April 19, 2024

Bhavana Tv

Its Your Channel

ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕು, ಟನ್ ಕಬ್ಬಿಗೆ ಐದು ಸಾವಿರ ನೀಡಬೇಕೆಂದು ಒತ್ತಾಯಿಸಿ ನಾಳೆ ಮಳವಳ್ಳಿ ಯಿಂದ ಮಂಡ್ಯ ವರೆಗೆ ಬೈಕ್ ರ‍್ಯಾಲಿ

ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನ ಸರ್ಕಾರಿ ಸ್ವಾಮ್ಯದಲ್ಲೇ ನಡೆಸಬೇಕು ಟನ್ ಕಬ್ಬಿಗೆ ಐದು ಸಾವಿರ ನೀಡಬೇಕು ಮೈಷುಗರ್ ಕಾರ್ಖಾನೆಗೆ ದಕ್ಷ, ಪ್ರಮಾಣಿಕ ಅಧಿಕಾರಿಗಳನ್ನು ನೇಮಿಸಿ, ಕಾರ್ಖಾನೆ ಸುಸ್ಥಿರಗೊಳಿಸಲು ಅಗತ್ಯ ಹಣವನ್ನು ರಾಜ್ಯ ಸರ್ಕಾರ ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮಳವಳ್ಳಿ ಯಿಂದ ಮಂಡ್ಯ ಜಿಲ್ಲಾಧಿಕಾರಿ ಕಛೇರಿವರಗೆ ಬೈಕ್ ರ‍್ಯಾಲಿಯನ್ನ ಕರ್ನಾಟಕ ಕಬ್ಬು ಬೆಳೆಗಾರರ ಸಂಘ .ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿದೆ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕರಾದ ಎನ್ ಎಲ್ ಭರತ್ ರಾಜ್ ತಿಳಿಸಿದರು.

ಅವರು ಮಳವಳ್ಳಿಯ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಕಬ್ಬು ಸಂಶೋಧನಾ ಕೇಂದ್ರವನ್ನು ಮಂಡ್ಯದಿoದ ಹಾಗೂ ಸಕ್ಕರೆ ಆಯುಕ್ತರ ಕಛೇರಿಯನ್ನು ಬೆಂಗಳೂರಿನಿoದ ಸ್ಥಳಾಂತರಿಸುವುದನ್ನ ವಿರೋಧಿಸುತ್ತೆವೆ, ೧೨ ರಿಂದ ೧೩.ತಿಂಗಳೊಳಗೆ ಕಬ್ಬು ಕಟಾವು ಮಾಡಬೇಕು.ವಿಳಂಬದಿoದ ನಷ್ಟವಾದರೆ ಪರಿಹಾರ ನೀಡಬೇಕು. ಕಬ್ಬು ಸರಬರಾಜು ಮಾಡಿದ ೧೪ ದಿನದೊಳಗೆ ಹಣ ಪಾವತಿ ಮಾಡಬೇಕು. ವಿಳಂಬ ವಾದರೆ ಶೇಕಡಾ. ೨೪ ಬಡ್ಡಿ ಸೇರಿಸಿ ಹಣ ನೀಡಬೇಕು. ಎಥೆನಾಲ್ ಬಳಕೆ ಪ್ರಮಾಣವನ್ನು ೨೫% ರಷ್ಟು ಹೆಚ್ಚಿಸಬೇಕು. ವಿದೇಶಿ ಕಚ್ಚಾ ಸಕ್ಕರೆ ಮೇಲೆ ಆಮದು ಶುಲ್ಕವನ್ನು ೪೦% ರಷ್ಟು ಹೆಚ್ಚಿಸಬೇಕು. ಕೆಲವು ಕಾರ್ಖಾನೆಗಳಲ್ಲಿ ತೂಕದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ವಂಚನೆ ತಡೆಗಟ್ಟಬೇಕು ಎಂದು ಆಗ್ರಹಿಸಿದರು. ಕಬ್ಬು ಕಟಾವು ಸಾಗಾಣಿಕ ವೆಚ್ಚವನ್ನು ಕಾರ್ಖಾನೆಯವರು ನೀಡಬೇಕು. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಯನ್ನು ೪೦ ವರ್ಷಕ್ಕೆ ಗುತ್ತಿಗೆ ನೀಡಿದ್ದು ಈಗಾಗಲೇ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸಿ ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿ ವಂಚಿಸಿರುವ ಮುರುಗೇಶ್ ನಿರಾಣಿ ಮೇಲೆ ವಂಚನೆ ಕೇಸು ದಾಖಲಿಸಿ ಗುತ್ತಿಗೆ ರದ್ದುಪಡಿಸಿ ಸಹಕಾರಿ ರಂಗದಲ್ಲಿ ಕಾರ್ಖಾನೆ ಪ್ರಾರಂಭಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಂಡ್ಯದಲ್ಲಿ ಮೈಷುಗರ್ ಕಾರ್ಖಾನೆಯನ್ನ ಸರ್ಕಾರಿ ಸ್ವಾಮ್ಯದಲ್ಲೆ ನಡೆಸಬೇಕೆಂದು ಕಳೆದ ೨೪ ದಿನಗಳಿಂದ ನಡೆಯುತ್ತಿರುವ ಧರಣಿಯನ್ನು ಬೆಂಬಲಿಸಿ ಭಾಗವಹಿಸಲಾಗುವುದು ಎಂದರು, ಆದ್ದರಿಂದ ಕಬ್ಬು ಬೆಳೆಗಾರರು ರೈತ ಬಂಧುಗಳ ಭಾಗವಹಿಸಬೇಕೆಂದು ಮನವಿ ಮಾಡಿದರು
ಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾದ ಎಮ್ ಲಿಂಗರಾಜ್ .ಜಿ ಸಿ. ಸತೀಶ್ ಕರಿಯಪ್ಪ ಶ್ರೀಕಂಠಸ್ವಾಮಿ. ಉಪಸ್ಥಿತಿರಿದ್ದರು.
ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: