ಭಾರತವಲ್ಲದೇ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮಾವಿನ ಹಣ್ಣಿಗೆ ವಿಶೇಷ ಸ್ಥಾನಮಾನವಿದೆ. ಜಗತ್ತಿನ ಮೂಲೆ ಮೂಲೆಯಲ್ಲಿ ಮಾವಿನ ಹಣ್ಣಿನ ಪ್ರಿಯರಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾವಿನ ಬೆಳೆ ಬಹಳ ಕಡಿಮೆ. ಹಾಗಾಗಿ ಭಾರತ ಸೇರಿ ಏಷ್ಯಾದ ರಾಷ್ಟಗಳಿಂದ ಅಮೆರಿಕ ಮತ್ತು ಯುರೋಪ್‌ಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾವಿನ ಹಣ್ಣು ರಫ್ತಾಗುತ್ತದೆ. ವಿದೇಶಗಳಿಗೆ ರಫ್ತಾಗುವ ಮಾವಿನ ಹಣ್ಣುಗಳು ವಿಶೇಷ ಗುಣಮಟ್ಟವನ್ನು ಹೊಂದಿರುತ್ತವೆ ಮತ್ತು ಅವುಗಳ ಬೆಲೆಯೂ ಅಷ್ಟೇ ಹೆಚ್ಚಾಗಿರುತ್ತದೆ. ನಾವು ಮಾವಿನ ಹಣ್ಣಿನ ಬೆಲೆ ಕೆ.ಜಿ.ಗೆ ೧೦೦ ರೂಪಾಯಿ ಎಂದರೆ ದುಬಾರಿ ಎಂದುಕೊಳ್ಳುತ್ತೇವೆ. ಆದರೆ ಇಲ್ಲೊಂದು ಮಾವಿನ ಹಣ್ಣಿದೆ. ಇದರ ಬೆಲೆಯನ್ನು ಕೇಳಿದರೆ ನಾವೆಲ್ಲರೂ ಆಶ್ಚರ್ಯಕ್ಕೆ ಒಳಗಾಗುತ್ತೇವೆ. ಹಾಗೇ ಇದು ನಿಜವೇ ಎಂದು ಪ್ರಶ್ನಿಸುತ್ತೇವೆ…
ಹೌದು ಇದು ಅಂತಹದ್ದೇ ಮಾವಿನ ಹಣ್ಣು
ನೋಡಲು ಅಷ್ಟೇ ಸುಂದರ. ಅಷ್ಟೇ ರುಚಿಕರ. ಸುವಾಸನೆ ಭರಿತ ತಳಿ. ಅಷ್ಟೇ ದುಬಾರಿ. ಒಂದು ಕೆಜಿಗೆ ೨.೭ ಲಕ್ಷ ರುಪಾಯಿ. ಅದು ಯಾವ ಮಾವಿನ ಹಣ್ಣು ಎನ್ನುತ್ತೀರಾ ? ಅದೇ ಜಪಾನ್ ಮೂಲದ ತಳಿಯ ಮಾವಿನ ಹಣ್ಣು ಮಿಯಝಾಕಿ. ಕೆಂಪು-ಬೂದು ಬಣ್ಣದ ಈ ಮಾವಿನ ಹಣ್ಣಿಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆಯಿದೆ. ಮಧ್ಯಪ್ರದೇಶದ ಕೃಷಿಕ ದಂಪತಿಯೊAದು ಮಿಯಝಾಕಿ ತಳಿಯ ಮಾವಿನ ಹಣ್ಣನ್ನು ತಮ್ಮ ಹೊಲದಲ್ಲಿ ಬೆಳೆದು ಅಪಾರ ಲಾಭ ಗಳಿಸಿದ್ದಾರೆ.
ದುಬಾರಿ ಈ ಮಾವಿನ ಹಣ್ಣನ್ನು ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗಾಗಿ ಕೃಷಿ ದಂಪತಿ ಈ ಮಾವಿನ ಹಣ್ಣಿನ ತೋಟಕ್ಕೆ ಗಾರ್ಡ್ಗಳನ್ನು ನೇಮಿಸಿದ್ದಾರೆ.
ಮಧ್ಯಪ್ರದೇಶದ ಈ ಕೃಷಿ ದಂಪತಿ ಬೆಳೆದಿರುವ ಮಿಯಝಾಕಿ ಮಾವಿನ ಹಣ್ಣಿನ ಒಂದು ಚಿಕ್ಕ ಹೋಳಿನ ಬೆಲೆಯೇ ಸುಮಾರು ೧,೦೦೦ ರೂಪಾಯಿಗೂ ಅಧಿಕವಾಗಿದೆ ಎಂದರೆ ನೀವು ನಂಬಲಾರರಿ. ಆದರೆ ಇದು ಸತ್ಯ. ಮಧ್ಯಪ್ರದೇಶದ ಈ ಕೃಷಿಕರು ಬೆಳೆದ ಮಿಯಝಾಕಿ ಮಾವಿನ ಹಣ್ಣು ಬೂದು ಬಣ್ಣವನ್ನು ಪಡೆದುಕೊಂಡಿದೆ. ಹಾಗೇ ವಿಶೇಷ ಸುವಾಸನೆಯನ್ನು ಹೊಂದಿದೆ.
೧೯೭೦-೮೦ ರಲ್ಲಿ ಜಪಾನ್ ದೇಶದ ಮಿಯಝಾಕಿ ಪಟ್ಟಣದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳೆಯಲಾದ ಈ ಮಾವಿನ ತಳಿ ಆ ಪಟ್ಟಣದ ಹೆಸರನ್ನೇ ಪಡೆದುಕೊಂಡು ಜಗತ್ತಿನಾದ್ಯಂತ ಮಿಯಝಾಕಿ ಎಂದೇ ಪ್ರಸಿದ್ಧವಾಗಿದೆ. ಜಪಾನ್‌ನಲ್ಲಿ ಆರಂಭವಾದ ಮಿಯಝಾಕಿ ತಳಿಯ ಬೆಳೆ ಕೊರಿಯಾ, ಮಲೇಷ್ಯಾ, ಥೈಲಾಂಡ್ ಹೀಗೆ ಭಾರತದ ಮಧ್ಯಪ್ರದೇಶದವರೆಗೂ ಬಂದಿದೆ. ಸಾಧಾರಣ ಮಾವಿಗಿಂತ ೧೫% ಹೆಚ್ಚು ಸಕ್ಕರೆಯ ಅಂಶವನ್ನು ಹೊಂದಿರುವ ಈ ಮಿಯಝಾಕಿ ಮಾವು ಅತ್ಯಂತ ಕಡಿಮೆ ಆಮ್ಲದ ಗುಣವನ್ನು ಹೊಂದಿದೆ. ಏಪ್ರಿಲ್ ನಿಂದ ಆಗಸ್ಟ್ ತಿಂಗಳವರೆಗೆ ಹಣ್ಣನ್ನು ಬಿಡುವ ಈ ತಳಿ ಉಷ್ಣವಲಯದಲ್ಲಿ ಮಾತ್ರ ಚೆನ್ನಾಗಿ ಫಲ ಕೊಡುತ್ತದೆ.
ಕಳೆದ ವರ್ಷ ಅಂತರರಾಷ್ಟಿಯ ಮಾರುಕಟ್ಟೆಯಲ್ಲಿ ೨.೭ ಲಕ್ಷ ಬೆಲೆಗೆ ಮಾರಾಟವಾಗಿದ್ದ ಮಿಯಝಾಕಿ ಬೆಲೆ ಈ ವರ್ಷ ೩ ಲಕ್ಷ ರೂಪಾಯಿ ತಲುಪುವ ನಿರೀಕ್ಷೆಯನ್ನು ರೈತರು ಇಟ್ಟುಕೊಂಡಿದ್ದಾರೆ. ಕೆಂಪು ಬಣ್ಣದ ಡೈನೋಸಾರ್ ಮೊಟ್ಟೆಯನ್ನು ಹೋಲುವ ಈ ಮಿಯಝಾಕಿ ಹಣ್ಣು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹವಾ ಸೃಷ್ಟಿಸಿದೆ. ಈ ಹಣ್ಣಿನ ವಿವರ ಕೇಳಿದ ನೆಟ್ಟಿಗರು ದುಬಾರಿ ಬೆಲೆಯಿಂದಾಗಿ ಮಿಯಝಾಕಿ ಕೊಳ್ಳುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
source: Google Photo
More Stories
ಪಾಕ್ ಮಾಜಿ ನಾಯಕ ಶಾಹೀದ್ ಅಫ್ರಿದಿಗೆ ಕೋವಿಡ್-19 ಸೋಂಕು ದೃಢ
ಕರೊನಾ ಮಹಾಮಾರಿ ಮನುಷ್ಯನ ದೇಹವನ್ನು ಹೇಗೆಲ್ಲ ಕಾಡುತ್ತಿದೆ ನೋಡಿ. ಯುವ ಸೋಂಕಿತರಿಗೂ ಪ್ರಾರ್ಶ್ವವಾಯು ಸಮಸ್ಯೆ.
ವುಹಾನ್ನಲ್ಲಿ ಲಾಕ್ಡೌನ್ ಭೀಕರತೆ ಬಿಚ್ಚಿಟ್ಟ ಲೇಖಕಿಗೆ ಜೀವ ಬೆದರಿಕೆ: ‘ವುಹಾನ್ ಡೈರಿ’ಯಲ್ಲಿದೆ ಚೀನಾದ ಕಟು ಕಹಿ ಸತ್ಯ!