March 29, 2024

Bhavana Tv

Its Your Channel

ಸಮಾಜ ಸೇವೆ ಮಾಡಲು ಹೃದಯವಂತ ಮನಸ್ಸಿರಬೇಕು ಬಿಳಗುಂದ ಗ್ರಾಮಸ್ಥರ ಅಭಿಮತ

ಬಿಳಗುಂದ ಗ್ರಾಮ ಹಾಗೂ ಕಾಳಿಂಗನಹಳ್ಳಿ ವ್ಯಾಪ್ತಿಯ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ನೌಕರರು ಮತ್ತು ಕಡುಬಡವರಿಗೆ ಸಮಾಜ ಸೇವಕ ಗೌರೀಶ್ ರವರು ಆಹಾರ ಪದಾರ್ಥ ಹಾಗೂ ಮಾಸ್ಕ್ ಸ್ಯಾನಿಟೈಜರ್ ವಿತರಿಸಿದರು.

ನಾಗಮಂಗಲ ; ತಾಲೂಕಿನ ಬೆಳ್ಳೂರಿನ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು. ಪೊಲೀಸ್ ಇಲಾಖೆ. ಕಂದಾಯ ಇಲಾಖೆ .ಪಟ್ಟಣ ಪಂಚಾಯಿತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೋನ ವೈರಸ್ ವಿರುದ್ಧ ಹೋರಾಡಿ ಸಾರ್ವಜನಿಕರ ಸೇವೆ ಸಲ್ಲಿಸುತ್ತಿರುವ ಕರೋನ ವಾರಿಯರ್ಸ್ಗಳು ಜೀವದ ಹಂಗು ತೊರೆದು ನಮ್ಮೆಲ್ಲರ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಮಸ್ತರಿಗೂ ಕೋವಿಡ್.೧೯ ಪ್ರಾರಂಭವಾದ ದಿನದಿಂದಲೂ ಇಂದಿನವರೆಗೂ ಮಾಸ್ಕ. ಸ್ಯಾನಿಟೈಜರ್ ಹಾಗೂ ಆಹಾರ ಪದಾರ್ಥಗಳು ಮತ್ತು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೋವಿಡ್ ಕೇಂದ್ರದಲ್ಲಿ ಇರುವಂತಹ ಸೋಂಕಿತರಿಗೆ ವಾರದಲ್ಲಿ ಎರಡು ದಿನ ಮಾಂಸಾಹಾರಿ ಊಟ ವಿತರಿಸುತ್ತಿರುವ ಜವರನಹಳ್ಳಿ ಗ್ರಾಮದ ಸಮಾಜ ಸೇವಕ ಗೌರೀಶ್ ಅವರನ್ನು ಬಿಳಗುಂದ ಮತ್ತು ಕಾಳಿಂಗನಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಇವರ ಸೇವಾ ಮನೋಭಾವನೆಯನ್ನು ಗುರುತಿಸಿ ಸನ್ಮಾನಿಸಿದರು ಗ್ರಾಮಸ್ಥ ರಜನೀಶ್ ಮಾತನಾಡಿ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿಯ ಪರಮಭಕ್ತ ಗೌರೀಶ್ ರವರು ಸಂಕಷ್ಟದ ಸಮಯದಲ್ಲಿ ಕಡು ಬಡವರಿಗೆ ಹಾಗೂ ಕರೋನೊ ವಾರಿಯರ್ಸ್ ಗಳಿಗೆ ಆಹಾರ ಪದಾರ್ಥ ಮತ್ತು ಸಾಮಗ್ರಿಗಳನ್ನು ನೀಡುತ್ತಿರುವುದು ಅವರ ಸೇವಾ ಮನೋಭಾವನೆಯನ್ನು ಗುರುತಿಸುತ್ತದೆ ಎಂದರು.

ಯುವ ಜನತಾದಳ ಅಧ್ಯಕ್ಷರಾದ ಲೋಹಿತ್ ಮುಖಂಡರಾದ ಕಾಳಿಂಗನಹಳ್ಳಿ ಗ್ರಾಮದ ಸುರೇಶ್,ಬಿಳಗುಂದ ರಜಿನಿ, ಶ್ರೀನಿವಾಸ್, ಯತಿರಾಜ್, ಕೋಣೆಗೌಡ,ನಾಗೇಶ್ ಹಾಜರಿದ್ದರು.

error: