April 25, 2024

Bhavana Tv

Its Your Channel

ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ

ರೋಣ: ಹುಲ್ಲೂರ ಗ್ರಾಮಗಳ ವಿವಿಧ ಗ್ರಾಮಗಳಲ್ಲಿ ಭೂಮಿ ಪೂಜೆ ಕಾರ್ಯಕ್ರಮ ಅಭಿವೃದ್ಧಿ ವಿಚಾರದಲ್ಲಿ ಚುನಾಯಿತ ಜನಪ್ರತಿನಿಧಿಗಳು ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುವದರ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ ಕನಸನ್ನು ನನಸಾಗಿಸಲು ಪ್ರಯತ್ನಿಸುವಂತೆ ರಾಜ್ಯ ಲೋಕೋಪಯೋಗಿ ಇಲಾಖೆ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ತಿಳಿಸಿದರು.

ತಾಲೂಕಿನ ಮಾಳವಾಡ ಗ್ರಾಮದಲ್ಲಿ ೨೪೫.ಲಕ್ಷ ಕೋಟಿ ಅಸೂಟಿ ಗ್ರಾಮದಲ್ಲಿ ೩೯೫.ಲಕ್ಷ ಕೋಟಿ ಕರಮುಡಿ ಗ್ರಾಮದಲ್ಲಿ ೨೯೫.ಲಕ್ಷ ಕೋಟಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮತ್ತು ನೂತನ ಶಾಲಾ ಕೊಠಡಿಗಳಿಗೆ ಉದ್ಘಾಟನೆ ಹಾಗೂ ಕಾಮಗಾರಿಗೆ ಭೂಮಿ ಪೂಜೆ ಹುಲ್ಲೂರ ಗ್ರಾಮಕ್ಕೆ ಅಂದಾಜು ೭.೮೦. ಲಕ್ಷ ಕೋಟಿ ರೂಗಳ ಲೋಕೋಪ ಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನದಡಿ ರಸ್ತೆ ಸಮುದಾಯ ಭವನ ದೇವಸ್ಥಾನಗಳಿಗೆ ಜೀರ್ಣೋದ್ಧಾರ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಜರಗುವ ಅಭಿವೃದ್ಧಿ ಕಾಮಗಾರಿಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಚುನಾಯಿತ ಜನಪ್ರತಿನಿಧಿಗಳ ಜೊತೆಗೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸಂಬAಧಪಟ್ಟAತೆ ಯಾವುದೇ ಅಡೆತಡೆಗಳಿದ್ದರೆ ಅವುಗಳನ್ನು ತಮ್ಮ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವಂತೆ ತಿಳಿಸಿದರು. ಸಾರ್ವಜನಿಕರು ಕಟ್ಟುವ ತೆರಿಗೆ ಹಣದಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ದೊರಕಿಸಿಕೊಡಲಾಗುತ್ತಿದ್ದು ಇದರ ಸದುಪಯೋಗವಾಗುವಂತೆ ನೋಡಿಕೊಳ್ಳುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ.

ಇಡೀ ಪ್ರಪಂಚದ ಆರ್ಥಿಕತೆ ಮೇಲೆ ಭೀಕರ ಪರಿಣಾಮ ಬೀರಿದ್ದು ಇದರಲ್ಲಿ ರಾಜ್ಯ ಸರ್ಕಾರದ ಆದಾಯವು ಕುಂಠಿತಗೊAಡಿದ್ದರೂ ಸಹ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮಗಳಿಗೆ ಮಂಜೂರಾಗುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಸ್ವ ಪ್ರತಿಷ್ಠೆಯನ್ನು ಬದಿಗೊತ್ತಿ ಗ್ರಾಮಗಳ ಅಭವೃದ್ಧಿಯತ್ತ ಗಮನಹರಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ನರಗುಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಾಳವಾಡ, ಕರಮಡಿ, ಅಸೂಟಿ, ಹುಲ್ಲೂರ ಗ್ರಾಮಗಳ, ಸಿಸಿ ರಸ್ತೆ ಅಂಬೇಡ್ಕರ್ ಭವನ ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಯನ್ನು, ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸಿದರು,.
ಹಾಗೂ ಮಾಳವಾಡ ಮತ್ತು ಹುಲ್ಲೂರು ಗ್ರಾಮಸ್ಥರ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರವನ್ನು ಮಾಡಿ ಅನುದಾನವನ್ನು ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಜಿ ಡಿ ಪಾಟೀಲ, ವಿ ಎಸ್ ಹಿರೇಮಠ, ಹೊಳೆಆಲೂರ ಮಂಡಳ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಶಿವಕುಮಾರ ನೀಲಗುಂದ, ಪ್ರಕಾಶಗೌಡ ತಿರುಕನಗೌಡ, ಅಶೋಕ ಹೆಬಳ್ಳಿ, ರಾಮನಗೌಡ ಪಾಟೀಲ, ಶಶಿಧರಗೌಡ ಪಾಟೀಲ,ಬಸವಂತಪ್ಪ ತಳವಾರ ಹಾಗೂ ಎಲ್ಲಾ ಸುತ್ತಮುತ್ತಲಿನ ಗ್ರಾಮಸ್ಥರು ಹಿರಿಯರು ಭಾಗಿಯಾಗಿದ್ದರು

ವರದಿ : ವೀರಣ್ಣ ಸಂಗಳದ ರೋಣ

error: