September 27, 2021

Bhavana Tv

Its Your Channel

ಶಿಕ್ಷಕರಿಗೆ ಅಭಿನಂದನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಂಡ್ಯ ; ನಗರದ ಕಾಳೇಗೌಡ ಪ್ರೌಢಶಾಲೆ ಆವರಣದಲ್ಲಿ ಬದುಕು ಬೆಳಕು ಸೇವಾಸಮಿತಿ, ನಿವೃತ್ತ ಶಿಕ್ಷಕ ಕೆ ಮಾಯಿಗ ಸೆಟ್ಟಿ ಸೇವಾ ಸಮಿತಿ, ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ, ಕಾಯಕ ಸಮಾಜಗಳ ಒಕ್ಕೂಟ ಇವರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ೭೫ನೇ ವರ್ಷದ ಭಾರತ ಸ್ವತಂತ್ರ ದಿನಾಚರಣೆ ಕೆವಿ ಶಂಕರೇಗೌಡರ ಜನ್ಮದಿನೋತ್ಸವ ಕಾರ್ಯಕ್ರಮದ ಅಂಗವಾಗಿ ಶಿಕ್ಷಕರಿಗೆ ಅಭಿನಂದನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಉದ್ಘಾಟನೆಯನ್ನು ನೆರವೇರಿಸಿ ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡರಾದ ಅರವಿಂದ್ ಮಾತನಾಡಿ ಶುಭ ಹಾರೈಸಿದರು, ಕಾರ್ಯಕ್ರಮದಲ್ಲಿ ಪತ್ರಕರ್ತ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಜಿಲ್ಲಾಧ್ಯಕ್ಷ ಎಂ ಲೋಕೇಶ್ ಸ್ವಾಗತಿಸಿ ಪ್ರಾಸ್ತವಿಕ ನುಡಿಯನ್ನಾಡಿದರು, ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಬಿಎಂ ಅಪ್ಪಾಜಪ್ಪ ಪುಷ್ಪಾರ್ಚನೆ ಗೈದರು, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಸಕ್ಕರೆ ಕಂಪನಿ ಅಧ್ಯಕ್ಷರಾದ ಶಿವಲಿಂಗೇಗೌಡ ಮಾತನಾಡಿದರು. ಕರವೇ ರಾಜ್ಯ ಉಪಾಧ್ಯಕ್ಷ ಚಿದಂಬರ್ ಹಾಗೂ ಮಾಜಿ ನಗರಸಭಾ ಸದಸ್ಯ ಪದ್ಮ ಮೋಹನ್ ಕಾಳೇಗೌಡ, ಶಾಲಾ ಆಡಳಿತಾಧಿಕಾರಿ ಚಂದ್ರಪ್ರಭ, ಮುಖ್ಯ ಶಿಕ್ಷಕ ಗೋವಿಂದರಾಜು ಹಾಜರಿದ್ದರು, ಶಿಕ್ಷಕರುಗಳಾದ ಸತೀಶ್, ಬಾಬು, ಸ್ವಾಮಿ, ನಾಗರಾಜು, ಸುರೇಶ್, ಸೌಮ್ಯ ಅವರನ್ನು ಅಭಿನಂದಿಸಲಾಯಿತು, ಇದೇ ಸಂದರ್ಭದಲ್ಲಿ ಕಾಳೇಗೌಡ ಪ್ರೌಢಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು , ರಾತೋಡ್ ನಿರೂಪಿಸಿದರು.


ವರದಿ ; ಎಂ ಲೋಕೇಶ್, ಮಂಡ್ಯ

error: