April 24, 2024

Bhavana Tv

Its Your Channel

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಸರಿಯಾಗಿ ಕಲ್ಪಿಸುವಂತೆ ಮನವಿ

ಕಿಕ್ಕೇರಿ :–ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿ ಯುವ ಘಟಕದ ಮಂಡ್ಯ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಕಿಕ್ಕೇರಿ ಅವರು ಕಿಕ್ಕೇರಿ ಹೋಬಳಿಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಇಲ್ಲದೆ ಪರದಾಡುವುದನ್ನು ನೋಡಿ ಇಂದು “ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ” ಚನ್ನರಾಯಪಟ್ಟಣ ಪಟ್ಟಣದ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೋಕಿನ ಕಿಕ್ಕೇರಿ ಹೋಬಳಿಯ ಹಳ್ಳಿ ಹಳ್ಳಿಗಳಿಂದ ಸರಿ ಸುಮಾರು ೭೦೦ ವಿದ್ಯಾರ್ಥಿಗಳಷ್ಟು ಬೆಳಗ್ಗೆ ೮ ಗಂಟೆಯಿAದ ಸುಮಾರು ೯.೩೦ ರವರಿಗೆ ಶಾಲೆ ಕಾಲೇಜು ಗಳಿಗೆ ಹೋಗಲು ಕಿಕ್ಕೇರಿ ಬಸ್ ನಿಲ್ದಾಣದಲ್ಲಿ ನಿಂತು ಪರದಾಡುತ್ತಾರೆ, ವಿದ್ಯಾರ್ಥಿಗಳು ಪ್ರತಿ ದಿನ ದೂರವಾಣಿ ಮೂಲಕ ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿ(ನೋ) ಯುವ ಘಟಕ ಮಂಡ್ಯ ಜಿಲ್ಲಾಧ್ಯಕ್ಷರಾದ ಪೃಥ್ವಿರಾಜ್ ಕಿಕ್ಕೇರಿ ಅವರಿಗೆ ತಮ್ಮ ಕಷ್ಟಗಳನ್ನ ತಿಳಿಸುತ್ತಿದ್ದು, ಅದನ್ನ ಮನಗಂಡು ಇಂದು ರಾಜ್ಯಾಧ್ಯಕ್ಷರಾದ ಗಣೇಶ್ ಗೌಡ, ಸಂಸ್ಥಾಪಕ ಅಧ್ಯಕ್ಷ ದೀಪಕ್ ಅರವಿಂದ್ ಅವರ ಬಳಿ ಮಾತನಾಡಿ ಅವರಿಂದ ಸಲಹೆ ಪಡೆದುಕೊಂಡು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಘಟಕ ವ್ಯವಸ್ಥಾಪಕರನ್ನು ಭೇಟಿ ಮಾಡಿ ಕಿಕ್ಕೇರಿ ಹೋಬಳಿಯಿಂದ ನೂರಾರು ಮಕ್ಕಳು ಕಾಲೇಜಿಗೆ ಹಾಗೂ ಶಾಲೆಗಳಿಗೆ ಬರುತ್ತಾರೆ ಅವರಿಗೆ ನಿಮ್ಮ ಬಸ್ ಕಂಡಕ್ಟರ್ ಸರಿಯಾಗಿ ಸ್ಪಂದನೆ ಕೊಡುತ್ತಿಲ್ಲ, ವಿದ್ಯಾರ್ಥಿಗಳು ಎಂದರೆ ಪುಕ್ಕಟ್ಟೆ ಬರುವರು ಎಂಬ ದೋರಣೆ ಮಾತುಗಳನ್ನು ಆಡುವ ಮೂಲಕ ಅವರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ ದಯಮಾಡಿ ಈ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ನೂರಾರು ವಿದ್ಯಾರ್ಥಿಗಳ ಪರವಾಗಿ ಮನವಿ ಮಾಡಿದ್ದಾರೆ.

ಮಾತಿಗೆ ಸ್ಪಂದಿಸಿ ಮಾತಾಡಿದ ಘಟಕ ವ್ಯವಸ್ಥಾಪಕರು ನಿಮ್ಮ ಮನವಿಗೆ ಕೂಡಲೇ ಸ್ಪಂದಿಸಿ ಈ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಇದೆ ಸಂದರ್ಭದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿ(ನೋ)ಹಾಸನ ಜಿಲ್ಲಾಧ್ಯಕ್ಷರು ಸುನಿಲ್. ಚನ್ನರಾಯಪಟ್ಟಣ ತಾಲೋಕಿನ ಅಧ್ಯಕ್ಷರು ಕಿರಣ್ ಕುಮಾರ್. ಪವನ್ ಸೇರಿದಂತೆ ಅನೇಕ ಜನ ಹಾಜರಿದ್ದರು…

error: