March 29, 2024

Bhavana Tv

Its Your Channel

ಆರೋಗ್ಯ ಇಲಾಖೆಯ ಟೆಕ್ನಿಷಿಯನ್,ವಾರಿಯರ್ಸ್‌ಗಳಿಗೆ ಮತ್ತು ಸಮಾಜಸೇವಕರಿಗೆ ಅಭಿನಂದನಾ ಕಾರ್ಯಕ್ರಮ

ಮಂಡ್ಯ ಸೋಮವಾರದಂದು ನಿವೃತ್ತ ಶಿಕ್ಷಕ ಕೆ ಮಾಯಿಗ ಶೆಟ್ಟಿ ಸೇವಾ ಸಮಿತಿ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಮಂಡ್ಯ ಘಟಕ ಗಾಣಿಗ ಚೌಪಾಲ್ ಸಹೋ ಸಂಘಟನೆ ಜನ ಸಾಕ್ಷಿ ಮಾಧ್ಯಮ ಮತ್ತು ಜನ ಸಾಕ್ಷಿ ಜನಪರ ವೇದಿಕೆ ಮಂಡ್ಯ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಮತ್ತು ೭೫ನೇ ಭಾರತ ಅಮೃತ ಮಹೋತ್ಸವದ ಅಂಗವಾಗಿ ಪಾಂಡವಪುರ ತಾಲೂಕಿನ ಆರೋಗ್ಯ ಇಲಾಖೆಯ ಟೆಕ್ನಿಷಿಯನ್ ವಾರಿಯರ್ಸ್ಗಳಿಗೆ ಸಮಾಜಸೇವಕರಿಗೆ ಅಭಿನಂದನಸಲಾಯಿತು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು

ಕಾರ್ಯಕ್ರಮವನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಕೋರ್ಟ್ ಮುಂಭಾಗ ಪಾಂಡವಪುರದಲ್ಲಿ ಆಯೋಜಿಸಲಾಗಿತ್ತು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ಶ್ರೀ ಶ್ರೀ ಸ್ಥಾನೀಕ೦ ಶ್ರೀನಿವಾಸನ್ ನರಸಿಂಹನ್ ಗುರೂಜಿಯವರು ಮೊದಲಿಗೆ ಕನ್ನಡಾಂಬೆಯ ತಾಯಿ ಭುವನೇಶ್ವರಿ ಫೋಟೋಗೆ ಪುಷ್ಪಾರ್ಚನೆ ನೆರವೇರಿಸಿ ವಾರಿಯರ್ಸ್ ಗಳನ್ನು ಸನ್ಮಾನಿಸಿ ಮಾತನಾಡಿ ಎಲ್ಲರಿಗೂ ಶುಭ ಹಾರೈಸಿ ಸಂಘ ಸಂಸ್ಥೆ ಅವರ ಸೇವೆಯನ್ನು ಶ್ಲಾಘಿಸಿದರು ನಂತರ ಉದ್ಘಾಟನೆಯ ನುಡಿಯನ್ನು ಬಂಡಿಪಾಳ್ಯ ಗಿರೀಶ್ ಮಾತನಾಡಿ ಕೋರೋನಾ ಸಂದರ್ಭದಲ್ಲಿ ನಾವೆಲ್ಲ ಭಯಪಟ್ಟು ಮನೆಯೊಳಗೆ ಜೀವಭಯದಿಂದ ಇರುತ್ತಿದ ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸಿ ಜನರ ಪ್ರಾಣವನ್ನು ಕಾಪಾಡುವ ಉದ್ದೇಶದಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಪೊಲೀಸ್ ಸಿಬ್ಬಂದಿಗಳು ಮತ್ತು ಸಮಾಜಸೇವಕರು ತುಂಬಾ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಆದ್ದರಿಂದ ಇಂಥವರನ್ನು ಗುರುತಿಸಿ ಈ ಸಂಘಟನೆಗಳು ಅಭಿನಂದಿಸಿದರು ವಂಥದ್ದು ಸಂತೋಷಕರ ಸಂಗತಿ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತಿಸಿ ಮಾತನಾಡಿದ ಎಂ ಲೋಕೇಶ್ ಪತ್ರಕರ್ತರು ಹಾಗೂ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಜಿಲ್ಲಾಧ್ಯಕ್ಷರು ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಮತ್ತು ೭೫ನೇ ಭಾರತ ಸ್ವತಂತ್ರ ಅಮೃತ ಮಹೋತ್ಸವದ ಶುಭಾಶಯಗಳು ತಿಳಿಸಿ ನಾವು ಮಂಡ್ಯ ಜಿಲ್ಲಾದ್ಯಂತ ಕೋವಿಡ್ ವಾರಿಯರ್ಸ್ಗಳನ್ನು ಅಭಿನಂದಿಸುತ್ತಿದ್ದರು ಅಭಿನಂದಿಸುತ್ತ ಬರುತ್ತಿದ್ದು ಅದರಂತೆ ಪಾಂಡವಪುರದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ತಾವು ಮಾಡಿದ ಕೆಲಸಕ್ಕೆ ಆದರಪೂರ್ವಕವಾಗಿ ಸಂಭಾವನೆಯ ದೊರಕಬಹುದು ಆದರೆ ತಾವು ನೀಡಿದ ಸಮಾಜದ ಕೆಲಸವನ್ನು ನಮ್ಮಂತ ಸಂಘಸAಸ್ಥೆಗಳು ಪ್ರೋತ್ಸಾಯಿಸಿವದು ಮತ್ತು ಅಭಿನಂದಿಸುವುದು ನಮ್ಮ ಕರ್ತವ್ಯವಾಗಿರುತ್ತದೆ ಕಾರ್ಯಕ್ರಮವನ್ನು ಯಾವುದೇ ರಾಜಕೀಯ ದುರುದ್ದೇಶ ಇಟ್ಟುಕೊಂಡು ಮಾಡುತ್ತಿಲ್ಲ ಕೆಲಸ ಮಾಡಿದವರಿಗೆ ಪ್ರೋತ್ಸಾಹಿಸಿದ್ದಾರೆ ಇನ್ನಷ್ಟು ಸಮಾಜ ಕೆಲಸ ಮಾಡುತ್ತಾರೆಂಬ ಆಶಯ ನಮ್ಮದು ಮತ್ತಷ್ಟು ಉತ್ತಮವಾದ ಸೇವೆ ಸಲ್ಲಿಸಿ ಎಂದು ಶುಭ ಹಾರೈಸಿದರು ಅಭಿನಂದಿಸಿದರು
ಡಾಕ್ಟರ್ ಕಣಿವೇ ಯೋಗೇಶ್ ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕ್ಟರ್ ಸಿಎ ಅರವಿಂದ ಪಾಂಡವಪುರ ತಾಲೂಕು ಆರೋಗ್ಯ ಅಧಿಕಾರಿಗಳು ವಹಿಸಿದರು

ಇದೇ ಸಂದರ್ಭದಲ್ಲಿ ಕೋರೋಣ ವಾರಿಯರ್ಸ್ ಗಳಾದ ಟೆಕ್ನಿಷಿಯನ್ಸ್ ಹಾಗೂ ಸಮಾಜಸೇವಕರಾದ ವಿಷ್ಣುವಿಠ್ಠಲ್ ವಿಷ್ಣು ಸೇನೆ ಸೇವಾ ಸಮಿತಿ ಜಿಲ್ಲಾಧ್ಯಕ್ಷರು ಪಾಂಡವಪುರ ಸುಕಂದ ರಾಜು ಎ ಎಸ್ ಐ ಪಾಂಡುಪುರ ಪೋಲಿಸ್ ಠಾಣೆ ಇವರನ್ನು ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಕಾರ್ಯಕ್ರಮದಲ್ಲಿ ಶ್ರೀನಿವಾಸ ನರಸಿಂಹನ್ ಗುರೂಜಿ ಬಂಡಿಪಾಳ್ಯ ಗಿರೀಶ್ ಪತ್ರಕರ್ತ ಎಂ ಲೋಕೇಶ ಸಮಾಜ ಡಾ ಕಣವೇ ಯೋಗೇಶ್ ಪ್ರದೀಪ ಚಿನಕುರಳಿ ಪತ್ರಕರ್ತ ರಾಘು ಹನುಮಂತು ವೆಂಕಟೇಶ್ ಫಾರ್ಮಸಿಸ್ಟ ವೆಂಕಟೇಶ್ ಹಾಗೂ ಆರೋಗ್ಯ ಇಲಾಖೆಯ ಟೆಕ್ನಿಷಿಯನ್ಸ್ ಭಾಗವಹಿಸಿದರು

ವರದಿ: ಲೋಕೇಶ ಮಳವಳ್ಳಿ

error: