June 22, 2021

Bhavana Tv

Its Your Channel

ನಾಡಿನ ಹಿರಿಯ ರಾಜಕೀಯ ಮುತ್ಸದ್ಧಿ ಮಂಡ್ಯದ ಗಾಂಧಿ, ಮಾಜಿ ಸ್ಪೀಕರ್ ಕೃಷ್ಣರ ಪುಣ್ಯತಿಥಿ

ಕೃಷ್ಣರಾಜಪೇಟೆ ; ನಾಡಿನ ಹಿರಿಯ ರಾಜಕೀಯ ಮುತ್ಸದ್ಧಿ ಮಂಡ್ಯದ ಗಾಂಧಿ, ಮಾಜಿ ಸ್ಪೀಕರ್ ಕೃಷ್ಣರ ಪುಣ್ಯತಿಥಿ ಕಾರ್ಯಕ್ರಮವು ಕೃಷ್ಣರ ಹುಟ್ಟೂರು ಕೊತ್ತಮಾರನಹಳ್ಳಿ ಗ್ರಾಮದಲ್ಲಿ ಸಂಪ್ರದಾಯಬದ್ಧವಾಗಿ ನಡೆಯಿತು …

ಕೃಷ್ಣರ ಧರ್ಮಪತ್ನಿ ಇಂದ್ರಮ್ಮ, ಪುತ್ರಿ ಮಂಜುಳಾ ಮತ್ತು ಅಳಿಯ ಶ್ರೀಧರ್ ಅಂತಿಮ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಸಚಿವ ಡಾ.ನಾರಾಯಣಗೌಡ ಮಾತನಾಡಿ ಮಾಜಿಸ್ಪೀಕರ್ ಕೃಷ್ಣರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಕೃಷ್ಣಾರವರು ಕೆ.ಆರ್.ಪೇಟೆಗೆ ಮಂಜೂರು ಮಾಡಿಸಿ ತಂದಿರುವ ಸರ್ಕಾರಿ ಎಂಜಿನಿಯರಿAಗ್ ಕಾಲೇಜು ಆವರಣದಲ್ಲಿ ಕೃಷ್ಣರ ಪುತ್ಥಳಿಯನ್ನು ಸ್ಥಾಪಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರಲ್ಲದೇ ಕೆ.ಆರ್.ಪೇಟೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕೃಷ್ಣ ಅವರ ದಾರಿಯಲ್ಲಿ ಸಾಗಿ ಮೌಲ್ಯಯುತ ರಾಜಕಾರಣ ಮಾಡುವುದಾಗಿ ತಿಳಿಸಿದರು..
ರಿಯ ಪತ್ರಕರ್ತರು.. ಗಾಂಧಿವಾದಿಗಳಾದ ಕೌಡ್ಲೆ ಚನ್ನಪ್ಪ ಸರ್ ಕೃಷ್ಣರ ಬಗ್ಗೆ ಮಾತನಾಡಿದರು,

ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ, ಮಂಡ್ಯ ಜಿಲ್ಲೆ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್ ಮುಲ್ ಮಾಜಿಅಧ್ಯಕ್ಷ ಎಂ.ಬಿ.ಹರೀಶ್, ನಿರ್ದೇಶಕರಾದ ಕೆ.ಜಿ.ತಮ್ಮಣ್ಣ, ಹೆಚ್.ಟಿ.ಮಂಜು, ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷರಾದ ಕೆ.ಎಸ್.ಪ್ರಭಾಕರ್, ಎಸ್.ಅಂಬರೀಶ್, ಹಿರಿಯ ರಾಜಕೀಯ ಮುತ್ಸದ್ಧಿ ಕೌಡ್ಲೆಚನ್ನಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಮುಖಂಡರಾದ ಅಘಲಯ ಮಂಜುನಾಥ, ಬಸ್ ಕೃಷ್ಣೇಗೌಡ, ನಾಟನಹಳ್ಳಿ ಗಂಗಾಧರ, ಕೊತ್ತಮಾರನಹಳ್ಳಿ ಮಂಜುನಾಥ್, ಭಾರತ್ ಗ್ಯಾಸ್ ರವಿಕುಮಾರ್, ಬಿ.ಜವರಾಯಿಗೌಡ, ಗೂಡೆಹೊಸಳ್ಳಿ ಜವರಾಯಿಗೌಡ ಮತ್ತಿತರರು ಉಪಸ್ಥಿತರಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .ಕೃಷ್ಣರಾಜಪೇಟೆ . ಮಂಡ್ಯ

error: