡನೇ ಅಲೆ ಮುಕ್ತಾಯಗೊಂಡಿಲ್ಲ ಹಾಗೂ ೩ನೇ ಅಲೆಯ ಬಗ್ಗೆ ತಜ್ಞರು ಅಭಿಪ್ರಾಯ ಹೇಳುತ್ತಿದ್ದಾರೆ ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿಯನ್ನು ೪ ಅಡಿ ಮೀರದಂತೆ ಪ್ರತಿಷ್ಠಾಪನೆ ಮಾಡಬೇಕು. ಯಾವುದೇ ರೀತಿಯ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು ಎಂದರು. ಐದು ದಿನಗಳ ಹಬ್ಬದ್ದಲ್ಲಿ ಪಾಲ್ಗೊಳ್ಳುವ ಆಯೋಜಕರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು ಹಾಗೂ ಕೋವಿಡ್ ನೆಗಟಿವರ್ ವರದಿ ಹೊಂದಿರಬೇಕು ಎಂದರು. ಸರ್ಕಾರಗಳ ಹೊರಡಿಸಿರುವ ಆದೇಶವನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸಂತೋಷ ಕಡಿವಾಲ ಮಾತನಾಡಿ, ಹಬ್ಬದ ಆಚರಣೆಯೂ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸುವುದರ ಜೊತೆಗೆ ಸಮಾಜಕ್ಕೆ ಕೋವಿಡ್ ಎನ್ನುವ ನೆಪದಲ್ಲಿ ಬಂದಿರುವ ಸೋಂಕನ್ನು ದೂರ ಮಾಡುವಂತಾಗಲಿ. ಆದ್ದರಿಂದ ಗಣೇಶೋತ್ಸವ ಆಚರಣೆ ಮಾಡುವಾಗ ಎಚ್ಚರದಿಂದ ಕೋವಿಡ್ ನಿಯಮಗಳ ಪಾಲನೆಗೆ ಮುಂದಾಗಬೇಕು ಎಂದು ಹೇಳಿದರು.
ಈ ವೇಳೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಹಿರಿಯರು, ವಿವಿಧ ಸಂಘಟಣೆಗಳ ಮುಖ್ಯಸ್ಥರು ಮಾತನಾಡಿದರು. ಭಾವಾಸಾಬ್ ಬೆಟಗೇರಿ, ಅಶೋಕ ದೇಶಣ್ಣವರ, ಅಭಿಷೇಕ ನವಲಗುಂದ, ಯಲ್ಲಪ್ಪ ಕಿರೇಸೂರ, ಅನೀಲ ನವಲಗುಂದ, ಯಮನೂರ ನರಗುಂದ, ಮಹೇಶ ಮೇಗೂರ, ಅಬ್ದುಲ್ ಹೊಸಮನಿ ಇದ್ದರು

ವರದಿ ವೀರಣ್ಣ ಸಂಗಳದ

error: