April 20, 2024

Bhavana Tv

Its Your Channel

ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ

ಕೊಡಗು:-ಕೂಡುಗೆ ಗಣಪತಿ ಪೆಂಡಾಲ್ ನಲ್ಲಿ ತುಂಬಾ ವರ್ಷದಿಂದ ಮಲಗುತ್ತಿದ್ದ 3ಜನ ಅನಾಥರನ್ನು ಕೂಡಿಗೆ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮತ್ತು ಸದಸ್ಯರ ಸಹಕಾರದೊಂದಿಗೆ ಹಾಗೂ ಕೂಡಿಗೆ ಗ್ರಾಮಸ್ಥರ ಸಹಕಾರದೊಂದಿಗೆ 3ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳಾದ ಶಶಿಕುಮಾರ್ (ಅಟೆಂಡರ್) ಹಾಗೂ ಮಂಜು ಪೌರಕಾರ್ಮಿಕರು ಗ್ರಾಮ ಪಂಚಾಯಿತಿ ಕೂಡಿಗೆ ಖುದ್ದಾಗಿ ಹೋಗಿ ಸೇರಿಸಲಾಯಿತು.

ಕೊಡಗು ಜಿಲ್ಲೆಯ ಕಾವೇರಿ ತಾಲ್ಲೂಕಿನ (ಕುಶಾಲನಗರ ) ಕೂಡಿಗೆ ಗ್ರಾಮ ಪಂಚಾಯಿತಿಗೆ ಸೇರಿದ ಗಣಪತಿ ಪೆಂಡಾಲ್ ನಲ್ಲಿ ತುಂಬಾ ವರ್ಷದಿಂದ 3ಜನ ಅನಾಥರು ಈ ಪೆಂಡಾಲ್ ನಲ್ಲಿ ಮಲಗುತ್ತಿದ್ದರು ಇದನ್ನು ಗಮನಿಸಿದ ಪತ್ರಕರ್ತರಾದ ಕೂಡಿಗೆ ಗಣೇಶ್ ರವರು ಗ್ರಾಮ ಪಂಚಾಯಿತಿಗೆ ತಿಳಿಸಿದರು . ಇದನ್ನರಿತ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಾದ ಪುನೀತ್ ಮತ್ತು ಪತ್ರಕರ್ತರಾದ ಗಣೇಶ್ ಇವರಿಬ್ಬರು ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಅವರನ್ನು ಫೋನ್ ನಲ್ಲಿ ಸಂಪರ್ಕಿಸಿದರು ತಕ್ಷಣ ಕರವೇ ಫ್ರಾನ್ಸಿಸ್ ಡಿಸೋಜಾ ರವರು ಬೆಂಗಳೂರಿನ ಆಟೋರಾಜ ಫೌಂಡೇಶನ್ ಗೆ ಸೇರಿಸುವೆ ಎಂದುಹೇಳಿದಾಗ ಗ್ರಾಮ ಪಂಚಾಯಿತಿಯವರು ಒಪ್ಪಿಕೊಂಡರು .

ಪಂಚಾಯಿತಿ ಕಡೆಯಿಂದ ನಮ್ಮ ಕಡೆಯಿಂದ ಯಾವೆಲ್ಲ ಸೌವಲತ್ತು ಇದೆ ಎಲ್ಲವನ್ನೂ ಕೊಡುತ್ತೆವೆಂದು ಒಪ್ಪಿಕೊಂಡರು . ಹಾಗಾಗಿ ಆಂಬ್ಯುಲೆನ್ಸ್ ನಲ್ಲಿ 3ಜನ ಅನಾಥರನ್ನು ಇದರಲ್ಲಿ ಒಬ್ಬ ಮಹಿಳೆ ಅವರು ಅಂದಾಜು ವಯಸ್ಸು 75 ವರ್ಷ ಹಾಗೂ ಇನ್ನೆರಡು ಜನ ವೃದ್ಧರು ಇವರಿಗೂ ಸಹ ಅಂದಾಜು ವಯಸ್ಸು 75 ರಿಂದ 80 ಆಗಿರುತ್ತದೆ . ಮಹಿಳೆಗೆ ಏಳಲು ಸಹ ಆಗದೆ ಮಲಗಿದ ಜಾಗದಲ್ಲೇ ಇದ್ದರು . ಇನ್ನೊಬ್ಬ ವೃದ್ಧರಿಗೆ ಕಣ್ಣು ಕಾಣಿಸದ ಸ್ಥಿತಿಯಲ್ಲಿದ್ದರು.
ಇಂದು ಈ 3 ಜನರನ್ನು ಬೆಂಗಳೂರು ಆಟೋರಾಜ ಫೌಂಡೇಶನ್ ಅನಾಥಾಶ್ರಮಕ್ಕೆ ಸೇರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗಳಾದ ಪುನೀತ್ , ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಹಮೀದ್, ಕೂಡಿಗೆ ಪ್ರಸಿದ್ಧಿ ಪತ್ರಕರ್ತರಾದ ಗಣೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಶಶಿಕುಮಾರ್ (ಅಟೆಂಡರ್ ) ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರಿಗೆ, ಮಂಜು ಪೌರಕಾರ್ಮಿಕನಿಗೆ
ಕರವೇ ಕಾರ್ಯಕರ್ತರಿಂದ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಕರವೇ ಫ್ರಾನ್ಸಿಸ್ ಡಿಸೋಜಾ ಹೇಳಿದರು

error: