May 23, 2022

Bhavana Tv

Its Your Channel

ಕಾಂಗ್ರೆಸ್ ಪಕ್ಷ ಹಾಗೂ ಚೆಲುವರಾಯಸ್ವಾಮಿಯನ್ನು ಬೆಂಬಲಿಸುವ ಮುಖಾಂತರ ನನ್ನನ್ನು ಗೆಲ್ಲಿಸಿ : ದಿನೇಶ್ ಗೂಳಿ ಗೌಡ

ದೇವಲಾಪುರ : ಸರ್ಕಾರ ಮತ್ತು ಪಕ್ಷ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ೨೫ ವರ್ಷಗಳಿಂದ ತೆರೆಮರೆಯಲ್ಲಿ ಕೆಲಸ ಮಾಡಿ ಪಕ್ಷ ನಿಷ್ಟೆಯಿಂದ ಕಾಂಗ್ರೆಸ್ ಪಕ್ಷ ನನಗೆ ಪಕ್ಷದ ಅಭ್ಯರ್ಥಿಯಾಗಿ ಮಾಡಿದ್ದು ತಾವುಗಳು ನನ್ನನ್ನು ಬೆಂಬಲಿಸಬೇಕೆAದು ಅಭ್ಯರ್ಥಿಯಾದ ದಿನೇಶ್ ಗೂಳಿ ಗೌಡ ಮಾತನಾಡಿದರು

ಅವರಿಂದು ದೇವಲಾಪುರದಲ್ಲಿ ಏರ್ಪಡಿಸಿದ್ದ ಹೋಬಳಿಯ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ನಾನು ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯನಿರ್ವಹಿಸಿದ್ದು ಮುಂದಿನ ದಿನಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮುಖಾಂತರ ಸಮಸ್ಯೆಗಳನ್ನು ಅರಿತು ಸ್ಥಳೀಯವಾಗಿ ನಿರಂತರ ಸೇವೆ ಮಾಡಲು ನನಗೆ ಅವಕಾಶ ನೀಡಬೇಕೆಂದು ಕೋರಿಕೊಂಡರು .

ಮಂಡ್ಯ ಜಿಲ್ಲೆಯಲ್ಲಿ ಪ್ರಭುದ್ಧ ಮತದಾರರಿದ್ದು ಪಕ್ಷದ ಅಭ್ಯರ್ಥಿ ಹೊಸಬರೇನಲ್ಲ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದರು ಹೆಸರು ಮಾತ್ರ ಹೊಸದಾಗಿದೆ ಸೇವೆ ಅನನ್ಯವಾಗಿ ದುಡಿದ ಯುವಕರಾದ ದಿನೇಶ್ ಗೂಳಿ ಗೌಡರನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಜಿಲ್ಲೆಯಲ್ಲಿ ಚೆಲುವರಾಯಸ್ವಾಮಿ ಅವರ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ತರಲು ಪಕ್ಷದ ಪ್ರತಿನಿಧಿಗಳು ಆಶೀರ್ವಾದ ಮಾಡಬೇಕೆಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣೇಗೌಡರು ಮಾತನಾಡಿದರು .

ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರನ್ನು ಗೆಲ್ಲಿಸುವ ಹೊಣೆ ಹಾಗೂ ಜವಾಬ್ದಾರಿ ನಮ್ಮ ಮೇಲಿದೆ. ಇವರು ಗೆದ್ದರೆ ಚಲುವರಾಯಸ್ವಾಮಿ ಅವರೆ ಗೆದ್ದಹಾಗೆ. ಇದರಿಂದ ಗ್ರಾಮಪಂಚಾಯಿತಿಯಲ್ಲಿರುವ ಹಲವಾರು ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಮಾತನಾಡಿದರು

ಕಾಂಗ್ರೆಸ್ ಯುವ ಮುಖಂಡ ಸಚ್ಚಿನ್ ಚಲುವರಾಯಸ್ವಾಮಿ, ಸುನೀಲ್ ಲಕ್ಷ್ಮಿಕಾಂತ್, ರವರುಗಳು ಮಾತನಾಡಿದರು. ಇದೇ ಸಂದರ್ಭದಲ್ಲಿ ವಸಂತ ಮಣಿ.ರಾಮೇಗೌಡ .ಮರಿಸ್ವಾಮಿ ನರಸಿಂಹಮೂರ್ತಿ ಕೃಷ್ಣೇಗೌಡ ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕರ ಗಳು ಹಾಜರಿದ್ದು ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಸನ್ಮಾನಿಸಲಾಯಿತು.ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದು ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ರಾಜೇಶ್ ಸ್ವಾಗತಿಸಿದರು.

ದೇವಲಾಪುರ ಜಗದೀಶ ನಾಗಮಂಗಲ

error: