April 19, 2024

Bhavana Tv

Its Your Channel

ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ನದಿಯಲ್ಲಿ ಮುಳುಗಿ ಸರ್ವಾಂಗಾಸನ ಯೋಗ ಮಾಡಿದ ಹಾಸನದ ಮಂಜು ಹಳ್ಳಿ ಮೈಸೂರ್

ಹಾಸನ:- ವಿಶ್ವ ಯೋಗದಿನಾಚರಣೆಯ ಪ್ರಯುಕ್ತ ಇಲ್ಲೊಬ್ಬ ಸಾಧಕರು ನದಿಯಲ್ಲಿ ಮುಳುಗಿ ಸರ್ವಾಂಗಾಸನ ಯೋಗ ಮಾಡುವ ಮೂಲಕ ವಿಶಿಷ್ಟವಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಸರ್ವಾಂಗಾಸನ ಎಂದರೆ ಕತ್ತು, ಹೆಗಲು ಮತ್ತು ಮೊಣಕೈಗಳನ್ನು ಭೂಮಿಗೆ ತಾಗಿಸಿ, ದೇಹ ಮತ್ತು ಕಾಲುಗಳನ್ನು ಭೂಮಿಗೆ ಲಂಬವಾಗಿ ನಿಲ್ಲಿಸಿ ಆಚರಿಸುವ ಆಸನ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಂಜು ಹಳ್ಳಿ ಮೈಸೂರ್ ಅವರು ಇಂಥ ಆಸನವನ್ನು ವಿಭಿನ್ನವಾಗಿ ಆಚರಿಸಿದ ಅಪರೂಪದ ಯೋಗ ಸಾಧಕರು. ಕಾವೇರಿ ನದಿಯ ಹರಿಯುವ ನೀರಿನಲ್ಲಿ ಮುಳುಗಿ 2 ನಿಮಿಷದ 40 ಸೆಕೆಂಡ್ ಸರ್ವಾಂಗಾಸನ ಯೋಗ ಮಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿರುವ ಇವರು 16 ವರ್ಷದಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ.

“ತಂದೆ ಹಾಗೂ ತಾತರ ಶಿವಭಕ್ತಿಯ ಪೂಜೆ, ಧ್ಯಾನವೇ, ನನಗೆ ಯೋಗಾಸನದಲ್ಲಿ ಆಸಕ್ತಿ ಮೂಡಲು ಪ್ರೇರಣೆಯಾಯಿತು”. ಎಂಬುದು ಮಂಜು ಅವರ ಮನದಾಳದ ಮಾತು.

ವರದಿ: ನರಸಿಂಹ ನಾಯ್ಕ್ ಹರಡಸೆ

error: