April 25, 2024

Bhavana Tv

Its Your Channel

ಮಾತೃಭೂಮಿ ಸ್ತ್ರೀ ಮತ್ತು ಪುರುಷ ವೃದ್ದಾಶ್ರಮದ ಉದ್ಘಾಟನಾ ಕಾರ್ಯಕ್ರಮ

ಕೃಷ್ಣರಾಜಪೇಟೆ ಪಟ್ಟಣದ ಹೊಸವಳಲು ಸಮೀಪ ನೂತನವಾಗಿ ಆರಂಭಗೊAಡ ಮಾತೃಭೂಮಿ ಸ್ತ್ರೀ ಮತ್ತು ಪುರುಷ ವೃದ್ದಾಶ್ರಮದ ಉದ್ಘಾಟನಾ ಕಾರ್ಯಕ್ರಮವು ತ್ರೀ ಮೂರ್ತಿ ಸ್ವಾಮೀಜಿಗಳ ನೇತೃತ್ವಲ್ಲಿ ನೆಡೆಯಿತು

ಕೃಷ್ಣರಾಜಪೇಟೆ ಪಟ್ಟಣದ ಹೊಸಹೊಳಲು ಚಿಕ್ಕಕೆರೆ ಸಮೀಪ ಒಂದೇ ಮಾತರಂ ಸೇವಾ ಟ್ರಸ್ಟ್ ಅಧ್ಯಕ್ಷ ವಿಜಯಮ್ಮನಾಗಣ್ಣ ಮತ್ತು ವಂದೇಮಾತರA ಯುವ ಸಂಘ ಅಧ್ಯಕ್ಷ ಕೃಪಾ ಮಂಜುನಾಥ್ ನೇತೃತ್ವದಲ್ಲಿ,ಶ್ರೀ ಶ್ರೀ ಶ್ರೀ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿ ತೆಂಡೆಕೆರೆ ಶಾಖಾ ಮಠ, ಮತ್ತು ಶ್ರೀ ಶ್ರೀ ರುದ್ರಮುನಿ ಸ್ವಾಮಿಜಿ, ಪಂಚಭೂತೆಶ್ವರ ಸುಕ್ಷೇತ್ರ ಬೇಡದಹಳ್ಳಿ, ಶ್ರೀ ಸ್ವಂತತ್ರಚನ್ನವೀರ ಸ್ವಾಮಿಜಿ ಕಾಪನಹಳ್ಳಿ ಗವಿಮಠ, ಇವರುಗಳ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮುಖಾಂತರ ಮಾತೃಭೂಮಿ ಸ್ತ್ರೀ ಮತ್ತು ಪುರುಷ ವೃದ್ಧಾಶ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ರುದ್ರಮುನಿ ಸ್ವಾಮೀಜಿ ಮಾತನಾಡಿ ತನ್ನ ಮಕ್ಕಳ ಶ್ರೇಯಸ್ಸಿಗಾಗಿ ಹಗಲು ರಾತ್ರಿ ಅನ್ನದೆ ಪರಿಶ್ರಮದೊಂದಿಗೆ ಸದೃಢವಾಗಿ ಜೀವಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವ ತಂದೆ-ತಾಯಿಯರನ್ನು ಕೊನೆಕ್ಷಣದಲ್ಲಿ ಮಕ್ಕಳಂತೆ ನೋಡಿಕೊಳ್ಳುವ ಸಂದರ್ಭದಲ್ಲಿ ವೃದ್ಧಾಶ್ರಮಕ್ಕೆ ತಳ್ಳುವುದು ವಿಪರ್ಯಾಸ ನಮ್ಮ ಜನ್ಮಕ್ಕೆ ಕಾರಣರಾದ ತಂದೆ-ತಾಯಿಯರನ್ನು ಕೊನೆಕ್ಷಣದಲ್ಲಿ ಮಗುವಂತೆ ನೋಡಿಕೊಳ್ಳುವ ಭಾಗ್ಯ ನಮ್ಮದು ಎಂದು ಹಿತನುಡಿ ನುಡಿದು ಕಾರ್ಯಕ್ರಮಕ್ಕೆ ಮೆರಗು ತುಂಬಿದರು,

ನAತರ ಕಾರ್ಯಕ್ರಮ ಕುರಿತು ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಐನೋರಹಳ್ಳಿ ಮಲ್ಲೇಶ್ ರವರು ಕಳೆದ 15 ವರ್ಷಳಿಂದ ವಿಜಯ ನಾಗಣ್ಣನವರ ಕುಟುಂಬದವರು ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಮಾತೃಭೂಮಿ ವೃದ್ದಾಶ್ರಮವನ್ನು ನೆಡೆಸಿಕೊಂಡು ಹಸಿದ ಎಷ್ಟೂ ಜೀವಗಳಿಗೆ ಆಸರೇ ಹಾಗಿದ್ದಾರೆ. ಒಂದು ಕುಟುಂಬದ ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲದ ಸಮಾಜದಲ್ಲಿ ಸುಮಾರು 96 ಜನ ವೃದ್ದರನ್ನು ಅವರನ್ನು ತಮ್ಮ ಕುಟುಂಬದವರೆAದೇ ಭಾವಿಸಿ ಅವರ ಯೋಗ ಕ್ಷೇಮವನ್ನು ನೋಡಿಕೊಳ್ಳುತ್ತಾರೆ. ಮಕ್ಕಳ ಶ್ರೇಯಸ್ಸು ಬಯಸುವವರು ತಂದೆ ತಾಯಿಗಳು ಮಾತ್ರ ಅವರು ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಸಾಕಿ ಅವರ ಜೀವನ ರೂಪಿಸುತ್ತಾರೆ ಆದ್ರೆ ಕೆಲವರು ಅದನ್ನೆಲ್ಲಾ ಮರೆತು ವಯಸ್ಸಾದ ತಂದೆ ತಾಯಿಗಳನ್ನು ಆಶ್ರಮಕ್ಕೆ ಸೇರಿಸದೆ ಅವರ ಸೇವೆ ಮಾಡಿ ಅವರ ಆರ್ಶಿವಾದದಿಂದ ನಿಮ್ಮಗೆ ಶ್ರೆಯಸ್ಸು ಹೆಚ್ಚುವುದು ಎಂದರು..

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಮಹಾದೇವಿ ನಂಜುAಡೇಗೌಡ,ಮತ್ತು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕೆ ಎಸ್ ರಾಜೇಶ್,ಮಾಜಿ ಶಾಸಕ ಬಿ ಪ್ರಕಾಶ್, ಪುರಸಭೆ ಅಧ್ಯಕ್ಷರಾದ ಮಹಾದೇವಿ ನಂಜುAಡೇಗೌಡ, ಪುರಸಭೆ ಉಪಾಧ್ಯಕ್ಷೆ ಗಾಯಿತ್ರಿ,ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕೆ ಎಸ್ ರಾಜೇಶ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಾಂತವ್ವ, ಭೂಮಾಪಕನ ಇಲಾಖೆ ತಾಲೂಕು ಅಧ್ಯಕ್ಷ ಎಚ್.ಎಚ್. ಮಹೇಂದ್ರ, ಮಾಜಿ ಪುರಸಭೆ ಸದಸ್ಯೆ ಮಂಜುಳ ಚೆನ್ನಕೇಶವ, ರೈತ ಮುಖಂಡ ಕೃಷ್ಣೇಗೌಡ, ಅಲ್ಪಸಂಖ್ಯಾತರ ಮುಖಂಡರುಗಳಾದ ಇಲ್ಯಾಸ್ ಪಾಷ,ಸೈಯದ್ ಜಮೀರ್, ಸಲೂದ, ನವೀದ್ ಅಹಮದ್, ಮತ್ತಿತ್ತರರು ಇದ್ದರು

ವರದಿ: ಶಂಭು ಕಿಕ್ಕೇರಿ

error: