June 22, 2021

Bhavana Tv

Its Your Channel

ನಾಗಮಂಗಲದಲ್ಲಿ ಮಾಜಿ ಮಂತ್ರಿಗಳಾದ ಚೆಲುವರಾಯಸ್ವಾಮಿ ಅವರ ಹುಟ್ಟುಹಬ್ಬ ಆಚರಣೆ

ನಾಗಮಂಗಲ : ಹುಟ್ಟು ಹಬ್ಬದ ಪ್ರಯುಕ್ತ ಕುಟುಂಬಗಳಿಗೆ ಆಹಾರ ವಿತರಣೆ ಮಾಡುವ ಮುಖಾಂತರ ವಿಶೇಷವಾಗಿ ಆಚರಿಸಲಾಯಿತು. ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಹುಟ್ಟು ಹಬ್ಬದ ಅಂಗವಾಗಿ  ಆಹಾರ ಕಿಟ್ ವಿತರಣೆಯನ್ನು  ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ನೇರವೇರಿಸಿ ನಂತರ ಮಾತನಾಡಿ ತಾಲ್ಲೂಕಿನ ನಮ್ಮ ನಾಯಕರಾದ  ಚೆಲುವರಾಯಸ್ವಾಮಿ ಅವರ ಹುಟ್ಟುಹಬ್ಬ ಅಭಿಮಾನಿಗಳು ತಾಲೂಕಿನಾದ್ಯಂತ ಆಚರಿಸುತ್ತಿದ್ದು ಇದರ ಪ್ರಯುಕ್ತ ಮಾಸ್ಕ್. ಆಹಾರ ಕಿಟ್ ಹಣ್ಣು ಗಳನ್ನು ವಿತರಿಸಲಾಯಿತು. 

ನಾಗಮಂಗಲತಾಲ್ಲೂಕಿನಲ್ಲಿ ಜನ ಮನ್ನಣೆ ಪಡೆದಿರುವ ನಮ್ಮ ನಾಯಕರು ಮುಂದಿನ ದಿನಗಳಲ್ಲಿ ಉನ್ನತ ಅಧಿಕಾರ ಸಿಗುವ ಮುಖಾಂತರತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ದುಡಿಯುವ ಶಕ್ತಿ ನೀಡಲೆಂದು ಹಾರೈಸಿದರ. ಇದೇ ಸಂದರ್ಭದಲ್ಲಿ ಕೃಷ್ಣೆಗೌಡ ಶರತ್ ರಾಮಣ್ಣ. ರಮೇಶ ತಿಮ್ಮಪ್ಪ .ಪವಿ.ಅನೇಕ ಮುಖಂಡರು ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಬೆಳ್ಳೂರಿನಲ್ಲಿ ಚೆಲುವರಾಯಸ್ವಾಮಿ ಅಭಿಮಾನಿಗಳು ಹುಟ್ಟು ಹಬ್ಬದ ಅಂಗವಾಗಿ ಹಣ್ಣುಗಳನ್ನು ದಿನಸಿ ಆಹಾರ ಪದಾರ್ಥಗಳನ್ನು ವಿತರಿಸಿದರು .

ಡಿ ಆರ್. ಜಗದೀಶ್ ನಾಗಮಂಗಲ

error: