April 20, 2024

Bhavana Tv

Its Your Channel

ಕೃಷಿ ಇಲಾಖೆಯ ಮಾಹಿತಿ ಸಂಗ್ರಹದ ರಥಕ್ಕೆ ಚಾಲನೆ

ಕಿಕ್ಕೇರಿ:- ಕೃಷಿ ಇಲಾಖೆ ವತಿಯಿಂದ ಸಮಗ್ರ ಕೃಷಿ ಅಭಿಯಾನ ಹಾಗೂ ಇಲಾಖೆಗಳ ನಡೆಗೆ ರೈತರ ಮನೆ ಬಾಗಿಲಿಗೆ ಎಂಬ ಕೃಷಿ ಇಲಾಖೆಯ ಮಾಹಿತಿ ಸಂಗ್ರಹದ ರಥಕ್ಕೆ ಪೂಜೆ ಸಲ್ಲಿಸಿವ ಮೂಲಕ ಚಾಲನೆ ನೀಡಲಾಯಿತು

ಕೃಷ್ಣರಾಜಪೇಟೆ ತಾಲ್ಲೂಕು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಕಿಕ್ಕೇರಿ ಪಟ್ಟಣದ ಗ್ರಾಮ ಪಂಚಾಯತಿ ಎದರು ರೈತರಿಂದ ಮಾಹಿತಿ ಸಂಗ್ರಹ ಮತ್ತು ಇಲಾಖೆ ಇಂದ ರೈತರಿಗೆ ಸಿಗುವ ಸೌವಲತ್ತುಗಳ ಬಗ್ಗೆ ಮಾಹಿತಿ ವಾಹನಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆ.ಎಸ್ ಪ್ರಭಾಕರ್ ರವರು ಚಾಲನೆ ನೀಡಿದರು

ಕಾರ್ಯಕ್ರಮದಲ್ಲಿ ತೋಟಗಾರಿಕೆಯ ಅಧಿಕಾರಿ ರವಿಗೌಡ ಮಾತನಾಡಿ ತೋಟಗಾರಿಗೆ ಇಲಾಖೆಯಲ್ಲಿ ತೆಂಗು , ಬಾಳೆ, ಸೇರಿದಂತೆ ಹಲವು ಬೆಳೆಗಳ ಅಭಿವೃಧ್ಧಿಗಾಗಿ ಸಹಾಯ ಧನ ಸಿಗಲಿದ್ದು ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು

ನಂತರ ಕಿಕ್ಕೇರಿ ಪಟ್ಟಣದ ಕೃಷಿ ಇಲಾಖೆ ಅಧಿಕಾರಿ ಅಭಿಷೇಕ್ ಮಾತನಾಡಿ ನಮ್ಮ ಇಲಾಖೆಯಲ್ಲಿ ರೈತರಿಗೆ ಅಗತ್ಯ ಇರುವ ಯಂತ್ರೋಪಕರಣಗಳು, ಹಾಗೂ ಬಿತ್ತನೆ ಬೀಜಗಳು, ಸ್ಪ್ರಿಂಕ್ ಲೈನ್ ಪೈಪ್ ಗಳು, ಔಷಧಿ ಯಂತ್ರಗಳು ಸಪ್ಸಿಂಡಿಯಲ್ಲಿ ಸಿಗಲಿದೆ ಅಗತ್ಯ ಇರುವ ರೈತರು ಅರ್ಜಿ ಸಲ್ಲಿಕೆ ಮಾಡಿ ಪ್ರಯೋಜನ ಪಡೆಯಬಹುದು ಅಲ್ಲದೆ ಪಿ.ಎಂ ಕಿಸಾನ್ ಯೋಜನೆಯನ್ನು ನೊಂದಾಣಿ ಮಾಡಿಕೊಳ್ಳದ ರೈತರು ನೊಂದಾಣಿ ಮಾಡಿಕೊಳ್ಳುವಂತೆ ಮತ್ತು ರಾಗಿ ಬೆಲೆಗೆ ವಿಮೆ ಮಾಡಿಸುವ ಮೂಲಕ ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುನಿತಾ, ಲಕ್ಷ್ಮೀಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಗಂಗ್ಗೇನಹಳ್ಳಿ ರಘು (ಗುಂಡ) ಜೆ.ಡಿ ಎಸ್ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಶೇಖರ್, ಬಾಲಕೃಷ್ಣ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್, ಸಹಾಯಕ ತಾಂತ್ರಿಕ ನಿರ್ದೇಶಕಿ ವಿದ್ಯಾರಾಣಿ, ಲೆಕ್ಕ ಸಾಹಾಯಕಿ ಕಾವ್ಯ, ಅನುವುಗಾರರಾದ ಪುಟ್ಟಲಿಂಗೇಗೌಡ, ಕುಮಾರ್, ವಿಜಯ್ ಸೇರಿದಂತೆ ರೈತರು, ಸಾರ್ವಜನಿಕರುಗಳು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: