ಮಂಡ್ಯ ಜಿಲ್ಲೆಯ ತೆಂಡೆಕೆರೆ ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದೆ. ಅಪರಿಚಿತ ನಾಲ್ವರು ಯುವಕರಿಂದ ಪೋಲಿಸರಿಗೆ ಬೆದರಿಕೆ. ಬುಧವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಬಂದ ಆಟೋ ತಪಾಸಣೆ ವೇಳೆ ಆಟೋದಲ್ಲಿದ್ದ ಯುವಕರಿಂದ ಬೆದರಿಕೆ. ನಮ್ಮ ಕೈಗೆ ಸೀಲ್ ಹಾಕಿದ್ದಾರೆ ನೋಡಿ ಎಂದು ತೋರಿಸಿ ಬೆದರಿಕೆ ಹಾಕಿದ್ದಾರೆ. ಯುವಕರನ್ನು ಹಿಡಿಯುವಷ್ಟರಲ್ಲಿ ಮೈಸೂರು ಕಡೆಯಿಂದ ಕೆ.ಆರ್.ಪೇಟೆಗೆ ಪ್ರವೇಶ ಪಡೆದಿದ್ದಾರೆ. ತಹಸೀಲ್ದಾರ್ ಎಂ.ಶಿವಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಅಪರಚಿತ ಯುವಕರಿಗಾಗಿ ಶೋಧ ಕಾರ್ಯ ನಡೆದಿದೆ, ಪಟ್ಟಣ ಠಾಣೆಯ ಎಸ್ಐ ಬ್ಯಾಟರಾಯಗೌಡ, ಗ್ರಾಮಾಂತರ ಠಾಣೆಯ ಎಸ್ಐ ಲಕ್ಷ್ಮಣ ಅವರಿಂದ ರಾತ್ರೋರಾತ್ರಿ ಹುಡುಕಾಟ. ತಾಲೂಕಿನ ಎಲ್ಲಾ ಕಡೆ ಚೆಕ್ ಪೋಸ್ಟ್ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ