March 29, 2024

Bhavana Tv

Its Your Channel

75ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ದ ಅಂಗವಾಗಿ ಪಾದಯಾತ್ರೆ

ರೋಣ, : ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕು 75 ವರ್ಷಗಳು ತುಂಬುತ್ತಿದ್ದು, ಅದರ ಪ್ರಯುಕ್ತ ಸ್ವಾತಂತ್ರ ಅಮೃತಮಹೋತ್ಸವ ಅಂಗವಾಗಿ ರೋಣ ಮತಕ್ಷೇತ್ರದಿಂದ 9 ದಿನಗಳ ಕಾಲ ಕಾಂಗ್ರೆಸ್ ವತಿಯಿಂದ 166 ಕಿ.ಮೀ. ಪಾದಯಾತ್ರೆಯನ್ನು ಹಮ್ಮಿ ಕೊಳ್ಳಲಾಗಿದ್ದು ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಮಾಜಿ ಶಾಸಕ, ಗದಗ ಜಿಲ್ಲಾ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.

ಅವರು ತಾಲ್ಲೂಕಿನ ಸರ್ಜಾಪುರ ಗ್ರಾಮದಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರ‍್ಯಪೂರ್ವ ಮತ್ತು ಸ್ವಾತಂತ್ರ‍್ಯದ ನಂತರದ ಭಾರತದ ರಾಜಿಕೀಯದಲ್ಲಿ ಕಾಂಗ್ರೆಸ್ ಪಕ್ಷವು ಕೈಗೊಂಡಿರುವ ಸಾಧನೆಗಳ ಕುರಿತಾಗಿ, ಹಾಗೂ 75ನೇ ಸ್ವಾತಂತ್ರೋತ್ಸವ ದಿನಾಚರಣೆಯ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಸಲುವಾಗಿ ಇಂದಿನಿAದ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗಾಂಧೀಜಿ ಅವರ ಅನೇಕ ಸತ್ಯಾಗ್ರಗಳು ದೇಶಕ್ಕೆ ಅನೇಕ ಕೊಡುಗೆಯನ್ನು ನೀಡಿದೆ. 1978- 79 ರಲ್ಲಿ ಇಂದೀರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಸೃಷ್ಟಿಯಾದ ಆಹಾರದ ಅಭಾವವನ್ನು ಬೇರೆ ದೇಶಗಳಿಂದ ಅಮದು ಮಾಡಿಕೊಂಡು ದೇಶದ ಜನರ ಹಸಿವನ್ನು ನಿಗಿಸಿದ್ದಾರೆ. ಹಾಗೂ ದೇಶದ ರೈತರಿಗೆ ನಮ್ಮ ಪಕ್ಷ ಆನೇಕ ನೀರಾವರಿ ಯೋಜನೆಗಳನ್ನು ಹಾಗೂ ಡ್ಯಾಮ್‌ಗಳನ್ನು ನಿರ್ಮಿಸಿ, ನೀರಾವರಿ ಯೋಜನೆ ಮಾಡಿ ರೈತರಿಗೆ ಅನುಕೂಲಮಾಡಿದೆ. ಇವೆಲ್ಲವು ಜನರಿಗೆ ಕಾಂಗ್ರೆಸ್ ನೀಡಿದ ಕೊಡುಗೆ ತಿಳಿಯಬೇಕಾಗಿದೆ. ಪಾದಯಾತ್ರೆ ಗೆ ಮುಖಂಡರು, ಕಾರ್ಯಕರ್ತರು ಸೇರಿದಂತೆ ಜನರು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು, ಮತ್ತು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಜನರಿಗೆ ಕಾಂಗ್ರೆಸ ಪಕ್ಷದ ಕೊಡುಗೆ ಹಾಗೂ ದೇಶದ ಪರಂಪರೆಯನ್ನು ಜನರಿಗೆ ಮನದಟ್ಟು ಮಾಡಬೇಕು. ಹಾಗೂ ದೇಶಕ್ಕಾಗಿ ಮಡಿದ ಆನೇಕ ಮಹನೀಯರ ಬಗ್ಗೆ ಎಳೆಯಾಗಿ ತಿಳಿಸಬೇಕು ಎಂದರು.

ಪ್ರಚಾರದ ಪರವಾಗಿಲ್ಲ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸುವ ಹಕ್ಕು ಇರುವುದು ಕಾಂಗ್ರೆಸ್ ಪಕ್ಷ ಗೆ ಹೊರತು ಯಾವ ಪಕ್ಷಕು ಇಲ್ಲ, ದೇಶಕ್ಕಾಗಿ ಕಾಂಗ್ರೆಸ್ ಪಕ್ಷ ಅನೇಕ ಜನಪರ ಯೋಜನೆಗಳನ್ನು ನೀಡಿದ ಹೆಮ್ಮೆ ಪಕ್ಷಕಿದೆ. ದೇಶಕ್ಕೆ ಕಾಂಗ್ರೆಸ ಪಕ್ಷದ ಅಧಿಕಾರ ಅವಶ್ಯಕತೆ ಇದೆ ಆದರಿಂದ ಜನರು ತಿಳಿದುಕೊಂಡು ಕಾಂಗ್ರೆಸ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು. ಪಾದಯಾತ್ರೆಯಲ್ಲಿ ಡೊಳ್ಳು ಕುಣಿತ ತಂಡದವರು ಭಾಗವಹಿಸಿದ್ದರು. ಈ ವೇಳೆ ಐ.ಎಸ್.ಪಾಟೀಲ, ಕುಷ್ಟಗಿ ಮಾಜಿ ಶಾಸಕ ಹಸನಸಾಬ ದೋಟಿಹಾಳ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಮಿಥುನ,ಜಿ ವಾಟೀಲ, ಆಕ್ಷಯ ಪಾಟೀಲ, ಶರಣಗೌಡ ಪಾಟೀಲ, ವೀರಣ್ಣ ಶೆಟ್ಟರ, ಎಚ್.ಎಸ್. ಸೊಂಪೂರ, ಪ್ರಭ ಮೇಟಿ, ಮಂಜುಳಾ ಹುಲ್ಲನ್ನವರ, ಮಂಜುಳಾ ರೇವಡಿ, ಶರಣಪ್ಪ ಬೆಟಗೇರಿ, ಶಿವರಾಜ ಗೋರ್ಪಡೆ ಸಂಗು ನವಲಗುಂದ ಮಲ್ಲು ರಾಯನಗೌಡ್ರ ಅಸ್ಲಾಂ ಕೊಪ್ಪಳ ಶಿವು ಹುಲ್ಲೂರ ರಫಿಕ್ ಮದರಂಗಿ ಯಲ್ಲಪ್ಪ ಕಿರೇಸೂರ ವಿವಿಧ ಗ್ರಾಮಗಳಿದ ಬಂದAತಹ ಕಾರ್ಯಕರ್ತರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಸರ್ಜಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ವೀರಣ್ಣ ಸಂಗಳದ ರೋಣ

error: