April 25, 2024

Bhavana Tv

Its Your Channel

ಕರೋನ ವೈರಸ್ ತಡೆಗಟ್ಟಲು ಸಾರ್ವಜನಿಕರ ಸಹಕಾರ ಪ್ರಮುಖವಾದದ್ದು. ಮುಖ್ಯಾಧಿಕಾರಿ ಆರ್. ವಿ.ಮಂಜುನಾಥ್

ನಾಗಮ0ಗಲ; ತಾಲೂಕಿನಲ್ಲಿ ಕೋವಿಡ್ ೧೯ ಎರಡನೆಯ ಪ್ರಾರಂಭವಾದ ದಿನದಿಂದಲೂ ಬೆಳ್ಳೂರು ಹೋಬಳಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೧೩ ವಾರ್ಡಗಳಲ್ಲಿ ಕರೋನ ವೈರಸ್ ತಾಂಡವವಾಡುತ್ತಿತ್ತು ಸಾವುಗಳು ಕೂಡ ಸಂಭವಿಸಿದ್ದವು ಪಟ್ಟಣ ಪಂಚಾಯಿತಿ ಮುಂಜಾಗ್ರತೆ ಕ್ರಮವಾಗಿ ತಾಲೂಕು ಆಡಳಿತದ ಆದೇಶದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿ ಸ್ವಚ್ಛತೆ ಹಾಗೂ ಪ್ರತಿ ವಾರ್ಡ್ ಸ್ವಚ್ಚಗೊಳ್ಳಲು ಸ್ಯಾನಿಟೈಜರ್ ಸಿಂಪಡಿಸಿ ಮುಂಜಾಗ್ರತೆ ವಹಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರಿಂದ ೧೩ ವಾರ್ಡಗಳಲ್ಲಿ ಯಾವುದೇ ಕರೋನವೈರಸ್ ಪ್ರಕರಣಗಳು ಪತ್ತೆ ಆಗದಿರುವುದು ಸಾರ್ವಜನಿಕರ ಸಹಕಾರದಿಂದ ಮಾತ್ರ ಸಾಧ್ಯ ಎಂದು ಬೆಳ್ಳೂರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ.ಅರ್.ವಿ. ಮಂಜುನಾಥ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು ತಿಳಿಸಿದರು.

ಎರಡನೆಯ ಅಲೆಯಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದು ಪ್ರಸ್ತುತ ಮಂಡ್ಯ ಜಿಲ್ಲೆಯಲ್ಲಿ ಅಲ್ಪಪ್ರಮಾಣದಲ್ಲಿ ಕರೋನಾ ಸೋಂಕಿತರು ಕಾಣಿಸಿಕೊಂಡಿದ್ದಾರೆ ಅದರಿಂದ ಬೆಳ್ಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನಸಾಮಾನ್ಯರು ಅನಾವಶ್ಯಕವಾಗಿ ತಿರುಗಾಟ ಮಾಡಬಾರದು ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಇರಬೇಕು ಎರಡನೇ ಅಲೆಯಲ್ಲಿ ಕರೋನವೈರಸ್ ರೂಪಾಂತರಗೊಳ್ಳುತ್ತಿರುವ ಆತಂಕಕಾರಿ ವಿಷಯವಾಗಿದೆ ಮುಂದಿನ ದಿನದಲ್ಲಿ ಮಕ್ಕಳ ಮೇಲೆ ವೈರಸ್ ಪರಿಣಾಮ ಬೀರುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು ಆದುದರಿಂದ ಸರ್ಕಾರ ಮತ್ತು ತಾಲೂಕ ಆಡಳಿತದ ನಿರ್ದೇಶನದಂತೆ ಸಾರ್ವಜನಿಕರು ಪಟ್ಟಣ ಪಂಚಾಯಿತಿ ನೀತಿ ನಿಯಮಗಳಿಗೆ ಒಳಗಾಗಿ ಆರೋಗ್ಯವಾಗಿರ ಬೇಕೆಂದು ತಿಳಿಸಿದರು.

error: