June 22, 2021

Bhavana Tv

Its Your Channel

ಹಾಲ್ತಿ ಕ್ಷೇತ್ರವನ್ನು ಪ್ರವಾಸಿತಾಣವಾಗಿ ಮಾಡಬೇಕಾದ್ದು ನಮ್ಮೆಲ್ಲರ ಕರ್ತವ್ಯ, ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ.,

ನಾಗಮಂಗಲ : ಏಕ ಬಂಡ ಗುಹೆಯಲ್ಲಿ ಲಿಂಗ ಸ್ವರೂಪಿಯಾಗಿರುವ ಹಾಲ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಈ ಶ್ರೀ ಕ್ಷೇತ್ರ ಪ್ರವಾಸಿ ತಾಣ ವಾಗಬೇಕೆಂದು ಆದಿಚುಂಚನಗಿರಿ ಪೀಠಾಧಿಪತಿ ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ ರವರು ತಿಳಿಸಿದರು

ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಎರಡು ಕೋಟಿ ಅನುದಾನದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಅಗತ್ಯವಿರುವ ರಸ್ತೆ ಕಾಮಗಾರಿ ಸಂಬAಧ ಸ್ಥಳೀಯ ಶಾಸಕ ಸುರೇಶ್ ಗೌಡ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಚುಂಚಶ್ರೀ ರವರು ಸ್ಥಳ ಪರಿಶೀಲನೆ ಮಾಡಿದರು.

ಕೇಂದ್ರ ಸರ್ಕಾರದ ಅನುದಾನ ಪಡೆಯಲು ಸುರಂಗ ಪ್ರವಾಸೋದ್ಯಮ ಮಾರ್ಗಸೂಚಿಗೆ ಒಳಪಡುವ ಜಿಲ್ಲೆಯ ಏಕೈಕ ಕ್ಷೇತ್ರವಾಗಿರುವ ಹಾಲ್ತಿ ಗಿರಿಧಾಮದ ತಪ್ಪಲಿನಲ್ಲಿ ಶ್ರೀಮಠದ ಸ್ವಗ್ರಾಮ ಅಶ್ರಮ ಶಾಖಾ ಮಠವಿದ್ದು ಸಮುದಾಯ ಭವನ ಆಸ್ತಿಕರು ಮತ್ತು ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ವಿವಿಧ ಕಾಮಗಾರಿಗಳಿಗೆ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

error: