June 22, 2021

Bhavana Tv

Its Your Channel

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ಧ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರಿಂದ ಪ್ರತಿಭಟನೆ

ಮಳವಳ್ಳಿ : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಶತಕದ ಗಡಿ ದಾಟಿಸಿದ್ದರೆ ವಿದ್ಯುತ್ ದರವನ್ನು ಶೇ ೩೦ ರಷ್ಟು ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಳವಳ್ಳಿ ಪಟ್ಟಣದಲ್ಲಿ ಇಂದು ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಲ್ಲಿನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ ಅವರು ಲಾಕ್ ಡೌನ್ ಸಂದರ್ಭ ಬಳಸಿಕೊಂಡು ಜನರೆಲ್ಲ ಮನೆಯಲ್ಲಿ ಲಾಕ್ ಆಗಿರುವಾಗ ನಮ್ಮ ವಿರುದ್ಧ ಪ್ರತಿಭಟನೆ ಮಾಡಲಾಗದು ಎಂಬುದನ್ನು ಅರಿತು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನೂರು ರೂಗಳ ಗಡಿ ದಾಟಿಸಿರುವ ಮೋದಿ ಸರ್ಕಾರದ ಕ್ರಮ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಲಾಕ್ ಡೌನ್ ನಿಂದ ಈಗಾಗಲೇ ಜನಜೀವನ ಸ್ಥಬ್ದವಾಗಿದ್ದು ದುಡಿಯುವ ಶ್ರಮಿಕ ವರ್ಗದ ಜನ ಒಪ್ಪೊತ್ತಿನ ಊಟಕ್ಕೂ ಪರಿತಪಿಸುವಂತಾಗಿದ್ದು ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರದ ಮೋದಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ನೂರು ರೂಗಿಂತಲೂ ಹೆಚ್ಚಿಗೆ ಏರಿಕೆ ಮಾಡಿದ್ದು ಇತ್ತ ರಾಜ್ಯದಲ್ಲಿನ ಯಡಿಯೂರಪ್ಪ ಸರ್ಕಾರ ಸಹ ವಿದ್ಯುತ್ ದರವನ್ನು ಶೇ ೩೦ರಷ್ಟು ಏರಿಕೆ ಮಾಡಿರುವುದು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ ಎಂದು ಖಂಡಿಸಿದರು.
ಅಡುಗೆ ಎಣ್ಣೆ,, ಕಾಳು, ದವಸ ಧಾನ್ಯಗಳ ಬೆಲೆ ಗಗನಕ್ಕೆ ಏರಿದ್ದು ಒಂದೆಡೆ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡಿರುವ ಕಾರ್ಮಿಕರು ಜನಸಾಮಾನ್ಯರ ಬದುಕು ಬಾರಿ ಸಂಕಷ್ಟಕ್ಕೆ ಸಿಲುಕಿದ್ದು ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನಬಂದAತೆ ಬೆಲೆ ಏರಿಕೆ ಮಾಡುವ ಮೂಲಕ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದು ಮುಂದೆ ಜನರೇ ಈ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಸುಶೀಲ, ಸುನೀತಾ, ಇಂದ್ರ, ರತ್ನ, ಡಿವೈಎಫ್ ಐ ಮುಖಂಡರಾದ ತಿಮ್ಮೇಗೌಡ, ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ. ಮಳವಳ್ಳಿ.

error: