April 24, 2024

Bhavana Tv

Its Your Channel

ಕೆಲ ಕಾಂಗ್ರೆಸ್ ನವರೇ ಮಂಡ್ಯ ಸಕ್ಕರೆ ಕಾರ್ಖಾನೆ ಖಾಸಗಿಕರಣಕ್ಕೆ ಸರ್ಕಾರದೊಂದಿಗೆ ಕೈಜೋಡಿಸಿರುವುದು ಸತ್ಯ ಶಾಸಕ ಸುರೇಶ್ ಗೌಡ ಆರೋಪ

ಮಂಡ್ಯ : ಮಂಡ್ಯ ಮೈಷುಗರ್ ಖಾಸಗಿ ಕಾರಣಕ್ಕೆ. ಕಮಿಷನ್ ಮಾತನಾಡಿಕೊಂಡು ಕೆಲ ಕಾಂಗ್ರೆಸ್ ನಾಯಕರೇ ಬಿಜೆಪಿ ಸರ್ಕಾರವನ್ನು ಭೇಟಿ ಮಾಡಿದ್ದಾರೆ ಎಂದು ಶಾಸಕ ಸುರೇಶ್ ಗೌಡ ಹೊಸ ಬಾಂಬ್ ಸಿಡಿಸಿದ್ದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಾಗಮಂಗಲ ಕ್ಷೇತ್ರದಲ್ಲಿ ಅಮೃತ್ ಯೋಜನೆಗೆ ಆಯ್ಕೆ ಮಾಡಲಾಗಿರುವ ಬಿದರಕೋಟೆ, ಕದಬಹಳ್ಳಿ, ಭೀಮನಹಳ್ಳಿ, ಹಾಗೂ ಕಾಂತಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಗಳಿಂದ ಸನ್ಮಾನ ಸ್ವೀಕರಿಸಿ ಶಾಸಕರು ಮಾತನಾಡಿದರು.

ಮೈಷುಗರ್ ಖಾಸಗಿಕರಣಕ್ಕೆ ಜೆಡಿಎಸ್ ಬೆಂಬಲವಿದೆ ಎಂಬ ಕಾಂಗ್ರೆಸ್ ನ ಚೆಲುವರಾಯಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸುರೇಶ್ ಗೌಡ ಡೇ ಅಂಡ್ ನೈಟ್ ವ್ಯಕ್ತಿಗಳು ಯಾವುತ್ತೂ ಸತ್ಯ ಹೇಳಿದವರಲ್ಲ ಖಾಸಗಿಕರಣ ವಿಚಾರದಲ್ಲಿ ಕಮಿಷನ್ ಮಾತನಾಡಿಕೊಂಡಿರುವವರ್ಯಾರು, ಯಾರ್ಯಾರು ಪಾರ್ಟ್ನರ್ ಶಿಪ್ ಆಗಿದ್ದಾರೆ ಎಂಬುದು ಗೊತ್ತಾಗಲಿದೆ. ಕೆಲ ಕಾಂಗ್ರೆಸ್ ನವರೇ ಮಂಡ್ಯ ಸಕ್ಕರೆ ಕಾರ್ಖಾನೆ ಖಾಸಗಿಕರಣಕ್ಕೆ ಸರ್ಕಾರದೊಂದಿಗೆ ಕೈಜೋಡಿಸಿರುವುದು ಸತ್ಯ ಎಂದು ಗಂಭೀರ ಆರೋಪ ಮಾಡಿದರು.

ಮಂಡ್ಯದವರ ಹೋರಾಟಗಳು ಯಶಸ್ಸು ಕಂಡಿವೆ, ಮೈಷುಗರ್ ಖಾಸಗಿಕರ ವಿರೋಧಿಸಿ ನಡೆಯುತ್ತಿರುವ ಹೋರಾಟ ಮುಂದುವರಿಸುವAತೆ ಮನವಿ ಮಾಡಿದ ಸುರೇಶ್ ಗೌಡ ಸಕ್ಕರೆ ಸಚಿವರು ನಮ್ಮ ಮನವಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ, ಜೆಡಿಎಸ್ ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಲು ಹೋರಾಟ ಕೈಗೊಳ್ಳಲಿದೆ ಎಂದು ಹೇಳಿದರು.

ಇನ್ನು ಜೆಡಿಎಸ್ ೧೪೦ ಕ್ಷೇತ್ರಗಳ ಟಿಕೇಟ್ ಘೋಷಣೆ ವಿಚಾರ ಹೈಕಮಾಂಡ್ ಗೆ ಬಿಟ್ಟು ವಿಚಾರ ಪಕ್ಷದ ಬಲವರ್ಧನೆಗೆ ಬಿಡದಿ ಬಳಿ ಕುಮಾರಸ್ವಾಮಿ ಕರೆದಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.

ಹಾಗೆ ನಾಗಮಂಗಲ ಕ್ಷೇತ್ರದಲ್ಲಿ ಮೂಲ ಕಾರ್ಯಕರ್ತರ ಕಡೆಗಣನೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ನಾನು ಯಾವ ವ್ಯಕ್ತಿಯನ್ನೂ ಕಡೆಗಣಿಸಿಲ್ಲ, ಅವಕಾಶಕ್ಕಾಗಿ ಕಾಯಬೇಕು ಅಷ್ಟೇ ಎಂದು ಮನ್ ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ನಡೆಯನ್ನು ಟೀಕಿಸಿದರು.

ಈ ವೇಳೆ ಕಾಂತಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಯತನಹಳ್ಳಿ ರಮೇಶ್, ಸದಸ್ಯರಾದ ಸಂಕನಹಳ್ಳಿ ರಮೇಶ್, ಪಾವನಾ , ನಂಜಪ್ಪ, ಶಿವಮೂರ್ತಿ ಇತರರು ಇದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: