April 19, 2024

Bhavana Tv

Its Your Channel

ಮುಟ್ಟಿನ ದಿನಗಳಲ್ಲಿನ ಸ್ವಚ್ಛತೆ ಬಗ್ಗೆ ನೆರೇಗಾ ಕಾರ್ಮಿಕರಿಗೆ ಜಾಗೃತಿ ಕಾರ್ಯಕ್ರಮ

ಮಳವಳ್ಳಿ : ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮುಟ್ಟಿನ ನೈರ್ಮಲ್ಯ ನಿರ್ವಹಣೆಯಲ್ಲಿ ಇಂದಿಗೂ ಹಳೆಯ ಕ್ರಮಗಳನ್ನೇ ಅನುಸರಿಸುತ್ತಿದ್ದಾರೆ. ಆದರೆ ಇದು ಅನೇಕ ರೀತಿ ಸಮಸ್ಯೆಗಳಿಗೆ ಕಾರಣವಾವಗುತ್ತದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷರಾದ ದೇವಿ ಹೇಳಿದರು.

ಭಾರತೀಯ ಸಮಾಜ ಕಾರ್ಯ ಸಂಸ್ಥೆಯಿAದ ಋತುಚಕ್ರ ನೈರ್ಮಲ್ಯ ದಿನದ ಅಂಗವಾಗಿ ಮಳವಳ್ಳಿ ತಾಲ್ಲೂಕು ಆಲದ ಹಳ್ಳಿ ಗ್ರಾಮದಲ್ಲಿ ಮುಟ್ಟಿನ ದಿನಗಳಲ್ಲಿನ ಸ್ವಚ್ಛತೆ ಬಗ್ಗೆ ನೆರೇಗಾ ಕಾರ್ಮಿಕರಿಗೆ ಜಾಗೃತಿ ಕಾರ್ಯಕ್ರಮ ಹಾಗೂ ಕೋವಿಡ್-೧೯ರ ಅರೋಗ್ಯ ಪರಿಕರಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿಗೂ ನಮ್ಮ ದೇಶದಲ್ಲಿ ಹೆಚ್ಚಿನ ಮಹಿಳೆಯರು ಮುಟ್ಟಿನ ಮತ್ತು ಅದಕ್ಕೆ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ ಮತ್ತು ಈ ಸಮಯದಲ್ಲಿ ತೆಗೆದುಕೊಳ್ಳ ಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸಹ ಅವರಿಗೆ ತಿಳಿದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ, ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಅಥವಾ ಕಾಳಜಿಯ ಕೊರತೆಯಿಂದಾಗಿ ನಗರ ಪ್ರದೇಶಗಳಿಗಿಂತ ವಿವಿಧ ಸಮಸ್ಯೆಗಳು ಮತ್ತು ಸೋಂಕುಗಳನ್ನು ಎದುರಿಸುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತೀಯ ಸಮಾಜ ಕಾರ್ಯ ಸಂಸ್ಥೆಯ ಟ್ರಸ್ಟಿಯಾದ ಕೆ.ನಂದಿನಿ ಮಾತನಾಡಿ, ನಮ್ಮ ದೇಶದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬಟ್ಟೆಗಳನ್ನು ಬಳಸುತ್ತಾರೆ. ಮಹಿಳೆಯ ವಯಸ್ಸು ಏನೇ ಇರಲಿ, ಪ್ರತಿಯೊಬ್ಬರೂ ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ, ಪ್ರತಿ ೬ ಗಂಟೆಗಳ ನಂತರ ಸ್ಯಾನಿಟರಿ ನ್ಯಾಪ್ಕಿನ್ ಅಥವಾ ಪ್ಯಾಡ್ ಅನ್ನು ಬದಲಾಯಿಸಬೇಕು ಎಂದು ಹೇಳಿದರು
ಸದರಿ ಕಾರ್ಯಕ್ರಮದಲ್ಲಿ ಭಾರತೀಯ ಸಮಾಜ ಕಾರ್ಯ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಯಾದ ಸಿದ್ಧರೂಡ ಆರ್ ಶೇರೆವಾಡ್, ಹಾಡ್ಲಿ ಪಂಚಾಯಿತಿ ಅಧ್ಯಕ್ಷ ಅಶ್ವಿನಿ, ಉಪಾಧ್ಯಕ್ಷ ನಟರಾಜು, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಲಿಂಗರಾಜು, ಸುನೀತ, ಮಂಜುಳ, ತಿಮ್ಮೇಗೌಡ, ಚಂದ್ರ ಕಾಗೇಪುರ, ಪ್ರದೀಪ್ ಹೊಸಹಳ್ಳಿ ಮತ್ತಿತರು ಭಾಗವಹಿಸಿದರು..
ವರದಿ ; ಮಲ್ಲಿಕಾರ್ಜುನ ಸ್ವಾಮಿ, ಮಳವಳ್ಳಿ

error: