June 22, 2021

Bhavana Tv

Its Your Channel

ಬೆಂಬಲ ಬೆಲೆ ನೀಡದಿರುವ ಸರ್ಕಾರದ ನಿರ್ಲಕ್ಷ್ಯತೆಯನ್ನು ತೀವ್ರವಾಗಿ ಖಂಡಿಸಿರುವ ಪ್ರಾಂತ ರೈತ ಸಂಘ

ಮಳವಳ್ಳಿ : ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಿ ೪-೫ ತಿಂಗಳಾದರೂ ಇನ್ನೂ ಹಣ ನೀಡದಿರುವ ಸರ್ಕಾರದ ನಿರ್ಲಕ್ಷ್ಯತೆಯನ್ನು ತೀವ್ರವಾಗಿ ಖಂಡಿಸಿರುವ ಪ್ರಾಂತ ರೈತ ಸಂಘದ ಮುಖಂಡರು ಕೂಡಲೇ ರೈತರಿಗೆ ನೀಡಬೇಕಾದ ರಾಗಿ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಮಳವಳ್ಳಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂಘಟನೆಯ ಮುಖಂಡರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್ ಎಲ್ ಭರತ್ ರಾಜ್ ರಾಗಿ ಖರೀದಿ ಮಾಡಿ ೪-೫ ತಿಂಗಳಾದರೂ ಹಣ ನೀಡದಿರುವ ಸರ್ಕಾರದ ಕ್ರಮ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದರು.
ಕರೋನ ಲಾಕ್ ಡೌನ್ ನಿಂದ ಬೆಳೆದ ಬೆಳೆ ಕಳೆದುಕೊಂಡ ರೈತರು ತೀವ್ರ ಸಂಕಷ್ಟದಲ್ಲಿದ್ದು ಇದರ ಜೊತೆಗೆ ಸಾಲಸೋಲ ಮಾಡಿ ಬೆಳೆದ ರಾಗಿ ಮಾರಾಟ ಮಾಡಿದ ರೈತರಿಗೆ ಕೆಲವೆಡೆ ಮಾತ್ರ ರೈತರಿಗೆ ಸ್ವಲ್ಪ ಹಣ ಕೊಟ್ಟಂತೆ ಮಾಡಿ ಇನ್ನೂ ಸಾಕಷ್ಟು ರೈತರಿಗೆ ಹಣ ನೀಡದಿರುವುದು ರಾಜ್ಯದಲ್ಲಿ ಯಾವ ರೀತಿ ಸರ್ಕಾರ ನಡೆಯುತ್ತಿದೆ ಎನ್ನುವುದನ್ನು ಪ್ರಶ್ನಿಸಬೇಕಾಗುತ್ತದೆ ಎಂದರು.
ಕರೋನ ಸಂಕಷ್ಟ ಸಮಯದಲ್ಲಿ ರೈತರ ಸಾಲ ಮನ್ನಾ ಮಾಡುವು ದರ ಜೊತೆಗೆ ಅವರು ಹೊಸದಾಗಿ ಬೆಳೆ ಬೆಳೆಯಲು ಸಾಲ ನೀಡಬೇಕಾದ ಸರ್ಕಾರ ರೈತಪರ ಹಾಗೂ ಪ್ರಗತಿಪರ ಸಂಘಟನೆಗಳ ಒತ್ತಾಯಕ್ಕೆ ಮಣಿದು ಅನೆ ಹೊಟ್ಟೆಗೆ ಅರು ಕಾಸಿನ ಮಜ್ಜಿಗೆ ಎಂಬAತೆ ರೈತರಿಗೆ ಅಲ್ಪ ಪ್ರಮಾಣದ ಪರಿಹಾರ ಘೋಷಣೆ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಲಿಂಗರಾಜ ಮೂರ್ತಿ , ಆನಂದ್, ಲಿಂಗರಾಜು, ಶಿವರಾಂ, ಮತ್ತಿತರರು ಪಾಲ್ಗೊಂಡಿದ್ದರು.
ವರದಿ : ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ.

error: