March 29, 2024

Bhavana Tv

Its Your Channel

ಹಿರಿಯ ಬಂಡಾಯ ಸಾಹಿತಿ (ಚಂಪಾ) ಚಂದ್ರಶೇಖರ ಪಾಟೀಲ ನಿಧನಕ್ಕೆ ಸಂತಾಪ.

ಕುಷ್ಟಗಿ:- ಕುಷ್ಟಗಿಯ ಹಳೇ ಪ್ರವಾಸಿ ಮಂದಿರದಲ್ಲಿ ಸಮುದಾಯ ಸಂಘಟನೆಯಿಂದ ಚಂಪಾರವರ ಶ್ರದ್ಧಾಂಜಲಿ ಸಭೆ ನಡೆಸಲಾಯಿತು, ಸಭೆಯಲ್ಲಿ ಹೋರಾಟಗಾರರು ಹಾಗೂ ಖ್ಯಾತ ಪತ್ರಕರ್ತರಾದ ಗಂಗಾಧರ ಕುಷ್ಟಗಿಯವರು ಮಾತನಾಡಿ, ಕನ್ನಡ ನಾಡಿನ ಕವಿ,ನಾಟಕಕಾರ, ಪತ್ರಿಕಾ ಸಂಪಾದಕ,ಆಡಳಿತಗಾರ,ಬಂಡಾಯ ಮತ್ತು ನವೋದಯ ಕವಿ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದ ಚಂಪಾ ಎಂದೇ ಖ್ಯಾತರಾಗಿದ್ದ ಪ್ರೊ.ಚಂದ್ರಶೇಖರ್ ಪಾಟೀಲ ಬೆಂಗಳೂರಿನ ಕೋಣನಕುಂಟೆಯ ನಿಧನರಾದ ಸುದ್ದಿ ತಿಳಿದು ಬೇಸರವಾಯಿತು..
ಚಂಪಾರವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ,ಮೈಸೂರಿನಲ್ಲಿ ನಡೆದ ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ,ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ,ಸಂಕ್ರಮಣ ಮಾಸಪತ್ರಿಕೆಯ ಸಂಪಾದಕರಾಗಿ,ಗೋಕಾಕ ವರದಿ ಜಾರಿಗಾಗಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ರಾಜ್ಯಾದ್ಯಂತ ಡಾ. ರಾಜಕುಮಾರರವರ ಜೊತೆ ಕನ್ನಡ ಜಾಗೃತಿ ಸಭೆಗಳಲ್ಲಿ ಭಾಗವಹಿಸಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಹೀಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರ ಜೊತೆಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. “ಕನ್ನಡ ಕನ್ನಡ ಬರ್ರೀ ನಮ್ಮ ಸಂಗಡ” ಕವಿತೆಯ ಖ್ಯಾತಿ ಹಾಗೂ ಕನ್ನಡ ನಾಡು ನುಡಿ ಸಂಸ್ಕೃತಿಯ ಹೋರಾಟಗಾರರು, ಇವರ ಅಗಲಿಕೆಯಿಂದ ಕನ್ನಡಾಂಬೆಯ ಸುಪುತ್ರನನ್ನು ಕಳೆದುಕೊಂಡAತ್ತಾಗಿದೆ.ಸಾಹಿತ್ಯ ಸಾರಸತ್ವ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಚಂಪಾರವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮುದಾಯದ ಅಧ್ಯಕ್ಷರಾದ ನಬಿಸಾಬ ಕುಷ್ಟಗಿ, ಮಾಜಿ ಅಧ್ಯಕ್ಷರಾದ ಮೋಹನ್ ಲಾಲ್ ಜೈನ್, ಪುರಸಭೆ ಸದಸ್ಯರಾದ ಜಯತೀರ್ಥ ಆಚಾರ, ರವೀಂದ್ರ ಬಾಕಳೆ ಮಾತನಾಡಿದರು. ಸಮುದಾಯದ ಉಪಾಧ್ಯಕ್ಷರಾದ ಅಡಿವೆಪ್ಪ ಕುಷ್ಟಗಿ, ಸಂಘಟನಾ ಕಾರ್ಯದರ್ಶಿಯಾದ ಶಿಕ್ಷಕ ನಾಗರಾಜ ಪಟ್ಟಣಶೆಟ್ಟರ, ಮಾಜಿ ಪುರಸಭೆ ಸದಸ್ಯರಾದ ಚಂದ್ರಶೇಖರ ಹಿರೇಮನಿ, ಸಮುದಾಯದ ಸದಸ್ಯರಾದ ಶಾಂತಪ್ಪ ಹಡಪದ, ಮುರ್ತುಜಾಸಾಬ,ಕಿರಣ ಕುಮಾರ್ ,ಶರಣಪ್ಪ ಲೈನದ್, ಅಬ್ದುಲ ಕಲಾಂ ಮುಂತಾದವರು ಉಪಸ್ಥಿತರಿದ್ದರು.
ವರದಿ :-ವೇಣುಗೋಪಾಲ ಮದ್ಗುಣಿ

error: