April 17, 2024

Bhavana Tv

Its Your Channel

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ, ಪ್ರತಿಕ್ರಿಯೆ ನೀಡಿದ ಸಚಿವರು,

ಕೋಲಾರ ; ಮೃತರು ಆಕ್ಸಿಜನ್ ಸಮಸ್ಯೆಯಿಂದಲೇ ಸಾವನ್ನಿಪ್ಪಿದ್ದಾರೆ ಎನ್ನಲು ಆಗೊದಿಲ್ಲ, ಆಸ್ಪತ್ರೆಗೆ ಬಂದಾಗಲು ಇಬ್ಬರ ಪರಿಸ್ತಿತಿ ಗಂಭೀರವಾಗಿತ್ತು ಎಂದು ತಿಳಿದುಬಂದಿದೆ, ಸೋಂಕಿತರ ಡೆತ್ ರಿಪೋರ್ಟ್ ಕೊಡಲು ಹೇಳಿದ್ದೇನೆ, ಪ್ರತಿ ಸಾವಿನ ಡೆತ್ ಬಗ್ಗೆಯು ಆಡಿಟ್ ನಡೆಸಲೇಬೇಕು, ನಿರ್ಲಕ್ಷ್ಯ ಆಗಿದ್ದಲ್ಲಿ, ಸೋಂಕಿತರ ಸಾವಿನ ಬಗ್ಗೆ ಕೂಲಂಕುಷ ತನಿಖೆ ನಡೆಸುವೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದರು.

ಇನ್ನು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಹಲವು ನ್ಯೂನ್ನತೆಗಳು ಎದ್ದು ಕಾಣ್ತಿದ್ದು, ಸೋಂಕಿತರ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಜಿಲ್ಲಾಸ್ಪತ್ರೆ ವೈದ್ಯಾದಿಕಾರಿ ಡಾ ಎಸ್ ಜಿ ನಾರಾಯಣಸ್ವಾಮಿ ಮತ್ತು ಆರ್ ಎಮ್ ಒ ನಾರಾಯಣಸ್ವಾಮಿ ಇಬ್ಬರು ವೈದ್ಯಾದಿಕಾರಿಗಳನ್ನ ಅಮಾನತು ಮಾಡಿರುವುದಾಗಿ ತಿಳಿಸಿದರು, ಇಬ್ಬರು ಅಧಿಕಾರಿಗಳು ರಿಟೈರ್ ಮೆಂಟ್ ಗೆ ಕೇವಲ ೩ ತಿಂಗಳಿದೆ ಎನ್ನುವ ಉದ್ದೇಶದಿಂದ ಸೋಂಕಿತರಿಗೆ ಚಿಕಿತ್ಸೆ ಕೊಡಿಸುವಲ್ಲಿ ನಿರ್ಲಕ್ಷ್ಯ ತೋರಿದ್ದು ಕಂಡುಬAದಿದೆ ಹಾಗಾಗಿ ಅಮಾನತು ಮಾಡಿ ಒಳ್ಳೆಯ ಅಧಿಕಾರಿಗಳನ್ನ ನೇಮಿಸುವುದಾಗಿ ತಿಳಿಸಿದ್ದಾರೆ.

error: