April 24, 2024

Bhavana Tv

Its Your Channel

ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ 2021-2022 ನೇ ಸಾಲಿನ ವಾರ್ಷಿಕ ಮಹಾ ಸಭೆ

ಪಾಂಡವಪುರ :- ಪಾಂಡವಪುರ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ 2021-2022 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಟಿಎಪಿಸಿಎಮ್‌ಎಸ್ ಸಭಾಂಗಣದಲ್ಲಿನಡೆಯಿತು…

ಸAಘದ ಅಧ್ಯಕ್ಷರು ಹಾಗೂ ಸಭಾಧ್ಯಕ್ಷರಾದ ಡಿ ಶ್ರೀನಿವಾಸ್ ರವರು ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸಂಘದ ಅಭಿವೃದ್ಧಿಗಾಗಿ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ನಾವು ಪ್ರಾಮಾಣಿಕವಾಗಿ ಸೇವೆ ಮಾಡುತ್ತಾ ಬಂದಿದ್ದೇವೆ ಸಂಘದ ಹಿತ ದೃಷ್ಟಿಯಿಂದ ಚರ್ಚೆಗಳು ನಡೆಯುವುದು ಒಳ್ಳೆಯದು ನಾವು ಹೊಸ ಆಡಳಿತ ಮಂಡಳಿ ಬಂದ ಮೇಲೆ ಎಲ್ಲಾ ನೌಕರ ವರ್ಗದವರಿಗೂ ಯುನಿಫಾರಂ ಅನ್ನು ನೀಡಿದ್ದೇವೆ ಮುಚ್ಚುವ ಹಂತದಲ್ಲಿದ್ದ ಜವಳಿ ಶಾಖೆಗೆ ಮರು ಜೀವ ನೀಡಿ ಹೊಸ ಹೊಸ ಮಾದರಿಯ ಎಲ್ಲಾ ರೀತಿಯ ಜವಳಿ ಖರೀದಿಸಿ ಕಡಿಮೆ ದರಕ್ಕೆ ಮಾರಾಟ ಮಾಡುವುದರ ಮೂಲಕ ಇಲ್ಲಿತನಕ 19.87 ಲಕ್ಷ ರೂಗಳ ವ್ಯವಹಾರ ಮಾಡಲಾಗಿದೆ ಹಿಂದೆ ನಾಲ್ಕು ವರ್ಷದಲ್ಲಿ ಮಾಡಿದ ಸಾಧನೆಯನ್ನು ಈ ಬಾರಿ 9 ತಿಂಗಳಲ್ಲಿ ಮಾಡಿದೆ ಖಾಸಗಿವರಲ್ಲಿ ಜಾಸ್ತಿ ಬೆಲೆ ಆದರೆ ನಮ್ಮಲ್ಲಿ ತೀರ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಸಂಘದ ಸದಸ್ಯರುಗಳು ಶೇರು ಡಿಫಿಡೆಂಟ್ ನೌಕರವರ್ಗದವರು ಬೋನಸ್ ಅನ್ನು ಉಪಯೋಗಿಸಿಕೊಂಡು ಶಿಬಿರದಲ್ಲೇ ಕಚೇರಿ ಬ್ಯಾಂಕ್ ಕಟ್ಟಡ ನವೀಕರಣವನ್ನು ಪ್ರಾರಂಭಿಸುತ್ತಿದ್ದೇವೆ ಅಕ್ಕಿ ಗಿರಣಿ ಮತ್ತು ರೈತ ಸಭಾಭವನಕ್ಕೆ ಪ್ರತ್ಯೇಕವಾಗಿ ಪ್ರವೇಶ ದ್ವಾರವನ್ನು ಮಾಡಲಿದ್ದೇವೆ. ಕಾಂಪೌAಡ್ ಒಳಗೆ ಸುಮಾರು 15 ರಿಂದ 20 ವ್ಯಾಪಾರ ಮಳಿಗೆಯನ್ನು ನಿರ್ಮಾಣ ಮಾಡೋದಕ್ಕೆ ಸುಮಾರು 55 ಲಕ್ಷ ರೂಪಾಯಿಗಳು ಅಂದಾಜು ಪಟ್ಟಿ ಮಾಡಲಾಗಿದೆ. ಅನುಮತಿಗಾಗಿ ಕಳಿಸಿಕೊಡಲು ಪ್ರಸ್ತಾಪ ಕೂಡ ಮಾಡುತ್ತಿದ್ದೇವೆ ಹಾಗೂ ಸಂಘದ ವ್ಯವಹಾರಕ್ಕಾಗಿ ಜಿಲ್ಲಾ ಬ್ಯಾಂಕಿನಿAದ ಪಡೆದ ಸಿಸಿಎಲ್ ಸಾಲದ ಮೇಲೆ ಬಡ್ಡಿಯನ್ನು ಜಾಸ್ತಿ ವಿಧಿಸುತ್ತಿದ್ದ ಬಗ್ಗೆ ಬ್ಯಾಂಕಿನ ವಿವರಿಸಿ ಕಡಿಮೆ ಬಡ್ಡಿ ವಿಧಿಸಲು ಆದೇಶ ಮಾಡಿಸುತ್ತೇವೆ ಹಾಗೂ ಸಂಘದ ಅಭಿವೃದ್ಧಿಗಾಗಿ ನಾವು ಆಡಳಿತ ಮಂಡಳಿಯವರು ಎಲ್ಲರೂ
ಶ್ರದ್ಧೆಯಿಂದ ಶ್ರಮಿಸುತ್ತಿದ್ದೇವೆ ಎಂದರು ಸಂಘದ ವಾರ್ಷಿಕ ಸಭೆಗೆ ಆಗಮಿಸಿ ಸಂಘದ ಅಭಿವೃದ್ಧಿಗೆ ಅನೇಕ ಸಲಹೆ ಸೂಚನೆಗಳನ್ನು ನೀಡಿದ ಸರ್ವಸ ಸದಸ್ಯರುಗಳಿಗೂ ಹಾಗೂ ಎಲ್ಲಾ ನನ್ನ ಪಿ ಎಸ್ ಸಿ ಎಸ್ ಸರ ಸಹಕಾರ ಸಂಘಗಳ ಅಧ್ಯಕ್ಷರು ಸಿಇಓ ಗಳನ್ನು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರುಗಳು ಹಾಗೂ ಜಿಲ್ಲಾ ತನಿಕಾ ಅಧಿಕಾರಿ ವರ್ಗದವರು ಸಂಘದ ಎಲ್ಲಾ ಆಡಳಿತ ಮಂಡ ನಿರ್ದೇಶಕರುಗಳು ಸಂಘದ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದಿಸುತ್ತಿದ್ದೇನೆ….
ಹಾಗೂ.. ಹಿಂದೆ ಇದ್ದ ಪ್ರಭಾರ ಮುಖ್ಯಾ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ತಿಮ್ಮೇಗೌಡರವರು ಸುಮಾರು 8 ರಿಂದ 10 ಲಕ್ಷದವರೆಗೆ ಹಣ ದುರುಪಯೋಗ ಪಡಿಸಿಕೊಂಡಿರುವುದು ಸಾಬೀತಾಗಿದೆ ಇವರ ಮೇಲೆ ಕೂಡ ನಾವು ದೂರನ್ನು ದಾಖಲಿಸಿದ್ದೇವೆ 21 ಅಂಶಗಳ ಒಳಕೊಂಡ ದಾಖಲೆಯ ಲೆಕ್ಕ ಪತ್ರಗಳು ಕೂಡ ನಾವು ಮೇಲಿನ ಅಧಿಕಾರಿಗಳಿಗೆ ದಾಖಲಿಸಿದ್ದೇವೆ… ಅವರ ಮೇಲೆ ತನಿಖಾ ಅಧಿಕಾರಿ ಯನ್ನು ನೇಮಕ ಮಾಡಲಾಗಿದೆ ಅವರು
ಇನ್ನು 3 ತಿಂಗಳಲ್ಲಿ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ..

ಈ ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯ ಕಾರ್ಯನಿರ್ವಾಹಕಧಿಕಾರಿ ನವೀನ್ ಕುಮಾರ್ ಎ ಎಸ್,
ಉಪಾಧ್ಯಕ್ಷರಾದ ತಿಬ್ಬಮ್ಮ ಪದ್ಮಮ್ಮ, ಎಸ್ ನಾಗರಾಜು, ರಾಮಕೃಷ್ಣ ಗೌಡ, ಎಸ್.ದಯಾನಂದ,
ವಿ. ಬೆಟ್ಟಸ್ವಾಮಿಗೌಡ, ಡಿ. ಶ್ರೀನಿವಾಸ್, ಸಿ ಜಿ ಮಾಲತಿ, ಕೆ ಅಸ್. ಯೋಗೀಶ್, ನರಸಿಂಹ ನಾಯ್ಕ,
ಜಯಶೀಲಮ್ಮ, ಕೆ. ಪುಷ್ಪವತಿ, ಗುರುಸ್ವಾಮಿ, ರವಿಕುಮಾರ್, ಮಧು, ಹಾಗೂ ಸಿಬ್ಬಂದಿ ವರ್ಗದವರು, ಷೇರು ದಾರರು ಭಾಗವಹಿಸಿದ್ದರು…

ವರದಿ:-ಟಿ ಎಸ್ ಶಶಿಕಾಂತ್

error: