April 19, 2024

Bhavana Tv

Its Your Channel

ಸಮುದಾಯದ ಬಲವರ್ಧನೆ ಸಾಮಾಜಿಕ ಕಳಕಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಜೀವಿನಿ

ನಾಗಮಂಗಲ ;ಸಮುದಾಯದ ಬಲವರ್ಧನೆ ಹಾಗೂ ಪ್ರತಿಯೊಂದು ಕುಟುಂಬದಸ್ವ ಹಿತಾಸಕ್ತಿಯ ಬದುಕಿಗೆ ಶಕ್ತಿ ನೀಡಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆಯ ಶಕ್ತಿಯಿದೆಯೆಂದು ಪ್ರಾದೇಶಿಕ ನಿರ್ದೇಶಕರಾದ ಗಂಗಾಧರರೈ ತಿಳಿಸಿದರು .

ಅವರಿಂದು ನಾಗಮಂಗಲದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಇವರ ವತಿಯಿಂದ ಪತ್ರಕರ್ತರಿಗೆ ಆಹಾರಧಾನ್ಯ ಕಿಟ್ ಹಾಗೂ ಕೋವಿಡ್ -೧೯ ಮುಂಜಾಗೃತ ಪರಿಕರಗಳ ವಿತರಣೆ ಸದಸ್ಯರಿಗೆ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಶ್ರೀಕ್ಷೇತ್ರ ಯೋಜನೆಯಿಂದ ಹಿಂದುಳಿದ ಹಾಗೂ ಸ್ವಾವಲಂಬಿ ಬದುಕಿನ ಸಮಾಜದಲ್ಲಿ ನಡೆಯುವ ಕೃಷಿ ಆರ್ಥಿಕ ಸಹಾಯ ಸಮಾಜದ ಸಮಾಜದ ವಿವಿಧ ರಂಗಗಳಿಗೆ ಸಂಸ್ಥೆಯಿAದ ಸಹಾಯಧನ ಹಾಗೂ ಮಹಿಳಾ ಸಂಸ್ಥೆಗಳ ಸಬಲೀಕರಣ ಮಾಡುವ ಮುಖಾಂತರ ಸಮಾಜದಲ್ಲಿ ಆರ್ಥಿಕವಾಗಿ ಸಹಾಯ ಮಾಡಿ ಸ್ವಾವಲಂಬನೆ ಯಾಗಿ ನಿರ್ವಹಿಸಲು ಹೆಚ್ಚು ಒತ್ತು ನೀಡುವ ಮುಖಾಂತರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಮಾತನಾಡುತ್ತಿದ್ದರು.

ಸಮಾಜದ ಬದಲಾವಣೆ ಪ್ರಕೃತಿ ವಿಕೋಪದ ತಡೆಯುವಲ್ಲಿ ಬುದ್ಧಿ ಜೀವಿಗಳಾದ ನಾವು ಪ್ರಕೃತಿ ವಿಕೋಪ ಬದಲಾವಣೆ ಎರಡನ್ನು ತಡೆಯುವ ಶಕ್ತಿ ನಮ್ಮಲ್ಲಿದ್ದು ಇದರಿಂದ ಮುಂದಿನ ತಲೆಮಾರಿಗೂ ಕಾಪಾಡುವಂತಹ ನಾವುಗಳು ಜಾಗೃತಿ ವಹಿಸಬೇಕೆಂದು ಇಂತಹ ಸಂದರ್ಭದಲ್ಲಿ ಮಾಧ್ಯಮದ ಶಕ್ತಿಯು ಪ್ರಬಲವಾಗಿರುವುದರಿಂದ ಸಮಾಜದ ತಳಮಟ್ಟದವರೆಗೂ ಜಾಗೃತಿಯನ್ನು ಮೂಡಿಸಲು ನಾವುಗಳು ಬದಲಾವಣೆಯ ಬೆಳಕು ಚೆಲುವ ಪ್ರಬಲ ಮಾಧ್ಯಮ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಧ್ಯಮದಿಂದ ಮಾತ್ರ ಎಂದು ನಾಗಮಂಗಲ ಪಟ್ಟಣ ಸಬ್‌ಇನ್ಸೆ÷್ಪಕ್ಟರ್ ಆದ ರವಿಶಂಕರ್ ಅವರು ಪತ್ರಕರ್ತರಿಗೆ ಫುಡ್ ಕಿಟ್ ವಿತರಣೆ ಮಾಡುವ ಮುಖಾಂತರ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆಗಳು ಜನಪರ ಯೋಜನೆಗಳನ್ನು ಮಾಡುತ್ತಿದ್ದು ಮುಂದೆಯೂ ಹೆಚ್ಚೆಚ್ಚು ಯೋಜನೆಗಳನ್ನು ರೂಪಿಸುವ ಮುಖಾಂತರ ಗ್ರಾಮೀಣ ಜನರ ಬದುಕಿನ ಆಶಾಕಿರಣ ಆಗಲಿದೆ ಎಂದು ನಾಗಮಂಗಲತಾಲ್ಲೂಕು ಪುರಸಭಾ ಅಧ್ಯಕ್ಷರಾದ ಶ್ರೀಮತಿ ಆಶಾ ರವರು ತಿಳಿಸಿದರು .

ಸಮಾರಂಭದಲ್ಲಿ ಶ್ರೀಕ್ಷೇತ್ರ ನಿರ್ದೇಶಕರಾದ ವಿನಯ್ ಕುಮಾರ್ ಸುವರ್ಣ ಹಾಗೂ ನಾಗಮಂಗಲತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ರವಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ತಾಲ್ಲೂಕು ಯೋಜನಾಧಿಕಾರಿಗಳಾದ ಶ್ರೀಮತಿ ಹೇಮಲತಾ ಹೆಗಡೆಯವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.
ಡಿ. ಆರ್. ಜಗದೀಶ್ ನಾಗಮಂಗಲ

error: