April 16, 2024

Bhavana Tv

Its Your Channel

ಚೆಲುವರಾಯಸ್ವಾಮಿ ಫೌಂಡೇಶನ್ ವತಿಯಿಂದ ಎರಡು ಅಂಬುಲೆನ್ಸ್ ಹಾಗೂ ಆಶಾ ಕಾರ್ಯಕರ್ತರಿಗೆ ಆಹಾರ ಮತ್ತು ಮೆಡಿಷನ್ ಕಿಟ್ ವಿತರಣೆ

ನಾಗಮಂಗಲ ; ಮಾಜಿ ಸಚಿವ ಚಲುವರಾಯಸ್ವಾಮಿ ಇಂದು ಪಟ್ಟಣದ ಕಾಂಗ್ರೆಸ್ ಕಚೇರಿ ಮುಂಭಾಗ ಆಶಾ ಕಾರ್ಯಕರ್ತೆಯರಿಗೆ ಹಾಗೂ ಪೌರಕಾರ್ಮಿಕ ಕಡುಬಡವರಿಗೆ ಆಹಾರ ಹಾಗೂ ಮೆಡಿಸನ್ ಕಿಟ್ ವಿತರಣೆ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿ ಕರೋನ ಮಹಾಮಾರಿ ವೈರಸ್ ಮೊದಲ ಬಾರಿ ಬಂದಾಗಲೇ ತಜ್ಞರು ಎರಡನೆಯದು ಅತಿ ವೇಗವಾಗಿ ಬರಲಿದೆ ಎಂದು ಸೂಚಿಸಿದ್ದರು, ಯಾರೂ ಕೂಡ ವೈರಸ್ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಪ್ರಸ್ತುತ ಸಾವು-ನೋವುಗಳು ಹೆಚ್ಚಾಗಿ ಆಗುತ್ತಿದೆ ಮತ್ತು ಈಗಾಗಲೆ ಮೂರನೇಯದು ಕೂಡ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು

ಶ್ರೀಮಠದಲ್ಲಿ ಆಸ್ಪತ್ರೆಯಲ್ಲಿ ಈಗಾಗಲೇ ನೂರು ಬೆಡ್‌ಗಳ ವ್ಯವಸ್ಥೆಯನ್ನು ಮಾಡಿದ್ದು ಆಕ್ಸಿಜನ್ ತಯಾರುಮಾಡಲು ಬೃಹತ್ ಘಟಕಗಳನ್ನು ತೆರೆಯಲಾಗಿದೆ ಇನ್ನು ಮುಂದೆ ಸದುಪಯೋಗ ಕೊಡಿಸಬೇಕೆಂದು ತಿಳಿಸಿದರು,

ಕರೋನ ಮಹಾಮಾರಿ ವೈರಸ್ ಸಂಕಷ್ಟದಿAದ ಕೆಲವು ಕುಟುಂಬಗಳ ಹಿರಿಯ ತಲೆಗಳು ಜೀವ ಹೋಗಿದ್ದು ಅನಾಥವಾದ ಮಕ್ಕಳನ್ನು ಶ್ರೀಮಠವು ಪೋಷಿಸಿ ವಿದ್ಯಾಭ್ಯಾಸ ನೀಡಲಾಗುವುದು ಎಂದರು

ಕರ್ನಾಟಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ ಈ ಸಮಯದಲ್ಲಿ ರಾಜಕಾರಣ ಮಾತನಾಡುವುದು ಬೇಡ ನಾವು ಕೂಡ ನಮ್ಮ ಕಾಂಗ್ರೆಸ್ ಎಂ.ಎಲ್.ಎ ಗಳಿಂದ ನೂರು ಕೋಟಿಯನ್ನು ನೀಡಿ ವ್ಯಾಕ್ಸಿನ್ ತರಿಸಿ ಜನರಿಗೆ ಹಾಕಿಸಲು ಸಿದ್ದರಿದ್ದೇವೆ ಸರ್ಕಾರ ಇನ್ನೂ ನಮಗೆ ಅನುಮತಿ ನೀಡಿಲ್ಲ ಮಾಜಿ ಸಚಿವ ಚಲುವರಾಯಸ್ವಾಮಿ ಜನಪರವಾದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು

ಮಾಜಿ ಸಚಿವ ಚಲುವರಾಯಸ್ವಾಮಿ ಮಾತನಾಡಿ ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ ಬಾರಿ ನಾನು ಆಸ್ಪತ್ರೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದಾಗ ಹಲವಾರು ಕೊರತೆಗಳು ಇರುವುದು ಕಂಡು ಈಗಾಗಲೇ ತಾಲೂಕಿನ ವ್ಯಾಪ್ತಿಯಲ್ಲಿ ಹೋಂ ಐಸೋಲೇಷನ್ ಮೆಡಿಸನ್ ಕಿಟ್ ವಿತರಿಸುತ್ತೇವೆ ಜೊತೆಗೆ ಈ ದಿನ ಉಚಿತವಾಗಿ ಎರಡು ಅಂಬುಲೆನ್ಸ್ ಅನ್ನು ನೀಡಿದ್ದೇವೆ ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದರು
ಈಗಾಗಲೇ ಬೆಳ್ಳೂರು ಮತ್ತು ನಾಗಮಂಗಲ ವ್ಯಾಪ್ತಿಯಲ್ಲಿ ಸ್ಯಾನಿಟೈಸರ್ ಮಾಡಿರುವುದರಿಂದ ಮತ್ತೊಮ್ಮೆ ಸ್ಯಾನಿಟೈಜರ್ ಮಾಡಲು ಎರಡು ವಾಹನಗಳನ್ನು ನೀಡಿದ್ದೇನೆ ಎಂದರು ಸಂಕಷ್ಟದ ಸಮಯದಲ್ಲಿ ಎಲ್ಲರೂ ಕೂಡ ಆರೋಗ್ಯವಂತರಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ ಧರಿಸಬೇಕೆಂದು ತಿಳಿಸಿದರು

ಇದೇ ಸಂದರ್ಭದಲ್ಲಿ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಾಣದ ಸ್ವಾಮೀಜಿ ರವರು ತಾಲೂಕು ಆಡಳಿತಕ್ಕೆ ಎರಡು ಅಂಬುಲೆನ್ಸ್ ಅನ್ನು ವಿತರಿಸಿದರು

ವೇದಿಕೆಯಲ್ಲಿ ಮಳವಳ್ಳಿ ಮಾಜಿ ಶಾಸಕ ನರೇಂದ್ರಸ್ವಾಮಿ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಮಾಜಿ ಸಂಸದ ಧ್ರುವನಾರಾಯಣ್ ನಟ ಸಚಿನ್.ಕಾಂಗ್ರೆಸ್ ಜಿಲ್ಲಾದ್ಯಕ್ಷ.ಸಿ.ಡಿ.ಗಂಗಧರ.ಪಾAಡವಪುರ.ಸಮಾಜ ಸೆವಕ.ರೇವಣ್ಣ. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಮುಂತಾದವರು ಹಾಜರಿದ್ದರು,

ವರದಿ ; ಚಂದ್ರಮೌಳ್ಳಿ, ನಾಗಮಂಗಲ

error: