March 29, 2024

Bhavana Tv

Its Your Channel

ಅಂಬೇಡ್ಕರ್ ಪ್ರತಿಮೆಗೆ ತತ್ವಗಳ ಹಾಕಿಸಬೇಕೆ ವಿನಹ ವ್ಯಕ್ತಿಯ ಹೆಸರನಲ್ಲ -ಮಾಜಿ ಸಚಿವ ಚಲುವರಾಯಸ್ವಾಮಿ

ನಾಗಮಂಗಲ. ಇದೇ ಮುಂದಿನ ಭಾನುವಾರ ಜೆ.ಡಿ.ಎಸ್. ವರಿಷ್ಠ ಎಚ್. ಡಿ. ದೇವೇಗೌಡರು ನಾಗಮಂಗಲಕ್ಕೆ ಬರುತ್ತಿದ್ದು ಇದರ ಬಗ್ಗೆ ನಾನು ಮಾತನಾಡುವುದಿಲ್ಲ ಮಂಡ್ಯ ಜಿಲ್ಲಾ ಹಾಗೂ ತಾಲೂಕಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನಗಳು ಮತ್ತು ಅಂಬೇಡ್ಕರ್ ವಿಗ್ರಹವನ್ನು ಮೊದಲು ತಂದಿದ್ದು ನಾನು ಈ ಹಿಂದೆ ನಾಗಮಂಗಲ ಆಡಳಿತ ಸೌಧದಲ್ಲಿ ಅಂಬೇಡ್ಕರ್ ವಿಗ್ರಹ ಸ್ಥಾಪನೆ ಮಾಡಿದ್ದು ನಾನು ಕೆಲವು ಕಾನೂನು ತೊಡಕುಗಳಿಂದ ಆ ದಿನ ಉದ್ಘಾಟನಾ ಕಾರ್ಯಕ್ರಮವನ್ನು ಕೈ ಬಿಡಲಾಗಿತ್ತು ಆದರೆ ಅಂಬೇಡ್ಕರ್ ಪುತ್ಥಳಿಯ ಕೆಳಭಾಗದಲ್ಲಿ ಅಂಬೇಡ್ಕರ್ ತತ್ವಗಳನ್ನು ಅಳವಡಿಸಬೇಕೇ ಹೊರತು ವ್ಯಕ್ತಿಯ ಹೆಸರನ್ನು ಅಳವಡಿಸಬಾರದು ಎಂದರು ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ್ದು ನಾನು ಎಂದು ಹೇಳಿಕೊಳ್ಳುವ ಮಾಜಿ ಶಾಸಕರ ಹೆಸರನ್ನು ಹೇಳಬಯಸಿದೆ ನನ್ನ ಅಭಿವೃದ್ಧಿ ಶೂನ್ಯ ಎಂಬುವ ಶಾಸಕರು ಇತ್ತೀಚೆಗಷ್ಟೇ ಅಸ್ಪಶತೆ ಬಗ್ಗೆ ಮಾತನಾಡಿದ್ದು ನಿಮಗೆಲ್ಲರಿಗೂ ಗೊತ್ತು ಎಂದರು

ದಕ್ಷಿಣ ಪದವಿ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಮದು ಜಿ ಮಾದೇಗೌಡರ ಪರವಾಗಿ ಮಾಜಿ ಸಚಿವ ಚಲುವರಾಯಸ್ವಾಮಿ ಯವರು ಆದಿಚುಂಚನಗಿರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಮತಯಾಚನೆ ಮಾಡಿ ಕಾಂಗ್ರೆಸ್ ನ ಅಭ್ಯರ್ಥಿ ಮಧು ಜಿ ಮಾದೇಗೌಡರು ಅಪ್ಪನ ದಾರಿಯಂತೆ ವಿದ್ಯಾಸಂಸ್ಥೆಗಳನ್ನು ಕಟ್ಟಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಪ್ರಜ್ಞಾವಂತ ಮತದಾರರು ಅತಿ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಮತಯಾಚನೆ ಮಾಡಿದರು

ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ನಾಗಮಂಗಲದಲ್ಲಿ ನನ್ನ ಅಭಿವೃದ್ಧಿಯ ಬಗ್ಗೆ ಶೂನ್ಯ ಎಂಬುವ ಮಾಜಿ ಶಾಸಕರು ನನ್ನ ಅವಧಿಯ ಕೆಲಸಗಳಿಗೆ ಹೊಸ ಕಲ್ಲುಗಳಲ್ಲಿ ಹೆಸರುಗಳನ್ನು ಹಾಕಿಸಿಕೊಳ್ಳಲಿ ನನ್ನ ಕೆಲಸಗಳು ಜನರ ಹೃದಯದಲ್ಲಿದೆ ಯಾರ ಅವಧಿಯಲ್ಲಿ ನಾಗಮಂಗಲ ಅಭಿವೃದ್ಧಿ ಹೊಂದಿತ್ತು ಎಂಬುದು ಜನರಿಗೆ ಗೊತ್ತು ಹಾಲಿ ಶಾಸಕರು ಬೇಕಾದರೆ ಸಾರಿಕೊಂಡು ಬರಲಿ ಎಂದು ಹೇಳಿದರು

ಮಾಜಿ ಸಂಸದ ಶಿವರಾಮೇಗೌಡ ಮತ್ತು ಚೆಲುವರಾಯಸ್ವಾಮಿ ರವರ ಒಳ ಒಪ್ಪಂದದ ಬಗ್ಗೆ ಪ್ರಶ್ನಿಸಿದಾಗ ನಾನು ಯಾವುದೇ ರಾಜಕಾರಣಿಯನ್ನು ನಂಬಿಕೊAಡು ರಾಜಕೀಯ ಮಾಡುತ್ತಿಲ್ಲ ನಿಜವಾದ ಸ್ನೇಹಿತರೆ ಅವರಿಬ್ಬರು ಸ್ವಲ್ಪ ಗೊಂದಲದಿAದ ಈಗ ದೂರ ಆಗಿದ್ದಾರೆ ಅಷ್ಟೇ ನಾನು ಜನರನ್ನು ನಂಬಿ ರಾಜಕೀಯ ಮಾಡುತ್ತಿದ್ದೇನೆ ಹೊರತು ಯಾವುದೇ ರಾಜಕಾರಣಿಗಳನ್ನು ನಂಬಿ ಎಂದು ಕೂಡ ಚುನಾವಣೆ ನಡೆಸಿಲ್ಲ

ಇನ್ನು ಚುನಾವಣೆ ಕೊನೆಯ ವರ್ಷದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಾಲೂಕಿನ ವ್ಯಾಪ್ತಿಯಲ್ಲಿ ಶುಭಸಮಾರಂಭಗಳಿಗೆ ಆಗಮಿಸುತ್ತಿದ್ದು ಅವರೆಲ್ಲ ದೊಡ್ಡ ವ್ಯಕ್ತಿಗಳು ಏನು ಬೇಕಾದರೂ ಮಾಡಬಹುದು ತಾಲೂಕಿಗೆ ಕಲ್ಲಾದರು ಹಾಕಿಸಿಕೊಳ್ಳಲು ಅಚ್ಚೆ ಆದರೂ ಹಾಕಿಸಿಕೊಳ್ಳಲು ಬರಲಿ ಎಂದು ವ್ಯಂಗ್ಯವಾಗಿ ನುಡಿದರು

ವರದಿ: ಚಂದ್ರಮೌಳಿ ನಾಗಂಗಲ

error: