June 22, 2021

Bhavana Tv

Its Your Channel

ರೈತರಿಗೆ ರಿಯಾಯಿತಿ ದರದಲ್ಲಿ ತೆಂಗಿನ ಸಸಿಗಳ ವಿತರಣೆ

ಮಳವಳ್ಳಿ ; ತಾಲ್ಲೂಕಿನ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ ತೆಂಗಿನ ಸಸಿಗಳ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಡಾ. ಕೆ ಅನ್ನದಾನಿ ಅವರು ಚಾಲನೆ ನೀಡಿದರು.
ಮಳವಳ್ಳಿ ಪಟ್ಟಣದ ದೊಡ್ಡಕೆರೆ ಬಳಿ ಇರುವ ತೋಟಗಾರಿಕೆ ಇಲಾಖೆಯ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ಆಯ್ದ ರೈತರಿಗೆ ತೆಂಗಿನ ಸಸಿಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಾಕ್ ಡೌನ್ ನಿಂದ ತೀವ್ರ ನಷ್ಟಕ್ಕೆ ಒಳಗಾಗಿರುವ ರೈತರು ಬೆಳೆದ ಬೆಳೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಆರ್ಥಿಕವಾಗಿ ಭಾರಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ರಾಜ್ಯ ಸರ್ಕಾರ ಎಕರೆಗೆ ನಾಲ್ಕು ಸಾವಿರ ರೂ ಪರಿಹಾರ ಘೋಷಣೆ ಮಾಡಿರುವುದು ಯಾವುದಕ್ಕೂ ಸಾಲದಾಗಿದ್ದು ಎಕರೆಗೆ ಕನಿಷ್ಠ ಹತ್ತು ಸಾವಿರ ರೂ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಮೊದಲಿಂದಲೂ ಸರ್ಕಾರ ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳು, ಬಿತ್ತನೆ ಬೀಜ, ಗೊಬ್ಬರ, ಯಂತ್ರೋಪಕರಣ ಗಳನ್ನು ನೀಡುತ್ತ ಬಂದಿದ್ದು ಇದು ರೈತರಿಗೆ ತುಂಬ ನೆರವಾಗುತ್ತಿದೆ ಎಂದರು.
ಪುರಸಭಾಧ್ಯಕ್ಷೆ ರಾಧ ನಾಗರಾಜು, ಉಪಾಧ್ಯಕ್ಷ ಟಿ ನಂದಕುಮಾರ್, ತೋಟಗಾರಿಕೆ ಇಲಾಕೆಯ ಹಿರಿಯ ಸಹಾಯಕ ನಿರ್ಧೇಶಕರಾದ ಟಿ ಎಸ್ ರಮೇಶ್, ಸಹಾಯಕ ನಿರ್ಧೇಶಕಿ ಹೆಚ್ ಎಸ್ ಜ್ಯೋತಿ ಸೇರಿದಂತೆ ಹಲವಾರು ಪುರಸಭಾ ಸದಸ್ಯರು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ.

error: